ಸಮುದ್ರ ಮಾಲಿನ್ಯ ತನಿಖೆಗೆ ಸಮಿತಿ ನೇಮಿಸಿದ ಎನ್‌ಜಿಟಿ
Team Udayavani, May 26, 2022, 5:20 AM IST
ಮಂಗಳೂರು: ಸುರತ್ಕಲ್ ಸಹಿತ ಕೆಲವೆಡೆ ಕಂಡು ಬಂದಿದ್ದ ಸಮುದ್ರ ಮಾಲಿನ್ಯ ವಿಚಾರವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಗಂಭೀರವಾಗಿ ಪರಿಗಣಿಸಿದೆ. ಮಾಲಿನ್ಯದ ಮೂಲ ಪತ್ತೆ ಸಹಿತ ಇತರ ಕಾರಣಗಳನ್ನು ಕಂಡುಕೊಳ್ಳುವುದಕ್ಕಾಗಿ ಎನ್‌ಜಿಟಿಯ ಪ್ರಧಾನ ಪೀಠವು ಜಂಟಿ ಸಮಿತಿಯೊಂದನ್ನು ನಿಯೋಜಿಸಿದೆ.
ಸುರತ್ಕಲ್ ಗುಡ್ಡೆಕೊಪ್ಲ ಬಳಿ ಸಮುದ್ರದಲ್ಲಿ ಜಿಡ್ಡು ಜಿಡ್ಡಾದ ವಸ್ತು ತೇಲಿ ಬಂದಿದ್ದು ಟಾರಿನ ಉಂಡೆಗಳೂ ಸಿಕ್ಕಿದ್ದವು. ತಣ್ಣೀರುಬಾವಿಯ ಬಳಿ ಕೆಲವು ಮೀನುಗಾರರು ತಾವು ಫಲ್ಗುಣಿ ನದಿಯಲ್ಲಿ ಬೆಳೆಸಿದ್ದ ಪಂಜರ
ಕೃಷಿಯ ಮೀನುಗಳು ಸಾವನ್ನಪ್ಪಿರುವುದಾಗಿಯೂ ದೂರಿದ್ದರು. ಇವೆಲ್ಲ ವನ್ನೂ ಗಣನೆಗೆ ತೆಗೆದುಕೊಂಡಿರುವ ಎನ್‌ಜಿಟಿ ಸಮಿತಿ ರಚಿಸಿದೆ.
ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ದ.ಕ. ಜಿಲ್ಲಾಧಿಕಾರಿ, ಕೋಸ್ಟ್‌ಗಾರ್ಡ್‌ನ ಮಂಗಳೂರು ಘಟಕ, ಕೇಂದ್ರೀಯ ಮೀನು ಸಂಶೋಧನ ಸಂಸ್ಥೆ ಹಾಗೂ ಚೆನ್ನೈಯ ಸಾಗರ ಅಭಿವೃದ್ಧಿ ವಿಭಾಗದವರು ಸಮಿತಿಯಲ್ಲಿದ್ದಾರೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತನಿಖೆಗೆ ನೋಡಲ್ ಏಜೆನ್ಸಿಯಾಗಿದೆ.
ವರದಿಗೆ 2 ತಿಂಗಳ ಗಡು
ಎರಡು ವಾರದೊಳಗೆ ಸಭೆ ಸೇರಿ, ಸ್ಥಳ ಸಮೀಕ್ಷೆ, ಅಧ್ಯಯನ ನಡೆಸಬೇಕು. ಸ್ಥಳೀಯರೊಂದಿಗೆ ಮಾತುಕತೆ ನಡೆಸಬೇಕು, ಎರಡು ತಿಂಗಳೊಳಗೆ ಎನ್‌ಜಿಟಿಗೆ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಈ ಆದೇಶವನ್ನು ಎಜಿಟಿ ಅಧ್ಯಕ್ಷ ಆದರ್ಶ್ ಕುಮಾರ್ ಗೋಯಲ್, ಸದಸ್ಯರಾದ ಸುಧೀರ್ ಅಗರವಾಲ್, ಹಾಗೂ ತಜ್ಞ ಸದಸ್ಯ ಎ. ಸೆಂಥಿಲ್ ವೇಲ್ ಇರುವ ಪೀಠ ಹೊರಡಿಸಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ಸುರತ್ಕಲ್ ಗುಡ್ಡೆಕೊಪ್ಲ ಬಳಿ ಸಮುದ್ರ ಮಾಲಿನ್ಯದ ಕುರಿತು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ನೀಡಿರುವ ಹೇಳಿಕೆ ಆಧರಿಸಿದ ಸುದ್ದಿಯ ಹಿನ್ನೆಲೆಯಲ್ಲಿ ಎನ್‌ಜಿಟಿ ಈ ಆದೇಶವಿತ್ತಿದೆ.
ಈಗಾಗಲೇ ಸಿಆರ್‌ಝಡ್ ಹಾಗೂ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪರಿಶೀಲನೆ ನಡೆಸಿ ಮಾದರಿ ಸಂಗ್ರಹಿಸಿದ್ದರು. ಇದು ಮಳೆಗಾಲಕ್ಕೆ ಮೊದಲುಕಂಡುಬರುವ ಪ್ರಕ್ರಿಯೆ, ಕೆಲವುಬಗೆಯ ಪಾಚಿ ಜೀವಿಗಳಿಂದ ಸಮುದ್ರದ ಬಣ್ಣ ಗಾಢವಾಗುತ್ತದೆ ಎಂಬ ಅಂಶವನ್ನು ಮಾಲಿನ್ಯ ಮಂಡಳಿ ಹೇಳಿರುವುದಾಗಿ ಡಿಸಿ ಉಲ್ಲೇಖೀಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿಆರ್‌ಝಡ್ ನಿರ್ಬಂಧಿತ ಪ್ರದೇಶದ ಕಾಂಡ್ಲಾವನಕ್ಕೆ ಮಣ್ಣು
ಆರಂಭದಲಿಯೇ ಕ್ಷೀಣಿಸಿದ್ದ ಮುಂಗಾರು; ಮಂಗಳೂರಿನಲ್ಲಿ ಇನ್ನೂ ಸುರಿದಿಲ್ಲ ವಾಡಿಕೆ ಮಳೆ!
ನಾವೂರು: ಇನ್ನಷ್ಟು ಅನುದಾನ ಹರಿದು ಬಂದರೆ ಅಭಿವೃದ್ಧಿ ಮಲ್ಲಿಗೆ ಅರಳೀತು
ಶಿರಾಡಿ ಘಾಟಿ: ರಸ್ತೆ ದುರಸ್ತಿ ಕಾಮಗಾರಿಗೆ 4 ತಿಂಗಳು ಬಂದ್ ಬೇಡಿಕೆ
ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಾಲೆಜ್ ಹಬ್,ಧಾರ್ಮಿಕ ಪ್ರವಾಸಿ ಸರ್ಕೀಟ್