ಜೆಡಿಎಸ್‌ ಜತೆ ಮತ್ತೆ ಕೈ ಜೋಡಿಸಲ್ಲ

ಬಿಜೆಪಿ-ಜೆಡಿಎಸ್‌ ನಮಗೆ ಸಮಾನ ವೈರಿಗಳು: ಮಾಜಿ ಸಿಎಂ ಸಿದ್ದರಾಮಯ್ಯ

Team Udayavani, Dec 4, 2019, 5:38 AM IST

ಮೈಸೂರು: ದಲಿತ ಮುಖ್ಯಮಂತ್ರಿ ವಿಚಾರ ಚರ್ಚೆಯಾಗಿಲ್ಲ. ಅಂತಹ ಯಾವುದೇ ವಿದ್ಯಮಾನವು ಪಕ್ಷದೊಳಗೆ ನಡೆದಿಲ್ಲ. ಉಪ ಚುನಾವಣೆ ನಂತರ ಮತ್ತೆ ಜೆಡಿಎಸ್‌ ಜೊತೆಗೆ ಕೈ ಜೋಡಿಸಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಡಿ.9ರ ನಂತರ ಮಲ್ಲಿಕಾರ್ಜುನ ಖರ್ಗೆಯವರು ಸಿಹಿ ಹಂಚುತ್ತಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸಿಹಿ ಹಂಚುತ್ತಾರೆ ಎಂದರೆ ಬಹುಶ: 15 ಕ್ಷೇತ್ರ ಗಳಲ್ಲೂ ಗೆಲ್ಲುತ್ತೇವೆ ಎಂದು ಅರ್ಥ. ರಾಜಕೀಯವಾಗಿ ಜೆಡಿಎಸ್‌ನವರು ನಮಗೆ ಬಿಜೆಪಿಯಷ್ಟೇ ಸಮಾನ ವೈರಿಗಳು. ನಾವು ಈ ಉಪ ಚುನಾವಣೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ಪ್ರಚಾರ ನಡೆಸಿದ್ದೇವೆ. ಬಿಜೆಪಿ-ಜೆಡಿಎಸ್‌ ಉಪ ಚುನಾವಣೆಯಲ್ಲಿ ಒಂದೂ ಕ್ಷೇತ್ರ
ಗೆಲ್ಲಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಉಪ ಚುನಾವಣೆಯಲ್ಲಿ ವೈಟ್‌ವಾಶ್‌ ಆಗುತ್ತಾರೆ ಎಂಬ ಸಂಸದ ವಿ.ಶ್ರೀನಿವಾಸಪ್ರಸಾದ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಮತ ಕೇಳಲು ಹೋದ ಕಡೆಯೆಲ್ಲಾ ಜನರು ಗಲಾಟೆ ಮಾಡಿ ವಾಪಸ್‌ ಕಳುಹಿಸುತ್ತಿದ್ದಾರೆ. ಆದರೂ ಶ್ರೀನಿವಾಸಪ್ರಸಾದ್‌ಗೆ ಬುದ್ದಿ ಬಂದಿಲ್ಲ. ಬಿಜೆಪಿ ಸೇರಿದ ಮೇಲೆ ನಂಜನಗೂಡಿನಲ್ಲಿ ಸೋತರು, ಬಿಜೆಪಿ ಸೇರಿರುವುದರಿಂದ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.

ಎಚ್‌.ವಿಶ್ವನಾಥ್‌ಗೆ ಸತ್ಯ ಹೇಳಿ ಗೊತ್ತೇ ಇಲ್ಲ. ಸಿದ್ದರಾಮಯ್ಯನನ್ನು ನಾನು ಕಾಂಗ್ರೆಸ್‌ಗೆ ಕರೆ ತಂದೆ
ಅನ್ನುತ್ತಾರೆ. ಜನತಾದಳದಿಂದ ವಜಾ ಆದ ಮೇಲೆ ಎಬಿಪಿಜೆಡಿ ಪಕ್ಷ ಕಟ್ಟಿದ್ದೆ. ಸೋನಿಯಾಗಾಂಧಿ ಅವರ
ಆಹ್ವಾನದ ಮೇಲೆ ಎಬಿಪಿಜೆಡಿ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿ ಆ ಪಕ್ಷ ಸೇರಿದೆ. ಆಗ ವಿಶ್ವನಾಥ್‌ ಎಲ್ಲಿದ್ದ? ಸಿಎಂ ಆಗಿದ್ದಾಗ ನನ್ನ ವಿರುದಟಛಿವೇ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ. ಈಗ ಜನ ಬೈತಾರೆ ಎಂದು ಸಿದ್ದರಾಮಯ್ಯ ಉತ್ತಮ ಆಡಳಿತಗಾರ ಎಂದು ಹೊಗಳಿಕೊಂಡು ತಿರುಗುತ್ತಿದ್ದಾರೆ. ಇದೂ ಕೂಡ ತಂತ್ರ.
● ಸಿದ್ದರಾಮಯ್ಯ, ಮಾಜಿ ಸಿಎಂ

ಸುಳ್ಳು ಹೇಳದ ರಾಜಕಾರಣಿ ಇದ್ದಾರೆಯೇ: ವಿಶ್ವನಾಥ್‌ ಪ್ರಶ್ನೆ
ಮೈಸೂರು: ನಿಮ್ಮನ್ನೂ ಸೇರಿದಂತೆ ಸುಳ್ಳು ಹೇಳದ ಯಾರಾದರೂ ರಾಜಕಾರಣಿ ಇದ್ದಾರೆಯೇ ಹೇಳಿ ಎಂದು ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ. ವಿಶ್ವನಾಥ್‌ಗೆ ಸತ್ಯ ಹೇಳಿ ಗೊತ್ತೇ ಇಲ್ಲ. ಮತಕ್ಕಾಗಿ ನನ್ನನ್ನು ಹೊಗಳಿಕೊಂಡು ತಿರುಗುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದ ವಿಶ್ವನಾಥ್‌, ಸಿದ್ದರಾಮಯ್ಯಗೆ ಒಂದು ಪ್ರಶ್ನೆ ಕೇಳುತ್ತೇನೆ, ನಿಮ್ಮನ್ನೂ ಸೇರಿದಂತೆ ಸುಳ್ಳು ಹೇಳದ ಯಾರಾದರೂ ರಾಜಕಾರಣಿ ಇದ್ದಾರೆಯೇ ಹೇಳಿ ಎಂದು ಪ್ರಶ್ನಿಸಿದರು.

ಮತಕ್ಕಾಗಿ ಸಿದ್ದರಾಮಯ್ಯ ಅವರನ್ನು ಹೊಗಳಬೇಕಾದ ಅವಶ್ಯಕತೆ ನನಗಿಲ್ಲ. ನಿಮ್ಮನ್ನು ಒಳ್ಳೆಯವನು ಕಣಯ್ಯ ಅಂದ್ರೆ, “ಏಯ್‌ ನನ್ನ ಬಗ್ಗೆ ಸುಳ್ಳು ಹೇಳ್ತಿಯಾ ಅಂದ್ರೆ ಏನು ಮಾಡೋದು’. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ಅವರ ವಯಸ್ಸು, ಅನುಭವ, ಅವರು ನಿರ್ವಹಿಸಿದ ಕೆಲಸಗಳಿಂದಾಗಿ ಅವರ ಬಗ್ಗೆ ಅಪಾರ ಗೌರವವಿದೆ. ನನ್ನ ಬಗ್ಗೆ ಮಾತನಾಡಬೇಡ ಅಂದ್ರೆ ಇನ್ನು ಮಾತನಾಡಲ್ಲ ಎಂದು ಕುಟುಕಿದರು.

ರಾಜ್ಯದ ಮಂತ್ರಿಯಾಗಿದ್ದ ಸಾ.ರಾ. ಮಹೇಶ್‌ ಅವರು, ನನ್ನ ಬಗ್ಗೆ ಅನಾವಶ್ಯಕವಾಗಿ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿದ್ದಾರೆ. ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಸಿದಟಛಿತೆ ನಡೆಸಿದ್ದೇನೆ. ನನ್ನ ರಿಯಲ್‌ ಎಸ್ಟೇಟ್‌ ವ್ಯವಹಾರದ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅದ್ಯಾವ ದಾಖಲೆ ಬಿಡುಗಡೆ ಮಾಡ್ತೀರಾ, ಮಾಡಪ್ಪಾ.
● ಎಚ್‌.ವಿಶ್ವನಾಥ್‌, ಹುಣಸೂರು ಬಿಜೆಪಿ ಅಭ್ಯರ್ಥಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ