ನಿಖಿಲ್‌ ಸೋಲಿನ ಛಾಯೆಯಿಂದ ಹೊರಬರದ ಶಾಸಕರು


Team Udayavani, Jun 10, 2019, 3:10 AM IST

solina

ಮಂಡ್ಯ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿಯ ರಾಜಕೀಯ ಪಟ್ಟಾಭಿಷೇಕಕ್ಕೆಂದೇ ಸಿದ್ಧಗೊಂಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದೊಳಗಿನ ಜೆಡಿಎಸ್‌ ಸೋಲು ಪಕ್ಷದ ಶಾಸಕರನ್ನು ಧೃತಿಗೆಡಿಸಿದೆ. ಸೋಲಿನ ಛಾಯೆಯಿಂದ ಹೊರಬರಲಾಗದೆ ಅಸಹನೆ, ಅತೃಪ್ತಿ, ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.

ಜಿಲ್ಲೆಯ ಏಳಕ್ಕೆ ಏಳು ವಿಧಾನಸಭಾ ಕ್ಷೇತ್ರಗಳನ್ನು ಕೈವಶ ಮಾಡಿಕೊಂಡು ಮಂಡ್ಯದೊಳಗೆ ಭದ್ರಕೋಟೆ ಸೃಷ್ಟಿಸಿಕೊಂಡಿದ್ದ ಜೆಡಿಎಸ್‌ ಶಾಸಕರಿಗೆ ಲೋಕಸಭಾ ಚುನಾವಣೆ ಸೋಲು ಬಹುದೊಡ್ಡ ಆಘಾತ ನೀಡಿದೆ. ಆ ಸೋಲನ್ನು ಅವರಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. ಪಕ್ಷದ ಶಕ್ತಿಕೇಂದ್ರದೊಳಗೆ ದೇವೇಗೌಡರ ಕುಟುಂಬದ ಕುಡಿಯನ್ನು ಮಣಿಸಿದ್ದು ಸಿಎಂ ಕುಮಾರಸ್ವಾಮಿ ಹಾಗೂ ಶಾಸಕರನ್ನು ತೀವ್ರ ಹತಾಶೆಗೆ ದೂಡಿದಂತಿದೆ.

ಸಹಜಸ್ಥಿತಿಯತ್ತ ಮರಳಲಾಗುತ್ತಿಲ್ಲ: ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ರಾಜಕೀಯ ದರ್ಬಾರ್‌ ನಡೆಸುತ್ತಿದ್ದ ಶಾಸಕರಿಗೆ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಪರಾಭವಗೊಂಡಿರುವುದು ಅವರ ಅಧಿಕಾರದ ವೈಭವವನ್ನು ಕಂಗೆಡಿಸಿದೆ. ಇದರಿಂದಾಗಿ ಜೆಡಿಎಸ್‌ ಶಾಸಕರು ಸಹಜಸ್ಥಿತಿಯತ್ತ ಮರಳಲು ಇಂದಿಗೂ ಸಾಧ್ಯವಾಗಿಲ್ಲ.

ಮಾಧ್ಯಮಗಳೆದುರು ಬರಲು ಹಿಂದೇಟು: ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುವ ಬಗ್ಗೆ ಅಪರಿಮಿತ ಆತ್ಮವಿಶ್ವಾಸ ಹೊಂದಿದ್ದ ಜಿಲ್ಲಾ ಉಸ್ತುವರಿ ಸಚಿವ ಸಿ.ಎಸ್‌.ಪುಟ್ಟರಾಜು, ಒಂದು ವೇಳೆ ಚುನಾವಣೆಯಲ್ಲಿ ನಿಖಿಲ್‌ ಸೋತರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಹುಮ್ಮಸ್ಸಿನಿಂದ ಹೇಳಿದ್ದರು. ಆದರೆ, ನಿಖಿಲ್‌ ಸೋಲಿನ ಬಳಿಕ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳಲು ಇಚ್ಛಿಸದ ಸಚಿವರು, ಮಾಧ್ಯಮಗಳೆದುರು ಮಾತನಾಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಕೊಟ್ಟ ಮಾತಿನಂತೆ ರಾಜಕೀಯ ನಿವೃತ್ತಿಗೆ ಆಗ್ರಹಿಸಿದರೂ ಏನು ಹೇಳಬೇಕೆಂಬುದು ಸ್ಪಷ್ಟವಾಗಿಲ್ಲದ ಕಾರಣ ಪುಟ್ಟರಾಜು ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಉದ್ಧಟತನದ ಮಾತು: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅಭಿವೃದ್ಧಿ ಕೇಳಿದ ಜನರ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ. “ಅಭಿವೃದ್ಧಿಗೆ ಮಾತ್ರ ನಾವು ಬೇಕು, ಓಟು ಮಾತ್ರ ಅವರಿಗೆ (ಸುಮಲತಾ) ಹಾಕ್ತೀರಾ? ಯಜಮಾನಿಕೆ, ಮೆಡೆಗಾರಿಕೆ ಮಾಡೋಕೆ ಬರೋರಿಗೆ ಮಣೆ ಹಾಕ್ತೀರಿ. ಅವರಿಂದಲೇ ಅಭಿವೃದ್ಧಿ ಮಾಡಿಸಿಕೊಳ್ಳಿ’ ಎಂಬ ಉದ್ಧಟತನದ ಮಾತುಗಳನ್ನಾಡುತ್ತಿದ್ದಾರೆ.

ಜನರ ಮೇಲೆ ತಮ್ಮಣ್ಣ ಸಿಟ್ಟು: ಚುನಾವಣಾ ಪೂರ್ವದಿಂದಲೂ ಸುಮಲತಾ ಹಾಗೂ ಅವರ ಬೆಂಬಲಕ್ಕೆ ನಿಂತ ದರ್ಶನ್‌, ಯಶ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಲೇ ಬಂದಿದ್ದ ಸಚಿವ ಡಿ.ಸಿ.ತಮ್ಮಣ್ಣ, ಸೋಲಿನ ನಂತರವೂ ಅವರ ವಿರುದ್ಧ ವಾಗ್ಧಾಳಿ ಮುಂದುವರಿಸಿದ್ದಾರೆ. ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಸಾಧ್ಯತೆಗಳಿರುವುದರಿಂದ ತಮ್ಮ ಸಚಿವ ಸ್ಥಾನಕ್ಕೆ ಎಲ್ಲಿ ಧಕ್ಕೆಯಾಗುವುದೋ ಎಂಬ ಆತಂಕದಿಂದ ಜನರ ಮೇಲೆ ಸಿಟ್ಟು ಪ್ರದರ್ಶಿಸುತ್ತಿದ್ದಾರೆ.

ಗಟ್ಟಿ ಧ್ವನಿ ಎತ್ತುತ್ತಿಲ್ಲ: ಚುನಾವಣಾ ಪೂರ್ವದಿಂದಲೂ ಕುಮಾರಸ್ವಾಮಿ ಅವರ ಪ್ರಬಲ ವಿರೋಧಿಯಾಗಿರುವ ಮಾಜಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಮುಖ್ಯಮಂತ್ರಿಯವರ ಓಲೈಕೆಗೆ ಮುಂದಾಗಿದ್ದ ಶಾಸಕ ಸುರೇಶ್‌ಗೌಡ ಈಗ ಮೈತ್ರಿ ಧರ್ಮದ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ನಿಖಿಲ್‌ ಅವರನ್ನು ಮಂಡ್ಯದ ಅಳಿಯನನ್ನಾಗಿ ಮಾಡಿಕೊಳ್ಳುವೆನೆಂದು ಹೇಳುತ್ತಿದ್ದ ಅವರು, ನಾಗಮಂಗಲ ಕ್ಷೇತ್ರದಲ್ಲಿ ನಿಖಿಲ್‌ 7 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದರೂ ಸೋಲಿನ ಕಾರಣದಿಂದ ಗಟ್ಟಿಯಾಗಿ ಮಾತನಾಡುವ ಸ್ಥಿತಿಯಲ್ಲಿಲ್ಲ.

ಚಲುವರಾಯಸ್ವಾಮಿ ಮತ್ತವರ ಒಡನಾಡಿಗಳು ಬಿಜೆಪಿ ಸೇರುತ್ತಾರೆಂಬ ಪುಕಾರು ಹಬ್ಬಿಸಿರುವ ಸುರೇಶ್‌ಗೌಡರು ಮುಂಬರುವ ಸಂಪುಟ ಪುನಾರಚನೆ ಸಂದರ್ಭದಲ್ಲಿ ನಿಖಿಲ್‌ಗೆ ಕ್ಷೇತ್ರ ಮುನ್ನಡೆ ಕಾರಣವಿಟ್ಟು ಮಂತ್ರಿಗಿರಿ ಕೇಳುವ ಸಾಧ್ಯತೆಗಳಿವೆ.

ನಿಖಿಲ್‌ ಗೆಲ್ಲುವ ಬಗ್ಗೆ ಬೆಟ್ಟಿಂಗ್‌ಗೂ ಸಿದ್ಧ: ಲೋಕಸಭಾ ಚುನಾವಣೆ ಬಳಿಕ ನಡೆದ ಪುರಸಭಾ ಚುನಾವಣೆಗಳಲ್ಲಿ ಶ್ರೀರಂಗಪಟ್ಟಣ ಹಾಗೂ ಕೆ.ಆರ್‌.ಪೇಟೆಗಳಲ್ಲಿ ಜೆಡಿಎಸ್‌ ಬಹುಮತ ಸಾಧಿಸಿದ್ದರೂ ಆ ಕ್ಷೇತ್ರದ ಶಾಸಕರು ಅದನ್ನು ಸಂಭ್ರಮಿಸಲಾಗುತ್ತಿಲ್ಲ. ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡರು ಚುನಾವಣಾ ಪೂರ್ವದಲ್ಲಿ ಸುಮಲತಾ ಬೆಂಬಲಕ್ಕೆ ನಿಂತ ದರ್ಶನ್‌ ಹಾಗೂ ಯಶ್‌ ಅವರನ್ನು ಗುರಿಯಾಗಿಸಿಕೊಂಡು ಚಿತ್ರರಂಗದವರ ಮೇಲೆ ಐಟಿ ದಾಳಿ ನಡೆಸಲಾಗುವುದೆಂಬ ಎಚ್ಚರಿಕೆ ನೀಡಿದ್ದರಲ್ಲದೆ, ಚುನಾವಣೆಯಲ್ಲಿ ನಿಖಿಲ್‌ ಗೆಲ್ಲುವ ಬಗ್ಗೆ ಬೆಟ್ಟಿಂಗ್‌ ಕಟ್ಟುವುದಕ್ಕೂ ಸಿದ್ಧ ಎಂದು ಘೋಷಿಸಿದ್ದರು. ಫ‌ಲಿತಾಂಶದ ನಂತರದಲ್ಲಿ ಮೌನ ವಹಿಸಿರುವ ಅವರು ಪುರಸಭೆ ಗೆಲುವನ್ನೂ ಸಂಭ್ರಮಿಸಲಾಗದ ಸ್ಥಿತಿಯಲ್ಲಿದ್ದಾರೆ.

ತೀವ್ರ ಮುಖಭಂಗ: ಚುನಾವಣೆ ಆರಂಭದಿಂದಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತವರ ಪುತ್ರನ ಕೆಂಗಣ್ಣಿಗೆ ಗುರಿಯಾಗಿದ್ದ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಅವರ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಸುಮಲತಾಗೆ ಭಾರೀ ಮತಗಳ ಮುನ್ನಡೆ ದೊರಕಿದ್ದು, ಇದರಿಂದಾಗಿ ವರಿಷ್ಠರ ಮಟ್ಟದಲ್ಲಿ ಶಾಸಕರಿಗೆ ತೀವ್ರ ಮುಖಭಂಗ ಉಂಟಾಗಿದೆ. ಸಾರ್ವಜನಿಕವಾಗಿ ಸಭೆ-ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಚುನಾವಣಾ ಸಂಬಂಧ ಯಾವುದೇ ಹೇಳಿಕೆಗಳನ್ನು ನೀಡುವ ಧೈರ್ಯವನ್ನು ಅವರು ತೋರುತ್ತಿಲ್ಲ. ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸುವರೆಂಬ ಮಾತುಗಳ ನಡುವೆ ಸ್ವತಃ ಡಾ.ಕೆ.ಅನ್ನದಾನಿ ಅವರೇ “ನಾನು ಸಚಿವ ಸ್ಥಾನದ ಆಕಾಂಕ್ಷಿ’ ಎಂದಿರುವುದು ಅಪಹಾಸ್ಯಕ್ಕೆ ಗುರಿಯಾಗಿದೆ.

ಇಡೀ ಲೋಕಸಭಾ ಚುನಾವಣೆಯಲ್ಲಿ ವಿಶೇಷ ರಾಜಕೀಯ ವ್ಯಕ್ತಿತ್ವ ಪ್ರದರ್ಶಿಸಿರುವ ಎಂ.ಶ್ರೀನಿವಾಸ್‌ ಎಲ್ಲಿಯೂ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದೆ ವರಿಷ್ಠರು ತಮಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ನಿಖಿಲ್‌ ಸೋಲಿನ ಬಳಿಕವೂ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂಬಿ ಕುಟುಂಬದ ವಿರುದ್ಧ ಬಹಿರಂಗ ವಾಗ್ಧಾಳಿ: ಅಂಬರೀಶ್‌ ವಿರೋಧಿ ರಾಜಕಾರಣದ ಮೂಲಕವೇ ಪ್ರವರ್ಧಮಾನಕ್ಕೆ ಬಂದಿರುವ ರವೀಂದ್ರ ಶ್ರೀಕಂಠಯ್ಯ ಲೋಕಸಭಾ ಚನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದರು. ಅಂಬರೀಶ್‌ ಮೇಲಿನ ಸೇಡನ್ನು ಸುಮಲತಾ ಸೋಲಿನ ಮೂಲಕ ತೀರಿಸಿಕೊಳ್ಳುವ ತೀವ್ರತೆ ಹೊಂದಿದ್ದರು.

ಅಂಬಿ ಕುಟುಂಬದ ವಿರುದ್ಧ ಬಹಿರಂಗ ವಾಗ್ಧಾಳಿ ನಡೆಸುತ್ತಿದ್ದ ಅವರು, ಸುಮಲತಾ ಪರ ಅನುಕಂಪ ಮಾತ್ರವಿದೆ. ಸ್ವಾಭಿಮಾನ ಇಲ್ಲ, ಅವು ಮತಗಳಾಗಿಯೂ ಪರಿವರ್ತನೆಯಾಗುವುದಿಲ್ಲ ಎಂದು ಹೇಳಿದ್ದರು. ಸೋಲಿನ ಬಳಿಕ ಅವರೂ ತಟಸ್ಥವಾಗಿದ್ದಾರೆ. ಶ್ರೀರಂಗಪಟ್ಟಣ ಪುರಸಭೆಯಲ್ಲಿ ಜೆಡಿಎಸ್‌ ಬಹುಮತ ಸಾಧಿಸಿದ್ದರೂ ಅವರಿಂದಲೂ ಗೆಲುವನ್ನು ಸಂಭ್ರಮಿಸಲಾಗಿಲ್ಲ.

ಮಾಜಿ ಸಂಸದ ಶಿವರಾಮೇಗೌಡ ನಾಪತ್ತೆ: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಸುಮಲತಾ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಗುರಿಯಾಗಿದ್ದ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಈಗ ಮಂಡ್ಯ ಜಿಲ್ಲೆಯಿಂದ ನಾಪತ್ತೆಯಾಗಿದ್ದಾರೆ. ಸುಮಲತಾ ಅವರನ್ನು ಮಾಯಾಂಗನೆ, ಒಕ್ಕಲಿಗರಲ್ಲ, ನಾಯ್ಡು ಜಾತಿಗೆ ಸೇರಿದವರೆಂದಲ್ಲಾ ಟೀಕಿಸಿ ವಿವಾದಕ್ಕೆ ಗುರಿಯಾಗಿದ್ದ ಶಿವರಾಮೇಗೌಡರು ಈಗ ಸದ್ದಿªಲ್ಲದೆ, ಮಂಡ್ಯ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದಾರೆ.

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.