ಇಂದಿರಾ ಕ್ಯಾಂಟಿನ್‌ ಹೆಸರು ಬದಲಾವಣೆ ಬೇಡ: ಸಿದ್ದರಾಮಯ್ಯ

Team Udayavani, Nov 14, 2019, 8:07 PM IST

ಬೆಂಗಳೂರು: ಇಂದಿರಾ ಕ್ಯಾಂಟಿನ್‌ ಹೆಸರು ಬದಲಾವಣೆ ಬೇಡ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇಂದಿರಾ ಕ್ಯಾಂಟಿನ್‌ ಹೆಸರು ಬದಲಾವಣೆಗೆ ರಾಜ್ಯ ಸರಕಾರ ಚಿಂತನೆ ನಡೆಸಿರುವ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೆಸರು ಬದಲಾವಣೆಗಿಂತಲೂ ಅದಕ್ಕೆ ಮತ್ತಷ್ಟು ಅನುದಾನ ನೀಡಿ, ಇಂದಿರಾ ಕ್ಯಾಂಟೀನ್‌ನ ಗುಣಮಟ್ಟವನ್ನು ಹೆಚ್ಚಳ ಮಾಡಲಿ ಎಂದು ಸಲಹೆ ನೀಡಿದರು.

ಹಾವು-ಮುಂಗುಸಿ
ಹೊಸಕೋಟೆ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ (ಶರತ್‌ ಬಚ್ಚೇಗೌಡ) ಜೆಡಿಎಸ್‌ ಪಕ್ಷ ಬೆಂಬಲ ನೀಡುವ ಕುರಿತಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಸಂಸದ ಬಚ್ಚೇಗೌಡ ಅವರು ಮೊದಲಿನಿಂದಲೂ ಹಾವು -ಮುಂಗುಸಿ ತರಹ ಇದ್ದರು. ಈಗ ಯಾವ ರೀತಿಯ ಹೊಂದಾಣಿಕೆ ಎಂಬುದೇ ಅರ್ಥವಾಗುತ್ತಿಲ್ಲ. ಇದರ ಹಿಂದೆ ಏನಿದೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ