ನಾಗರಹೊಳೆಯಲ್ಲಿ ವ್ಯಾಘ್ರ ಕಾಳಗ
ಹುಲಿ ಕಂಡು ಸಫಾರಿಗೆ ತೆರಳಿದ್ದವರ ದಿಲ್ ಖುಷ್
Team Udayavani, Aug 10, 2021, 10:21 AM IST
ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಉತ್ತಮ ಮಳೆಯಾಗಿದ್ದು. ವನ್ಯಪ್ರಾಣಿಗಳು ಸ್ವಚ್ಚಂದವಾಗಿ ವಿಹರಿಸುತ್ತಿವೆ. ಸೋಮವಾರದಂದು ಕುಂತೂರು ಕೆರೆ ಬಳಿ ಎರಡು ವ್ಯಾಘ್ರಗಳ ಕಾಳಗವನ್ನು ಜೆಎಲ್ ಆರ್ ವಾಹನದಲ್ಲಿ ಸಫಾರಿಗೆ ತೆರಳಿದ್ದವರು ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ್ದಾರೆ.
ನಾಗರಹೊಳೆ ಉದ್ಯಾನವದ ಅಧಿಕಾರಿಗಳು ಹಾಗೂ ಇಲ್ಲಿನ ಸಿಬ್ಬಂದಿಗಳು ಅರಣ್ಯವನ್ನು ಜತನದಿಂದ ಕಾಪಾಡಿದ್ದರಿಂದಾಗಿ ಜೊತೆಗೆ 643 ಚ.ಕಿ.ಮೀ.ವಿಸ್ತೀರ್ಣವಿದ್ದ ನಾಗರಹೊಳೆ ವನ್ಯಜೀವಿ ವಲಯಕ್ಕೆ 200 ಚ.ಕಿ.ಮೀ ಬಫರ್ ಜೋನ್ ಸೇರ್ಪಡೆಗೊಂಡಿದ್ದರಿಂದಾಗಿ ಹಲವಾರು ಸಸ್ಯ ಪ್ರಬೇಧಗಳು, ಸಸ್ಯನಿಗಳು, ಉರಗ ಜೊತೆಗೆ ವನ್ಯಪ್ರಾಣಿಗಳ ಆವಾಸ ಸ್ಥಾನ, ಸ್ವಚ್ಚಂದ ವಿಹಾರಕ್ಕೆ ಹೇಳಿ ಮಾಡಿಸಿದ ಪ್ರಾಶಸ್ಯ ತಾಣವಾಗಿದ್ದು, ಇತ್ತೀಚಿನ ವನ್ಯಪ್ರಾಣಿಗಳ ಸಂತತಿಯೂ ಗಣನೀಯವಾಗಿ ಏರಿಕೆ ಕಂಡಿರುವುದು ಅರಣ್ಯದೊಳಗೆ ಹುಲಿ ಕಾಳಗವು ಸಾಧರಪಡಿಸಿದೆ.
ಇದನ್ನೂ ಓದಿ : ಆಗಸ್ಟ್ 10 : ವಿಶ್ವ ಸಿಂಹಗಳ ದಿನ : ಕಾಡಿನ ರಾಜನ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ
ಕಳೆದೊಂದು ವರ್ಷದಿಂದ ಆಗಾಗ್ಗೆ ಲಾಕ್ ಡೌನ್ ವೇಳೆ ಅರಣ್ಯದೊಳಗೆ ಸಫಾರಿ ಬಂದ್ ಮಾಡಿದ್ದರಿಂದಾಗಿ ಜೊತೆಗೆ ಉತ್ತಮ ಮಳೆಯಾಗಿದ್ದು, ಅರಣ್ಯದಲ್ಲಿ ಗಿಡಮರಗಳು ಸಮೃದ್ದವಾಗಿ ಬೆಳೆದಿದ್ದರಿಂದ ವನ್ಯಪ್ರಾಣಿಗಳು ಸ್ವಚ್ಚಂದವಾಗಿ ವಿಹರಿಸುತ್ತಿವೆ.
ಸಫಾರಿಗರ ದಿಲ್ ಖುಷ್
ಕೆಲ ದಿನಗಳ ಹಿಂದೆ ಸಫಾರಿಗೆ ತೆರಳಿದ್ದ ವನ್ಯಪ್ರೀಯರು ಹುಲಿ-ಕಪ್ಪು ಚಿರತೆಯ ಸಮಾಗಮವನ್ನು ಕಣ್ತುಂಬಿಕೊಂಡಿದ್ದರು. ಆನೆ, ಕರಡಿಗಳು ಸ್ವಚ್ಚಂದವಾಗಿ ವಿಹರಿಸುತ್ತಿದ್ದ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದರು. ಇದೀಗ ಕುಂತೂರು ಕೆರೆ ರಸ್ತೆಯಲ್ಲಿ ಎರಡು ವ್ಯಾಘ್ರಗಳ ಕಾಳಗ ಕಂಡು ಒಂದು ಕ್ಷಣ ಎದೆ ಜಲ್ ಎನಿಸಿದರೂ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ದಿಲ್ ಖುಷ್ ಆಗಿ ಹಿಂತಿರುಗಿದ್ದಾರೆ.
ಇದನ್ನೂ ಓದಿ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮರೆತ ಸರಕಾರ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕುರಾನ್ ಓದಲಿ,ಆದರೆ ಮದರಸಾಗಳ ಶಿಕ್ಷಣ ಅಸ್ತಿತ್ವದಲ್ಲಿರಬಾರದು: ಹಿಮಂತ ಬಿಸ್ವಾ
ಬಾಡಿಗೆ ಮನೆ ಕೇಳುವ ನೆಪದಲ್ಲಿ ಮಾಲೀಕರ ಕೈ-ಕಾಲು ಕಟ್ಟಿ ಚಿನ್ನಾಭರಣ ಲೂಟಿ: ಮೂವರ ಬಂಧನ
ತೈಲ ಬೆಲೆ 110 ಡಾಲರ್ ನಲ್ಲಿದ್ದರೆ ಹಣದುಬ್ಬರಕ್ಕಿಂತಲೂ ಹೆಚ್ಚು ಸಮಸ್ಯೆಯಾಗಲಿದೆ: ಸಚಿವ ಪುರಿ
ರೇವ್ ಪಾರ್ಟಿಗೆ ಪೊಲೀಸರ ದಾಳಿ; ಡ್ರಗ್ಸ್ ನಶೆ ಹೆಚ್ಚಾಗಿ ಕುಸಿದು ಬಿದ್ದ ಯುವಕ ಸಾವು
ಜಾನುವಾರು ವಧೆ ಆರೋಪ: ಇಬ್ಬರು ಪೊಲೀಸರ ವಶಕ್ಕೆ
MUST WATCH
ಹೊಸ ಸೇರ್ಪಡೆ
ಕುರಾನ್ ಓದಲಿ,ಆದರೆ ಮದರಸಾಗಳ ಶಿಕ್ಷಣ ಅಸ್ತಿತ್ವದಲ್ಲಿರಬಾರದು: ಹಿಮಂತ ಬಿಸ್ವಾ
ಬಾಡಿಗೆ ಮನೆ ಕೇಳುವ ನೆಪದಲ್ಲಿ ಮಾಲೀಕರ ಕೈ-ಕಾಲು ಕಟ್ಟಿ ಚಿನ್ನಾಭರಣ ಲೂಟಿ: ಮೂವರ ಬಂಧನ
ತೈಲ ಬೆಲೆ 110 ಡಾಲರ್ ನಲ್ಲಿದ್ದರೆ ಹಣದುಬ್ಬರಕ್ಕಿಂತಲೂ ಹೆಚ್ಚು ಸಮಸ್ಯೆಯಾಗಲಿದೆ: ಸಚಿವ ಪುರಿ
ರೇವ್ ಪಾರ್ಟಿಗೆ ಪೊಲೀಸರ ದಾಳಿ; ಡ್ರಗ್ಸ್ ನಶೆ ಹೆಚ್ಚಾಗಿ ಕುಸಿದು ಬಿದ್ದ ಯುವಕ ಸಾವು
ಜಾನುವಾರು ವಧೆ ಆರೋಪ: ಇಬ್ಬರು ಪೊಲೀಸರ ವಶಕ್ಕೆ