Udayavni Special

ರಾಜೇಂದ್ರ ಸಿಂಗ್‌ ಬಾಬು-ದರ್ಶನ್‌ ಕಾಂಬಿನೇಶನ್‌ನಲ್ಲಿ ಹೊಸ ಚಿತ್ರ

ಐಎಫ್ಎಸ್‌ ಅಧಿಕಾರಿಯಾಗಿ ದರ್ಶನ್‌ ನಟನೆ

Team Udayavani, Jun 11, 2020, 7:55 AM IST

dacchu ifs

ಸದ್ಯ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಮತ್ತು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕಾಂಬಿನೇಶನ್‌ನಲ್ಲಿ “ವೀರ ಮದಕರಿ ನಾಯಕ’ ಚಿತ್ರ ತಯಾರಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದರ ನಡುವೆಯೇ ಸಿಂಗ್‌ ಬಾಬು ಮತ್ತು ದರ್ಶನ್‌ ಕಾಂಬಿನೇಶನ್‌ ನಲ್ಲಿ ಮತ್ತೊಂದು ಚಿತ್ರ ತಯಾರಾಗುವ ಬಗ್ಗೆಯೂ ಚರ್ಚೆ ಶುರುವಾಗಿದೆ. ಹೌದು, “ವೀರ ಮದಕರಿನಾಯಕ’ ಚಿತ್ರದಲ್ಲಿ ದರ್ಶನ್‌ ಮದಕರಿನಾಯಕನ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ಸಂಗತಿ. ಈ ಚಿತ್ರ ನಿರ್ದೇಶಿಸುತ್ತಿರುವ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರೊಂದಿಗೆ ದರ್ಶನ್‌ ಮತ್ತೊಂದು ಚಿತ್ರ ಮಾಡಲು ಸಮ್ಮತಿಸಿದ್ದಾರೆ.

ಈ ಬಗ್ಗೆ ಮಾತನಾಡುವ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, “ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ನಾನು ಮತ್ತು ದರ್ಶನ್‌ “ವೀರ ಮದಕರಿನಾಯಕ’ ಸಿನಿಮಾ ಮಾಡುತ್ತಿದ್ದೇವೆ. ಈ ವೇಳೆ ಹೊಸ ಸಬ್ಜೆಕ್ಟ್‌ ಬಗ್ಗೆ ಅವರಿಗೆ ಹೇಳಿದ್ದು, ಅವರು ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಸದ್ಯ ವೀರ ಮದಕರಿನಾಯಕ’ ಸಿನಿಮಾ ನಡೆಯುತ್ತಿರುವುದರಿಂದ ನಮ್ಮ ಮೊದಲ ಗಮನ ಈ ಸಿನಿಮಾವನ್ನು ಪೂರ್ಣಗೊಳಿಸುವುದಾಗಿದೆ. ಈ ಸಿನಿಮಾ ಪೂರ್ಣಗೊಂಡು ರಿಲೀಸ್‌ ಆದ ಬಳಿಕವಷ್ಟೇ ಮುಂದಿನ ಸಿನಿಮಾದ ಪ್ಲಾನಿಂಗ್‌ ಶುರುವಾಗಲಿದೆ’ ಎಂದಿದ್ದಾರೆ.

ಇನ್ನು ಬಾಬು ಅವರು ಹೇಳುವಂತೆ, ಈ ಹೊಸಚಿತ್ರದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಐಎಫ್ಎಸ್‌ ಆಫೀಸರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ವನ್ಯಜೀವಿಗಳ ಅಕ್ರಮ ಬೇಟೆ, ಆಫ್ರಿಕಾ ಖಂಡದ ತಾಂಜೇನಿಯಾದ ಅರಣ್ಯದಲ್ಲಿನ ಬೇಟೆಯ ಹಾವಳಿಗಳ ಕುರಿತಾದ ಪುಸ್ತಕಗಳನ್ನು ಓದುವಾಗ ಅವರಿಗೆ ಇಂತಹ ವಸ್ತು ಇಟ್ಟುಕೊಂಡು ಸಿನಿಮಾ ಮಾಡುವ ಆಲೋಚನೆ ನಿರ್ದೇಶಕ ಬಾಬು ಅವರಿಗೆ ಹೊಳೆದಿದೆಯಂತೆ. ಈ ಹಿಂದೆಯೂ ಇಂಥದ್ದೇ ಕಾಡಿನ ಕುರಿತು ಸಿನಿಮಾಗಳನ್ನು ಮಾಡಿದ್ದರಿಂದ ನಿರ್ದೇಶಕ ಬಾಬು ಅವರಿಗೆ ಈ ವಿಷಯವನ್ನು ತೆರೆಮೇಲೆ ತರಬಹುದು ಎಂದು ಅನಿಸಿದ್ದರಿಂದ, ಈ ಸಿನಿಮಾ ಮಾಡಲು ಬಾಬು ಮುಂದಾಗಿದ್ದಾರಂತೆ.

ಇದೊಂದು ಅಂತರಾಷ್ಟ್ರೀಯ ಕಥಾಹಂದರದ ಜಾಗತಿಕ ವಿಷಯವಾಗಿರುವುದರಿಂದ, ಆಫ್ರಿಕಾ, ಹಾಂಕಾಂಗ್‌ ಮತ್ತು ಲಂಡನ್‌ ಮೊದಲಾದ ಕಡೆಗಳಲ್ಲಿ ಚಿತ್ರಕಥೆ ಸಾಗಲಿದೆಯಂತೆ. ಹಾಗಾಗಿ ಆಫ್ರಿಕಾದ ಕಾಡುಗಳು ಸೇರಿದಂತೆ ವಿದೇಶದ ಅನೇಕ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆಯಂತೆ. ಒಟ್ಟಾರೆ ದರ್ಶನ್‌ ಖಡಕ್‌ ಐಎಫ್ಎಸ್‌ ಆಫೀಸರ್‌ ಆಗಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ, ಈ ಸಿನಿಮಾ ದರ್ಶನ್‌ ಅವರ ಅಭಿಮಾನಿಗಳಿಗೆ ಭರಪೂರ ಆಕ್ಷನ್‌ ಮನರಂಜನೆ ನೀಡುವು ಪಕ್ಕಾ ಎನ್ನಲಾಗುತ್ತಿದೆ.

ಟಾಪ್ ನ್ಯೂಸ್

ಜಿ.ಪಂ. ತಾ.ಪಂ. ಚುನಾವಣೆ : ಶೀಘ್ರ ವೇಳಾಪಟ್ಟಿ ಪ್ರಕಟಿಸಿ: ಹೈಕೋರ್ಟ್‌

ಜಿ.ಪಂ. ತಾ.ಪಂ. ಚುನಾವಣೆ : ಶೀಘ್ರ ವೇಳಾಪಟ್ಟಿ ಪ್ರಕಟಿಸಿ: ಹೈಕೋರ್ಟ್‌

Untitled-1

ಸಮುದ್ರ ಪ್ರಯೋಗಕ್ಕೆ ವಿಕ್ರಾಂತ  

Untitled-1

ಉಡುಪಿ ಜಿಲ್ಲೆಯ ದಾಖಲೆ:  ಏಕಕಾಲದಲ್ಲಿ ಸಚಿವದ್ವಯರು

Untitled-1

ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ?

Untitled-1

ನಿಯಮ ಪಾಲಿಸದ ಕೇರಳ

2023ಕ್ಕೆ ಮಂದಿರ ಲೋಕಾರ್ಪಣೆ

2023ಕ್ಕೆ ಮಂದಿರ ಲೋಕಾರ್ಪಣೆ

ಸಂಪುಟದಿಂದ  ಹೊರಬಿದ್ದವರು..

ಸಂಪುಟದಿಂದ  ಹೊರಬಿದ್ದವರು..ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vasuki

‘ಮ್ಯಾನ್‌ ಆಫ್ ದಿ ಮ್ಯಾಚ್‌’ ಹಾಡಿಗೆ ವಾಸುಕಿ ಮಸ್ತ್ ಸ್ಟೆಪ್ಸ್‌ !

ananthnag

ಅನಂತ ಬದುಕಿನ ಚಿತ್ರಣ: ರಿಷಬ್‌ ಶೆಟ್ಟಿ ಸಾರಥ್ಯದಲ್ಲಿ ಅನಂತನಾಗ್‌ ಸಿನಿಜೀವನದ ಸಾಕ್ಷ್ಯಚಿತ್ರ

chaddidosth

ರಿಲೀಸ್‌ಗೆ ರೆಡಿಯಾದ್ರು ಚಡ್ಡಿದೋಸ್ತ್

ninna-sanihake

ಟ್ರೇಲರ್‌ನಲ್ಲಿ ಸನಿಹಕೆ ಸೆಳೆತ!

kaliveera

ಈ ವಾರದಿಂದ ಮತ್ತೆ ಹೊಸ ಸಿನಿಮಾಗಳು ರಿಲೀಸ್‌

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

ತಂಡವಾಗಿ ಕಾರ್ಯ ನಿರ್ವಹಣೆ: ಸುನಿಲ್‌ ಕುಮಾರ್‌

ತಂಡವಾಗಿ ಕಾರ್ಯ ನಿರ್ವಹಣೆ: ಸುನಿಲ್‌ ಕುಮಾರ್‌

ಜಿ.ಪಂ. ತಾ.ಪಂ. ಚುನಾವಣೆ : ಶೀಘ್ರ ವೇಳಾಪಟ್ಟಿ ಪ್ರಕಟಿಸಿ: ಹೈಕೋರ್ಟ್‌

ಜಿ.ಪಂ. ತಾ.ಪಂ. ಚುನಾವಣೆ : ಶೀಘ್ರ ವೇಳಾಪಟ್ಟಿ ಪ್ರಕಟಿಸಿ: ಹೈಕೋರ್ಟ್‌

Untitled-1

ಸಮುದ್ರ ಪ್ರಯೋಗಕ್ಕೆ ವಿಕ್ರಾಂತ  

Untitled-1

ಉಡುಪಿ ಜಿಲ್ಲೆಯ ದಾಖಲೆ:  ಏಕಕಾಲದಲ್ಲಿ ಸಚಿವದ್ವಯರು

Untitled-1

ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.