Udayavni Special

ರೈತರಿಗೆ ಅನ್ಯಾಯವಾಗಲು ಬಿಡಲ್ಲ: ಸಚಿವ ಮುರುಗೇಶ ನಿರಾಣಿ ಅಭಯ

Team Udayavani, Jan 17, 2021, 2:07 PM IST

ರೈತರಿಗೆ ಅನ್ಯಾಯವಾಗಲು ಬಿಡಲ್ಲ: ಸಚಿವ ಮುರುಗೇಶ ನಿರಾಣಿ ಅಭಯ

ಬಾಗಲಕೋಟೆ: ರೈತರಿಂದಲೇ ನಾನು ಬೆಳೆದವನು. ರೈತರ ಅನುಕೂಲಕ್ಕಾಗಿ ಬಾದಾಮಿ ತಾಲೂಕಿನಲ್ಲಿ ಮೂರು ಸಕ್ಕರೆ ಕಾರ್ಖಾನೆ ಆರಂಭಗೊಂಡಿವೆ. ಕೇದಾರನಾಥ ಶುಗರ್ನಿಂದ ರೈತರಿಗೆ ಬರಬೇಕಿರುವ ಬಾಕಿ ಹಣ ಕೊಡಿಸುವ ವಿಷಯದಲ್ಲಿ ನಾನೂ ಪ್ರಾಮಾಣಿಕ ಪ್ರಯತ್ನ ಮಾಡುವೆ. ರೈತರಿಗೆ ಅನ್ಯಾಯವಾಗಲು ಬಿಡಲ್ಲ ಎಂದು ನೂತನ ಸಚಿವ ಮುರುಗೇಶ ನಿರಾಣಿ ಹೇಳಿದರು.

ಬಾದಾಮಿ ತಾಲೂಕು ಕೆರಕಲಮಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇದಾರನಾಥ ಶುಗರ್ ಅನ್ನು ನ್ಯಾಯ ಮಂಡಳಿಯಲ್ಲಿ ಕಾನೂನು ಬದ್ಧವಾಗಿ ಖರೀದಿ ಮಾಡಲಾಗಿದೆ. 10 ವರ್ಷದಿಂದ ಬಂದ್‌ ಆಗಿದ್ದ ಈ ಕಾರ್ಖಾನೆ ಪುನಾರಂಭಿಸಿದ್ದು, ಈ ಭಾಗದ ರೈತರಿಗೆ ಅನುಕೂಲವಾಗಿದೆ. ಎಷ್ಟೋ ಜನ ರೈತರು, ಈ ಕಾರ್ಖಾನೆ ಆರಂಭಿಸಿದ್ದಕ್ಕೆ ಸಂಭ್ರಮಪಟ್ಟಿದ್ದಾರೆ. ಆದರೆ,
ಕಾರ್ಖಾನೆಗೆ ಕಬ್ಬು ಕೊಡದ ಕೆಲವರು ಹೋರಾಟ ಮಾಡುತ್ತಿದ್ದಾರೆ ಎಂದರು.

ಅಭಿವೃದ್ಧಿಗೆ ಪೂರಕ: ನನಗೆ ಸಚಿವ ಸ್ಥಾನ ನೀಡಲು ಕಾರಣರಾದ ಮುಖ್ಯಮಂತ್ರಿ, ಪಕ್ಷದ ಕೇಂದ್ರ ಹಾಗೂ ರಾಜ್ಯ ನಾಯಕರು, ಈ ಭಾಗದ ಎಲ್ಲ ಹಿರಿಯರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಸಚಿವ ಸ್ಥಾನ ನೀಡುವ ವಿಷಯದಲ್ಲೂ ಯಾರೂ ವಿರೋಧ ಮಾಡಿಲ್ಲ. ಬಾಗಲಕೋಟೆ ಅಷ್ಟೇ ಅಲ್ಲದೇ ಅಕ್ಕ-ಪಕ್ಕದ ಜಿಲ್ಲೆಯ ಎಲ್ಲ ನಮ್ಮ ಪಕ್ಷದ ಶಾಸಕರೂ ಸಹಕಾರ ನೀಡಿದ್ದಾರೆ.
ಜಿಲ್ಲೆಗೆ ಮತ್ತೂಂದು ಸಚಿವ ಸ್ಥಾನ ಸಿಕ್ಕಿರುವುದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು. ದೇಶದಲ್ಲಿ ಸಕ್ಕರೆ ಉತ್ಪಾದನೆ ಮಾಡುವ ಉದ್ಯಮ ಸಮೂಹಗಳಲ್ಲಿ ಎಂಆರ್‌ಎನ್‌ ಉದ್ಯಮ ಸಮೂಹ 3ನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಮೊದಲ
ಸ್ಥಾನದಲ್ಲಿದೆ. ಅಲ್ಲದೇ ಸಧ್ಯ 8.50 ಲಕ್ಷ ಎಥೆನಾಲ್‌ ಉತ್ಪಾದನೆಯಾಗುತ್ತಿದ್ದು, ಅದನ್ನು 26 ಲಕ್ಷ ಲೀಟರ್‌ ಗೆ ಹೆಚ್ಚಿಸುವ ಕಾರ್ಯಕ್ಕೆ ಕೇಂದ್ರ ಸಚಿವ ಅಮಿತ್‌ ಶಾ ರವಿವಾರ ಚಾಲನೆ ನೀಡಲಿದ್ದಾರೆ. ಅವರೊಂದಿಗೆ ಸಿಎಂ, ಕೇಂದ್ರ ಹಾಗೂ ರಾಜ್ಯದ ಹಲವರು ಸಚಿವರು ಆಗಮಿಸಲಿದ್ದಾರೆ ಎಂದರು.

ಇದನ್ನೂ ಓದಿ:ಕೊರೊನಾ, ಹಳದಿ ನೊಣಕ್ಕೆ ನಲುಗಿದ ಅಲ್ಫೋನ್ಸೋ: ಧೈರ್ಯ ಕಳೆದುಕೊಂಡ ದಲ್ಲಾಳಿಗಳು

ಗ್ಯಾಸ್‌-ಪೆಟ್ರೋಲ್‌ ಉತ್ಪಾದನೆ: ಆತ್ಮನಿರ್ಭರ ಯೋಜನೆಯಡಿ ದೇಶೀಯವಾಗಿ ಎಲ್ಲ ಉತ್ಪನಗಳಾಗಬೇಕು ಎಂಬುದು ನನ್ನ ಹೆಮ್ಮೆಯ ಪ್ರಧಾನಿ ಮೋದಿ ಅವರ ಆಶಯ. ಅವರ ಆಶಯ-ಕಲ್ಪನೆಯಂತೆ ಎಂಆರ್‌ಎನ್‌ ಸಮೂಹ ಮುನ್ನಡೆಯುತ್ತಿದೆ. ನಮ್ಮಲ್ಲಿ ಅಡುಗೆ ಅನಿಲ, ಅತ್ಯುತ್ತಮ ಗುಣಮಟ್ಟದ ಪೆಟ್ರೋಲ್‌ ಉತ್ಪಾದನೆಯೂ ಆಗಲಿದೆ. ಸಕ್ಕರೆ ಉತ್ಪಾದನೆಯ ಜತೆಗೆ
ಉಪ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಇದರಿಂದ ಆದಾಯ ಹೆಚ್ಚಲಿದ್ದು, ಶೇ.70ರಷ್ಟು ಆದಾಯ ರೈತರಿಗೆ ನೀಡಲು ನಮ್ಮ ಉದ್ಯಮ ಸಮೂಹ ನಿರ್ಧರಿಸಿದೆ. ಇದರಿಂದ ರೈತರ ಆದಾಯವೂ ದ್ವಿಗುಣಗೊಳ್ಳಲಿದೆ ಎಂದು ತಿಳಿಸಿದರು.

ರೈತರಿಗೆ ವರದಾನ: ಈ ಭಾಗದಲ್ಲಿ ಎಥೆನಾಲ್‌ ಕಾರ್ಖಾನೆ  ಸ್ಥಾಪಿಸುವುದರಿಂದ ರೈತರಿಗೆ ವರದಾನವಾಗಲಿದೆ. ರೈತರ ಉತ್ಪನಗಳು ತಕ್ಷಣಕ್ಕೆ ಮಾರಾಟವಾಗದಿದ್ದರೆ ಹಾಳಾಗುತ್ತವೆ. ಹಾನಿಯಾದ ಉತ್ಪನ್ನಗಳಿಂದಲೂ ಎಥೆನಾಲ್‌ ಉತ್ಪಾದನೆಗೆ ಅವಕಾಶವಿದೆ. ಹೈಟೆಕ್‌ ತಂತ್ರಜ್ಞಾನದೊಂದಿಗೆ ಈ ಕಾರ್ಖಾನೆ ಆರಂಭಗೊಳ್ಳುತ್ತಿದೆ. ಜಿಲ್ಲೆಯ ರೈತರಿಗೆ ಇದೊಂದು ಸುವರ್ಣ ಅವಕಾಶವೆಂದು ಹೇಳಿದರು.

ಟಾಪ್ ನ್ಯೂಸ್

women’s ipl

ಈ ಬಾರಿಯ ಮಹಿಳಾ ಐಪಿಎಲ್ ಗೆ ಮೂರು ತಂಡಗಳು ಮಾತ್ರ!

ವರನಟನ ಸ್ಮರಿಸಿದ ಅಭಿಮಾನಿಗಳು

ವರನಟನ ಸ್ಮರಿಸಿದ ಅಭಿಮಾನಿಗಳು

ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಲಾಕ್‌ಡೌನ್‌ ಮದ್ದಲ್ಲ : ಪರೀಕ್ಷೆ, ಲಸಿಕೆ ಹೆಚ್ಚಿಸಿ: ತಜ್ಞರು, ವೈದ್ಯರ ಸಲಹೆ

ಲಾಕ್‌ಡೌನ್‌ ಮದ್ದಲ್ಲ : ಪರೀಕ್ಷೆ, ಲಸಿಕೆ ಹೆಚ್ಚಿಸಿ: ತಜ್ಞರು, ವೈದ್ಯರ ಸಲಹೆ

ನಮ್ಮ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ನಮ್ಮ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಸಾರಿಗೆ ನೌಕರರ ಮುಷ್ಕರ: ಯುಗಾದಿ ಬಳಿಕ ಸಂಧಾನ?

ಸಾರಿಗೆ ನೌಕರರ ಮುಷ್ಕರ: ಯುಗಾದಿ ಬಳಿಕ ಸಂಧಾನ?

MUST WATCH

udayavani youtube

Kanchipuram ಸೀರೆಗಳ ನಿಮ್ಮ Favorite Spot

udayavani youtube

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

udayavani youtube

ಸಾವಿರ ಮಂದಿಗೆ ಕೇವಲ 2 ಫ್ಯಾನ್!

udayavani youtube

ಸಾರಿಗೆ ನೌಕರರ ಕುಟುಂಬದ ಸದಸ್ಯರಿಂದ ತಟ್ಟೆ, ಲೋಟ ಪ್ರತಿಭಟನೆ

udayavani youtube

ಇಲ್ಲಿ ಮನುಷ್ಯರಂತೆ ಕೋಣಗಳಿಗೂ ಇದೆ Swimming Pool

ಹೊಸ ಸೇರ್ಪಡೆ

women’s ipl

ಈ ಬಾರಿಯ ಮಹಿಳಾ ಐಪಿಎಲ್ ಗೆ ಮೂರು ತಂಡಗಳು ಮಾತ್ರ!

ವರನಟನ ಸ್ಮರಿಸಿದ ಅಭಿಮಾನಿಗಳು

ವರನಟನ ಸ್ಮರಿಸಿದ ಅಭಿಮಾನಿಗಳು

ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.