ಸೋಮವಾರಪೇಟೆ: 25 ಕೆ.ಜಿ. ತೂಕದ ಆಲಿಕಲ್ಲು !
Team Udayavani, Apr 28, 2022, 7:30 AM IST
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಂಗಳ ವಾರ ರಾತ್ರಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಅಲ್ಲಲ್ಲಿ ಹಾನಿಯಾಗಿದೆ.
ಕೆಲವು ಕಡೆ ಆಲಿಕಲ್ಲು ಸಹಿತ ಮಳೆ ಸುರಿದು ಹಸಿಮೆಣಸಿನ ಗಿಡಗಳಿಗೆ ಹಾನಿಯಾಗಿದೆ. ಕುಂದಳ್ಳಿ ಗ್ರಾಮದಲ್ಲಿ 25 ಕೆ.ಜಿ. ತೂಕದ ಆಲಿಕಲ್ಲು ಬಿದ್ದಿದ್ದು, ಬೆಳಗ್ಗೆ ತನಕ ಕರಗದೆ ಗ್ರಾಮಸ್ಥರಲ್ಲಿ ಆಚ್ಚರಿ ಮೂಡಿಸಿದೆ. ಗ್ರಾಮದ ಮಂಜುಳಾ ಮತ್ತು ದೃತನ್ ಬುಧವಾರ ಬೆಳಗ್ಗಿನ ಜಾವ ಕೃಷಿ ಭೂಮಿಗೆ ತೆರಳುವ ಸಂದರ್ಭ ಕಟ್ಟೆ ಮರದ ಸಮೀಪ ಗೋಚರಿಸಿದೆ. ಅನೇಕ ಕಡೆ ಕಾಫಿ ತೋಟದೊಳಗೆ ಮರಗಳು ನೆಲಕ್ಕುರುಳಿ ಹಾನಿಯಾಗಿದೆ.
ಕಾಫಿಗೆ ಪೂರಕ; ಮೆಣಸಿಗೆ ಮಾರಕ
ಮಳೆ ಸುರಿದಿರುವುದು ಕಾಫಿ ತೋಟಕ್ಕೆ ಉಪಯೋಗವಾಗಿದ್ದು, ಹಸಿಮೆಣಸಿನ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಕಿಬ್ಬೆಟ್ಟ ಗ್ರಾಮದ ಮುದ್ದ ಅವರ ಮನೆಯ ಹೆಂಚುಗಳು ಹಾರಿ ಹೋಗಿದ್ದು, ಗೋಡೆ ಬಿರುಕು ಬಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದು ವಿಕೃತಿ ಮೆರೆಯಲು ಪೊಲೀಸರ ನಿರ್ಲಕ್ಷ್ಯವೇ ಪ್ರಮುಖ ಕಾರಣ
ಯುವಕನನ್ನು ಕೊಂದು ಮೃತದೇಹವನ್ನು ಫ್ಲ್ಯಾಟ್ನಲ್ಲಿ ಬಚ್ಚಿಟ್ಟ ಪ್ರಕರಣ: ಇಬ್ಬರ ಬಂಧನ
ಮಡಿಕೇರಿ; ದೇಶ ಕಾಯುವವನ ಹೆತ್ತವರಿಗೇ ರಕ್ಷಣೆ ಇಲ್ಲ!
ಪ್ರೇಮ ಪ್ರಕರಣ; ತಿರುಗಲು ಬಂದ ವಿದ್ಯಾರ್ಥಿ- ವಿದ್ಯಾರ್ಥಿನಿಗೆ ಚೂರಿ ಇರಿತ: ಆರೋಪಿ ವಶಕ್ಕೆ
ಮಡಿಕೇರಿ: ಮರ ಬಿದ್ದು ವ್ಯಕ್ತಿ ಸಾವು