ಮುಕೇಶ್ ಅಂಬಾನಿ ಮನೆ ವಿಳಾಸ ಕೇಳಿದವ ಅರೆಸ್ಟ್
Team Udayavani, Nov 9, 2021, 9:30 PM IST
ಮುಂಬೈ: ಪ್ರವಾಸಿಯೊಬ್ಬ ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯ ವಿಳಾಸವನ್ನು ಕೇಳಿದ್ದು, ಆತನ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಟ್ಯಾಕ್ಸಿಯಲ್ಲಿ ಸಂಚರಿಸುತ್ತಿದ್ದ ಸುರೇಶ್ ವಿಸಾಂಜಿ ಪಟೇಲ್ ಹೆಸರಿನ ವ್ಯಕ್ತಿ ಮುಕೇಶ್ ಅಂಬಾನಿಯವರ ಆಂಟಿಲಿಯಾಕ್ಕೆ ತೆರಳಲು ಚಾಲಕನಿಗೆ ತಿಳಿಸಿದ್ದಾನೆ.
ಚಾಲಕ ಬೇರೊಬ್ಬ ಟ್ಯಾಕ್ಸಿ ಚಾಲಕನ ಬಳಿ ವಿಳಾಸ ಕೇಳಿಕೊಂಡು ಅಲ್ಲಿಗೆ ಹೋಗಿದ್ದಾನೆ. ಈ ವಿಚಾರ ಪೊಲೀಸರಿಗೆ ತಿಳಿದುಬಂದಿದ್ದು, ಸುರೇಶ್‌ನನ್ನು ವಶಕ್ಕೆ ಪಡೆದು ವಿಚಾರಿಸಲಾಗಿದೆ.
ಇದನ್ನೂ ಓದಿ:‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಾಗಾರದ ವೇದಿಕೆಗೆ ಪುನೀತ್ ಹೆಸರು
ಆತ ಕುತೂಹಲಕ್ಕಾಗಿ ಆ ಮನೆ ನೋಡಲು ತೆರಳಿದ್ದಾಗಿ ಹೇಳಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಯಾಕ್ಸಿ ಚಾಲಕನನ್ನೂ ವಿಚಾರಣೆಗೆ ಒಳಪಡಿಸುವುದಾಗಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಂದು ಪರ್ಸೆಂಟ್ ಲಂಚ: ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ ಮಾನ್
ಜ್ಞಾನವಾಪಿ ಮಸೀದಿ ವಿವಾದ: ಮೊದಲಿಗೆ ಮುಸ್ಲಿಂ ಪರ ಅರ್ಜಿ ವಿಚಾರಣೆ
ಭಾರತದಲ್ಲಿ 24ಗಂಟೆಯಲ್ಲಿ 1,675 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಅಲ್ಪ ಏರಿಕೆ
ಕುತುಬ್ ಮಿನಾರ್ ಉತ್ಖನನಕ್ಕೆ ಅವಕಾಶ ನೀಡಲ್ಲ: ಕೋರ್ಟ್ ಗೆ ಎಎಸ್ಐ ಲಿಖಿತ ಉತ್ತರ
ದೆಹಲಿ: ಏಳನೇ ಮಹಡಿಯಿಂದ ಜಿಗಿದು ಐಟಿ ಸಚಿವಾಲಯದ ವಿಜ್ಞಾನಿ ಆತ್ಮಹತ್ಯೆ