ಬರ್ತ್ ಡೇ ಸಂಭ್ರಮದಲ್ಲಿ ಕಾಲು ತಾಗಿತೆಂದು ಸ್ನೇಹಿತನನ್ನೇ ಕೊಂದರು

Team Udayavani, Sep 30, 2019, 3:52 PM IST

ಬೆಳಗಾವಿ: ಬರ್ತ್ ಡೇ ಸೆಲೆಬ್ರೇಷನ್ ಮುಗಿಸಿ ಡ್ಯಾನ್ಸ್ ಮಾಡುತ್ತಿದ್ದಾಗ ಕಾಲು ತಾಗಿತೆಂಬ ಸಿಟ್ಟಿನಿಂದ ಮೂವರು ಸೇರಿ ಸ್ನೇಹಿತನ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ನಗರದ ಆರ್‌ಟಿಒ ವೃತ್ತದ ಬಳಿಯ ಲಾಡ್ಜ್ ನಲ್ಲಿ ನಡೆದಿದೆ.

ಮೂಲತಃ ಗೋಕಾಕ ತಾಲೂಕಿನ ಘಟಪ್ರಭಾದ ವಿನಾಯಕ ಚಂದ್ರಕಾಂತ ರಾಯಬಾಗಕರ(ಕಲಾಲ) (21) ಎಂಬ ಯುವಕನನ್ನು ಕೊಲೆ ಮಾಡಲಾಗಿದೆ.

ಆರ್‌ಟಿಒ ವೃತ್ತದ ಬಳಿ ಇರುವ ಸಾಯಿ ಲಾಡ್ಜ್ ನಲ್ಲಿ ನಾಲ್ವರು ಕೆಲಸ ಮಾಡುತ್ತಿದ್ದರು. ಶಶಿಧರ ಎಂಬಾತನ ರವಿವಾರ ರಾತ್ರಿ ಜನ್ಮದಿನ ಇತ್ತು. ಪಾರ್ಟಿ ಮಾಡಿ, ಕುಡಿದ ಮತ್ತಿನಲ್ಲಿ ನಾಲ್ವರೂ ಡ್ಯಾನ್ಸ್ ಮಾಡುತ್ತಿದ್ದರು. ಆಗ ವಿನಾಯಕನ ಕಾಲು ಮತ್ತೊಬ್ಬ ಸ್ನೇಹಿತನಿಗೆ ತಾಗಿದೆ. ಆಗ ಮಾತಿಗೆ ಮಾತು ಬೆಳೆದು ಜಗಳವಾಡಿಕೊಂಡಿದ್ದಾರೆ. ಉಡುಪಿಯ ನವೀನ, ಶಿವಾಜಿ ನಗರದ ಅಮೀತ್ ಹಾಗೂ ಶಶಿಧರ ಸೇರಿ ಸುಮಾರು 1.30ರ ಸುಮಾರಿಗೆ ಬಾಟಲಿಯಿಂದ ಹೊಡೆದಿದ್ದಾರೆ. ಶೌಚಾಲಯದಲ್ಲಿಯೇ ವಿನಾಯಕ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ.

ಸೋಮವಾರ ಬೆಳಗ್ಗೆ ಎಂದಿನಂತೆ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಮಾಲೀಕನ ಮಗ ಬಂದು ವಿನಾಯಕನ ಬಗ್ಗೆ ವಿಚಾರಿಸಿದ್ದಾರೆ. ಆಗ ಅಮಿತ ಹಾಗೂ ನವೀನ ಯಾರಿಗೂ ಗೊತ್ತಿಲ್ಲದಂತೆ ನಾಟಕವಾಡಿದ್ದಾರೆ. ಸಂಶಯ ಬಂದು ಶೌಚಾಲಯ ತೆರೆದು ನೋಡಿದಾಗ ಮೃತಯದೇಹ ಬಿದ್ದಿರುವುದು ಗೊತ್ತಾಗಿದೆ. ಮಾರ್ಕೆಟ್ ಎಸಿಪಿ ಎನ್.ವಿ. ಭರಮಣಿ, ಇನ್ಸಪೆಕ್ಟರ್ ವಿಜಯ ಮುರಗುಂಡಿ ಭೇಟಿ ನೀಡಿ ಅಮಿತ ಹಾಗೂ ನವೀನನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ