ಮೆಲ್ಕಾರ್-ಕಲ್ಲಡ್ಕ: ಪಾದಚಾರಿ ಕ್ರಾಸಿಂಗ್ ಗುರುತು
Team Udayavani, Mar 10, 2021, 4:00 AM IST
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪಾದಚಾರಿಗಳು ಒಂದು ಬದಿಯಿಂದ ಇನ್ನೊಂದು ಬದಿಗೆ ರಸ್ತೆ ದಾಟಲು ಅನುಕೂಲವಾಗುವ ದೃಷ್ಟಿಯಿಂದ ಕಲ್ಲಡ್ಕ ಜಂಕ್ಷನ್ ಹಾಗೂ ಮೆಲ್ಕಾರ್ ಜಂಕ್ಷನ್ನಲ್ಲಿ ಮಂಗಳವಾರ ಹೆದ್ದಾರಿ ಪ್ರಾಧಿಕಾರದಿಂದ ಪಾದಚಾರಿಗಳು ದಾಟುವ ಗುರುತು ಹಾಕಲಾಗಿದೆ.
ಜಂಕ್ಷನ್ ಪ್ರದೇಶಗಳಲ್ಲಿ ಎಲ್ಲ ಕಡೆ ಯಿಂದಲೂ ವಾಹನಗಳು ಏಕಾಏಕಿ ನುಗ್ಗುವ ಕಾರಣದಿಂದ ಪಾದಚಾರಿಗಳಿಗೆ ಸಾಕಷ್ಟು ಗೊಂದಲ ಉಂಟಾಗುತ್ತಿದ್ದು, ಇದರಿಂದ ಅಪಘಾತದ ಆತಂಕವೂ ಎದು ರಾಗಿತ್ತು. ಹೀಗಾಗಿ ಪೊಲೀಸ್ ಇಲಾಖೆ ಮಾರ್ಕಿಂಗ್ ಮಾಡುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿತ್ತು. ಪ್ರಸ್ತುತ ಪಾದಚಾರಿಗಳಿಗೆ ಕ್ರಾಸಿಂಗ್ ವ್ಯವಸ್ಥೆ, ಕಲ್ಲಡ್ಕ ಭಾಗದಲ್ಲಿ ಚಾಲ ಕರನ್ನು ಎಚ್ಚರಿಸುವ ದೃಷ್ಟಿಯಿಂದ ಬ್ರೇಕ್ ಹಂಪ್ಸ್ಗಳಿಗೆ ಸ್ಟಡ್(ಕ್ಯಾಟ್ ಐ)ಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳಲ್ಲಿಯೂ ಮಾರ್ಕಿಂಗ್ ನಡೆಯಬೇಕಿದೆ.