ಗಂಡ ದುಬೈನಲ್ಲಿ,ಪತ್ನಿ ಬೆಂಗಳೂರಲ್ಲಿ,ಆವಿನಹಳ್ಳಿಯಲ್ಲಿ ಸಾಗುವಳಿ! : ಶಾಸಕ ಹಾಲಪ್ಪ

ಸಾಗುವಳಿ ಮಾಡದೆ ಇದ್ದವರಿಂದಲೂ ಸಹ ಬಗರ್‌ಹುಕುಂ ಕೋರಿ ಅರ್ಜಿ

Team Udayavani, Jan 14, 2022, 3:30 PM IST

1-saddsa

ಸಾಗರ: ಗಂಡ ದುಬೈನಲ್ಲಿದ್ದಾನೆ, ಹೆಂಡತಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ತಾವು ಆವಿನಹಳ್ಳಿಯಲ್ಲಿ ಸಾಗುವಳಿ ಮಾಡುತ್ತಿದ್ದೇವೆ ಎಂದು 3 ಎಕರೆ ಜಮೀನು ಮಂಜೂರಿಗೆ ಬಗರ್‌ಹುಕುಂ ಅಡಿ ಅರ್ಜಿ ಸಲ್ಲಿಸಿದ್ದಾರೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಗಮನ ಸೆಳೆದರು.

ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಗರ್‌ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆವಿನಹಳ್ಳಿಯಲ್ಲಿ ಸಾಗುವಳಿ ಮಾಡದೆ ಇದ್ದವರು ಸಹ ಬಗರ್‌ಹುಕುಂ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಪ್ರಕರಣಗಳಿಂದ ನಿಜವಾಗಿಯೂ ಕೃಷಿ ನಡೆಸುತ್ತಿರುವ ರೈತರಿಗೆ ಅನ್ಯಾಯವಾಗುತ್ತದೆ. ಇಂತಹದ್ದಕ್ಕೆಲ್ಲ ಎಂದಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಘೋಷಿಸಿದರು.

ತಾಲೂಕಿನ 28 ರೈತರಿಗೆ ಶೀಘ್ರದಲ್ಲಿ ಸ್ಥಳ ಪರಿಶೀಲನೆ ನಡೆಸಿ ಹಕ್ಕುಪತ್ರ ನೀಡಲಾಗುತ್ತದೆ. ಜಮೀನು ಮಂಜೂರಾದ ರೈತರ ಜಮೀನುಗಳಿಗೆ ಇಂದಿನಿಂದಲೇ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸುಮಾರು 3 ಲಕ್ಷ ಹೆಕ್ಟೇರ್ ಸಿ ಎಂಡ್ ಡಿ ಲ್ಯಾಂಡ್ ಇದ್ದು ಅದನ್ನು ಬಿಡಿಸಿ ಅರ್ಜಿ ಸಲ್ಲಿಸಿದ ರೈತರಿಗೆ ನೀಡುವ ನಿಟ್ಟಿನಲ್ಲಿ ಕಂದಾಯ ಸಚಿವರು, ಅರಣ್ಯ ಸಚಿವರು ಮತ್ತು ಗೃಹ ಸಚಿವರ ಜೊತೆ ಸದ್ಯದಲ್ಲಿ ಸಭೆ ಕರೆಯಲಾಗುತ್ತದೆ. ಈಗಾಗಲೆ ಕಂದಾಯ ಮತ್ತು ಅರಣ್ಯ ಸಚಿವರ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದರು.

ಬಗರ್‌ಹುಕುಂ ಕಾಯ್ದೆಯಡಿ ಫಾರಂ ನಂ. 53 ಮತ್ತು 57 ಅಡಿ ಅರ್ಜಿ ಸಲ್ಲಿಸಿದ ಅರ್ಹರಿಗೆ ಜಮೀನು ಮಂಜೂರಾತಿಗೆ ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಮೀಸಲು ಅರಣ್ಯದ ನೋಟಿಸ್ ನೀಡಿ ತಮ್ಮನ್ನು ಒಕ್ಕಲೆಬ್ಬಿಸುತ್ತಾರೆ ಎನ್ನುವ ಭಯ ರೈತರಿಗೆ ಬೇಡ. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಜೊತೆಗೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಸಂಬಂಧ ಸಹ ಸದ್ಯದಲ್ಲಿಯೆ ಗಮನ ಹರಿಸಲಾಗುತ್ತದೆ ಎಂದು ಹೇಳಿದರು.

ಬಗರ್‌ಹುಕುಂ ಸಮಿತಿ ಸದಸ್ಯರಾದ ಆರ್.ಎಸ್.ಗಿರಿ, ರೇವಪ್ಪ ಕೆ.ಹೊಸಕೊಪ್ಪ, ಗಂಗಮ್ಮ, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಗ್ರೇಡ್-೨ ತಹಶೀಲ್ದಾರ್ ಪರಮೇಶ್ವರ ಟಿ. ಇನ್ನಿತರರು ಹಾಜರಿದ್ದರು.

ಟಾಪ್ ನ್ಯೂಸ್

1-arrest

ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಗೈಯ್ಯುತ್ತಿದ್ದ  ಏಳು ಜನರ ಬಂಧನ

ರಣಬೀರ್, ಸಂಜಯ್ ದತ್ ನಟನೆಯ “ಶಂಷೇರಾ” ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಿ…

ರಣಬೀರ್, ಸಂಜಯ್ ದತ್ ನಟನೆಯ “ಶಂಷೇರಾ” ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಿ…

16

ಕೊಡಗಿನಲ್ಲಿ ಬಿಜೆಪಿಯವರು ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವುದು ಕೆಟ್ಟ ಸಂಸ್ಕಾರ

15

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದು ವಿಕೃತಿ ಮೆರೆಯಲು ಪೊಲೀಸರ ನಿರ್ಲಕ್ಷ್ಯವೇ ಪ್ರಮುಖ ಕಾರಣ

ಕಡಲೂರ ‌ಕಣ್ಮಣಿಗಳು! ಟೀಸರ್‌ ಮತ್ತು ಹಾಡು ಬಿಡುಗಡೆ

ಕಡಲೂರ ‌ಕಣ್ಮಣಿಗಳು! ಟೀಸರ್‌ ಮತ್ತು ಹಾಡು ಬಿಡುಗಡೆ

C-T-ravi

ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಸಿ.ಟಿ.ರವಿ

1-ssadadsad

ಸಿದ್ದರಾಮಯ್ಯರಿಗೆ ಮತ್ತೆ ಕಪ್ಪು ಬಾವುಟ ಪ್ರದರ್ಶನ; ಬಿಜೆಪಿ-ಕಾಂಗ್ರೆಸ್ ತಳ್ಳಾಟ, ನೂಕಾಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4CONGRESS

ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ: ವಿಡಿಯೋ ವೈರಲ್‌

ಸಾವರ್ಕರ್‌ ಫ್ಲೆಕ್ಸ್‌ ವಿಚಾರಕ್ಕೆ ಪ್ರಕ್ಷುಬ್ಧಗೊಂಡಿದ್ದ ಶಿವಮೊಗ್ಗ ಸಹಜ ಸ್ಥಿತಿಗೆ 

ಸಾವರ್ಕರ್‌ ಫ್ಲೆಕ್ಸ್‌ ವಿಚಾರಕ್ಕೆ ಪ್ರಕ್ಷುಬ್ಧಗೊಂಡಿದ್ದ ಶಿವಮೊಗ್ಗ ಸಹಜ ಸ್ಥಿತಿಗೆ 

1-sddasd

ಧರ್ಮ ಸಂಘರ್ಷ ಶೀಘ್ರ ಇನ್ನಷ್ಟು ಉಲ್ಬಣ, ರಾಜಕೀಯ ಪಕ್ಷಗಳು ಇಬ್ಭಾಗ: ಕೋಡಿಮಠ ಶ್ರೀ

22garike

ಗರಿಕೆ ಹುಲ್ಲಿನ ಗಂಡಾಂತರ: ಸಾವಿನ ದವಡೆಯಿಂದ ಪಾರಾದ ಮಗು!

ಚಾಕು ಇರಿತ ಪ್ರಕರಣ: ಸಿದ್ದರಾಮಯ್ಯ ಹೇಳಿಕೆ ಇಂತಹ ಗಲಭೆಗಳಿಗೆ ಕುಮ್ಮಕ್ಕು- ಬಿ.ವೈ.ರಾಘವೇಂದ್ರ

ಚಾಕು ಇರಿತ ಪ್ರಕರಣ: ಸಿದ್ದರಾಮಯ್ಯ ಹೇಳಿಕೆ ಇಂತಹ ಗಲಭೆಗಳಿಗೆ ಕುಮ್ಮಕ್ಕು- ಬಿ.ವೈ.ರಾಘವೇಂದ್ರ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

1-arrest

ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಗೈಯ್ಯುತ್ತಿದ್ದ  ಏಳು ಜನರ ಬಂಧನ

ರಣಬೀರ್, ಸಂಜಯ್ ದತ್ ನಟನೆಯ “ಶಂಷೇರಾ” ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಿ…

ರಣಬೀರ್, ಸಂಜಯ್ ದತ್ ನಟನೆಯ “ಶಂಷೇರಾ” ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಿ…

17

ಬೆಳ್ತಂಗಡಿ ನಗರದ ಆಯಕಟ್ಟಿನ ಸ್ಥಳಗಳಲ್ಲಿಲ್ಲ ಸಿಸಿ ಕೆಮರಾ

16

ಕೊಡಗಿನಲ್ಲಿ ಬಿಜೆಪಿಯವರು ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವುದು ಕೆಟ್ಟ ಸಂಸ್ಕಾರ

15

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದು ವಿಕೃತಿ ಮೆರೆಯಲು ಪೊಲೀಸರ ನಿರ್ಲಕ್ಷ್ಯವೇ ಪ್ರಮುಖ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.