ಲಂಕಾ ಅಥವಾ ಯುಎಇಯಲ್ಲಿ ಮಿನಿ ಐಪಿಎಲ್: ಗಾವಸ್ಕರ್
Team Udayavani, Jun 14, 2020, 5:30 AM IST
ಮುಂಬಯಿ: ಈ ಸಲದ ಐಪಿಎಲ್ ಪಂದ್ಯಾವಳಿಯನ್ನು ಲಂಕಾ ಅಥವಾ ಯುಎಇಯಲ್ಲಿ ಸಣ್ಣ ಮಟ್ಟದಲ್ಲಿ ಆಯೋಜಿಸಬಹುದು ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಸಲಹೆ ನೀಡಿದ್ದಾರೆ.
“ಸೆಪ್ಟಂಬರ್ ತಿಂಗಳಲ್ಲಿ ಶ್ರೀಲಂಕಾ ಅಥವಾ ಯುಎಇ ಯಲ್ಲಿ ಮಿನಿ ಐಪಿಎಲ್ ಪಂದ್ಯಾವಳಿ ನಡೆಸಲು ಪ್ರಯತ್ನಿಸಬಹುದು. ಆಗ ಭಾರತದಲ್ಲಿ ಮಾನ್ಸೂನ್ ಕಾಲವಾದ್ದರಿಂದ ಪಂದ್ಯಾವಳಿಯನ್ನು ನಡೆಸಲು ಕಷ್ಟವಾಗಲಿದೆ’ ಎಂದು ಗಾವಸ್ಕರ್ ಹೇಳಿದರು.
ತಂಡವೊಂದು 14ರ ಬದಲು 7 ಪಂದ್ಯಗಳನ್ನಾಡಿದರೆ ಸಾಕು ಎಂಬುದು ಅವರ ಸಲಹೆಯಾಗಿದೆ.