
ಗೋವಾ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಅಸ್ಸಾಂನಿಂದ ಹಣ: ಚೋಡಣಕರ್
11 ಶಾಸಕರನ್ನೂ ಪಕ್ಷಕ್ಕೆ ಎಳೆದುಕೊಳ್ಳುವುದು ಬಿಜೆಪಿಯ ಮೂಲ ಯೋಜನೆಯಾಗಿತ್ತು
Team Udayavani, Sep 22, 2022, 6:40 PM IST

ಪಣಜಿ: ಕಾಂಗ್ರೆಸ್ ನ 11 ಮಂದಿ ಶಾಸಕರನ್ನೂ ಪಕ್ಷಕ್ಕೆ ಎಳೆದುಕೊಳ್ಳುವುದು ಬಿಜೆಪಿಯ ಮೂಲ ಯೋಜನೆಯಾಗಿತ್ತು. ಅದಕ್ಕಾಗಿ ಅಪಾರ ಹಣವನ್ನೂ ನೀಡಲಾಗಿತ್ತು ಎಂದು ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಗಿರೀಶ್ ಚೋಡಣಕರ್ ಆರೋಪಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿ, ಗೋವಾದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ 8 ಶಾಸಕರು ಬಿಜೆಪಿ ಸೇರಿದ್ದು,ರಾಜಕಾರಣಿಯೊಬ್ಬರು ಕೆಲವು ಶಾಸಕರಿಗೆ ಹಣದ ಚೀಲಗಳನ್ನು ಬಹಿರಂಗಪಡಿಸಿದ್ದರು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಪಕ್ಷಾಂತರದ ಜವಾಬ್ದಾರಿ ನೀಡಿದ್ದರಿಂದ ಶಾಸಕರನ್ನು ಖರೀದಿಸಲು ಅಸ್ಸಾಂನಿಂದ ಹಣ ಬಂದಿದೆ ಎಂದರು.
ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಚುನಾವಣೆಯ ನಂತರ ಪಕ್ಷ ತೊರೆಯುವುದಿಲ್ಲ ಎಂದು ದೇವಸ್ಥಾನ ಮತ್ತು ಚರ್ಚ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಶಾಸಕರು ಪಕ್ಷ ಬದಲಿಸಿ ಬೇರೆ ಭಾಷೆ ಮಾತನಾಡುತ್ತಿದ್ದಾರೆ. ದಿಗಂಬರ ಕಾಮತ್ ರವರು ಅಪಾರ ದೈವ ಭಕ್ತರಾಗಿದ್ದರೂ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯ ಸಂದರ್ಭದಲ್ಲಿ ಕೆಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಣ ಪಡೆದಿರುವುದಾಗಿ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಮಾಜಿ ಶಾಸಕ ಆಗ್ನೆಲ್ ಫರ್ನಾಂಡೀಸ್ ನನ್ನ ಮೇಲೆ ಆರೋಪ ಮಾಡಿದ್ದು, ದೇವಸ್ಥಾನಕ್ಕೆ ಬರಲಿ ಎಂದು ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸಿದ್ದೇನೆ ಮತ್ತು ಅವರೇ ಸ್ಥಳವನ್ನು ನಿರ್ಧರಿಸಬೇಕು. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಚೋಡಣಕರ್ ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ಮಿತ್ರ್ ಕಾಲ್’ ಬಜೆಟ್ ನಲ್ಲಿ ಭಾರತದ ಭವಿಷ್ಯವಿಲ್ಲ: ಪ್ರಧಾನಿಗೆ ರಾಹುಲ್ ಗಾಂಧಿ ಟಾಂಗ್

ಕುಷ್ಟಗಿ ಕ್ಷೇತ್ರಕ್ಕೆ ರೆಡ್ಡಿ ಪಕ್ಷದಿಂದ ಸಿ.ಎಂ.ಹಿರೇಮಠ ಅಭ್ಯರ್ಥಿಯಾಗುವುದು ಬಹುತೇಕ ಖಚಿತ

ಅಪಪ್ರಚಾರಕ್ಕಾಗಿ ಬಿಬಿಸಿಗೆ ಚೀನಾದಿಂದ ಹಣಕಾಸು ನೆರವು? ಬಿಜೆಪಿ ಸಂಸದ ಮಹೇಶ್ ಜೇಠ್ಮಲಾನಿ

ಭಾರತ ಇಂದು ನಿರ್ಭೀತ ಮತ್ತು ನಿರ್ಣಾಯಕ, ಸದೃಢ ಸರ್ಕಾರ ಹೊಂದಿದೆ: ರಾಷ್ಟ್ರಪತಿ ಮುರ್ಮು

ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆಯೂ ಭಾರತದ ಬಜೆಟ್ ಮೇಲೆ ವಿಶ್ವದ ಚಿತ್ತ ನೆಟ್ಟಿದೆ; ಪ್ರಧಾನಿ ಮೋದಿ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
