“ಅನರ್ಹ ಶಾಸಕರನ್ನು ಸೋಲಿಸುವುದೇ ನನ್ನ ಗುರಿ’

Team Udayavani, Nov 15, 2019, 5:10 AM IST

ಬೆಂಗಳೂರು: ಮೈತ್ರಿ ಸರಕಾರ ಪತನಗೊಳ್ಳಲು ಕಾರಣರಾದ ಹದಿನೈದು ಅನರ್ಹ ಶಾಸಕರನ್ನು ಸೋಲಿಸುವುದೇ ನನ್ನ ಮೊದಲ ಗುರಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಪತ್ರಕರ್ತರ ಜತೆ ಮಾತನಾಡಿದ ಅವರು, ನನಗೆ ಕಾಂಗ್ರೆಸ್‌ ಅಥವಾ ಸಿದ್ದರಾಮಯ್ಯ ಅವರು ಶತ್ರು ಅಲ್ಲ. ಸಿದ್ದರಾಮಯ್ಯ ಅವರು ಏನು ಬೇಕಾದರೂ ಹೇಳಿ ಕೊಳ್ಳಲಿ, ರಾಜಕೀಯವಾಗಿ ನಮಗೆ ವೈರತ್ವ ಇರಬಹುದು. ಆದರೆ ಉಪ ಚುನಾವಣೆಯಲ್ಲಿ ಅನರ್ಹರನ್ನು ಸೋಲಿಸಲು ಏನೆಲ್ಲ ಕಾರ್ಯತಂತ್ರ ಮಾಡಬಹುದೋ ಅವೆಲ್ಲವನ್ನೂ ಮಾಡು ತ್ತೇನೆ ಎಂದು ತಿಳಿಸಿದರು.

ಜೆಡಿಎಸ್‌ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವುದು ಮೊದಲ ಆದ್ಯತೆ. ನಮ್ಮ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಿಲ್ಲದ ಕಡೆ ಬಿಜೆಪಿ ಟಿಕೆಟ್‌ ಪಡೆದಿರುವ ಅನರ್ಹರನ್ನು ಸೋಲಿಸುತ್ತೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಆದರೆ ಕಾಂಗ್ರೆಸ್‌-ಬಿಜೆಪಿ ಜತೆ ಒಪ್ಪಂದದ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಶರತ್‌ ಬಚ್ಚೇಗೌಡರಿಗೆ ಬೆಂಬಲ ಸೂಚಿಸಿದ ತತ್‌ಕ್ಷಣ ಏನೇನೋ ವ್ಯಾಖ್ಯಾನ ಬರುತ್ತಿದೆ. ನಮ್ಮ ಸಮುದಾಯ ಎಂಬ ಕಾರಣಕ್ಕೆ ಬೆಂಬಲ ಸೂಚಿಸಿಲ್ಲ. ಅವರು ಮೊದಲಿನಿಂದಲೂ ಜನತಾ ಪರಿವಾರ, ಕೆಲವೊಂದು ವ್ಯತ್ಯಾಸ ಇರುವುದರಿಂದ ಬೇರೆ ಆಗಿದ್ದಾರೆ. ನಾನು ಕಳೆದ ಒಂದು ವಾರದಿಂದ ಶರತ್‌ ಸಂಪರ್ಕದಲ್ಲಿದ್ದೇನೆ. ಅವರು ಗೆಲ್ಲುವುದು ಖಚಿತ, ಬಯಸಿದರೆ ನಾನೂ ಒಂದು ದಿನ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಪಕ್ಷದ ಶಕ್ತಿ ನೋಡಿಕೊಂಡು ಮುಂದಿನ ಭವಿಷ್ಯ ನೋಡಿಕೊಂಡು ನಾನೂ ಕಾರ್ಯತಂತ್ರ ರೂಪಿಸುತ್ತೇನೆ. ನನ್ನೆಲ್ಲ ಶ್ರಮ ಹಾಕಿ ಪಕ್ಷದ ಅಭ್ಯರ್ಥಿಗಳ ಪರ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ