ಮಂತ್ರಿ ಆಗಲು ಯಾರ ಮನೆ ಮುಂದೇನೂ ನಿಲ್ಲಲ್ಲ : ಯತ್ನಾಳ 

Team Udayavani, Aug 22, 2019, 2:45 PM IST

ಬಾಗಲಕೋಟೆ : ನನ್ನನ್ನು ಮಂತ್ರಿ ಮಾಡಿ ಎಂದು ಯಾರ ಮನೆ ಮುಂದೆಯೂ ಹೋಗಿ ನಿಂತಿಲ್ಲ ನಿಲ್ಲುವುದಿಲ್ಲ. ಯಡಿಯೂರಪ್ಪ ಮನೆಗೂ ನಾನು ಹೋಗಿ ಮಂತ್ರಿ ಮಾಡಿ ಎಂದು ಕೇಳಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಿ-ಬೇಡಿ, ಕೈ-ಕಾಲು  ಹಿಡಿದು  ಮಂತ್ರಿಯಾಗುಷ್ಟು  ಕೆಳ ರಾಜಕಾರಣ  ಮಾಡುವ  ವ್ಯಕ್ತಿ ನಾನಲ್ಲ. ಯಡಿಯೂರಪ್ಪ ಅವರಿಗೂ ಒತ್ತಡ ಹಾಕಿಲ್ಲ.

ಮುಂದಿನ ಸಂಪುಟ ವಿಸ್ತರಣೆ ವೇಳೆಯೂ ನಾನು ಒತ್ತಾಯ ಮಾಡಲ್ಲ.
ಸ್ವಾಮೀಜಿಗಳ ಮೂಲಕ ಬಿಎಸ್‌ವೈಗೆ ಒತ್ತಡ ಹಾಕಿಸಿಲ್ಲ. ಯಾರ ಮನೆಗೂ ಹೋಗಿ ನನ್ನ ಮಂತ್ರಿ ಮಾಡಿ ಎಂದು ಕೇಳಲ್ಲ ಎಂದರು.

ತ್ಯಾಗ ಅನಿವಾರ್ಯ :
ಕೆಲವು ಬಾರಿ ನಾವು ಔದಾರ್ಯ ತೋರಬೇಕಾಗುತ್ತದೆ. ತ್ಯಾಗ ಮಾಡಬೇಕಾಗುತ್ತದೆ. ಸಚಿವ ಸ್ಥಾನ ಕೊಡದಿದ್ದರೆ  ಭಿನ್ನಮತ ಎಂದು ಚಿಲ್ಲರೆ ರಾಜಕಾರಣ ನಾವು ಮಾಡಲ್ಲ. ಅಸಮಾಧಾನ ನನಗಿಲ್ಲ. ಮಾಧ್ಯಮದವರೇ ಊಹಾಪೋಹ ಸೃಷ್ಠಿ ಮಾಡುತ್ತಿದ್ದಾರೆ ಎಂದು ಹೇಳಿದರು.

ನಾನೊಬ್ಬ ಹಿರಿಯ ನಾಯಕ. ಬಿಜೆಪಿ ಕಟ್ಟುವುದರಲ್ಲಿ ನನ್ನ ಪಾತ್ರವಿದೆ. ನಡುವೆ ಬಂದು ಯಾರ ಕೈ- ಕಾಲು ಹಿಡಿದು ರಾಜಕಾರಣ ಮಾಡಿದವನಲ್ಲ. ಬಿಜೆಪಿ ಕೆಳಮಟ್ಟದಿಂದ ಬೆಳೆಸಿದ್ದೇನೆ. ಯಾರೂ ಶಾಸಕರಿಲ್ಲದಾಗ ನಾನು ಎಂಎಲ್‌ಎ ಆಗಿದ್ದವನು. ವಿಜಯಪುರ ಲೋಕಸಭೆ ಕ್ಷೇತ್ರದ ಮೊದಲ ಸಂಸದ ನಾನು ಎಂದರು.

ನನಗೆ 75 ವರ್ಷ ಆಗಿಲ್ಲ :
ಹಿರಿಯನ್ನೇ ಬಿಜೆಪಿ ಕಡೆಗನಿಸಿತಾ ಎಂಬ ಪ್ರಶ್ನೆಗೆ ಎಲ್.ಕೆ. ಅದ್ವಾನಿ ಅವರ  ಉದಾಹರಣೆ ನೀಡಿದ ಶಾಸಕ ಯತ್ನಾಳ, ಬಿಜೆಪಿಯಲ್ಲಿ ಅದ್ವಾನಿ ಅವರ ಪರಿಸ್ಥಿತಿ ಏನಾಗಿದೆ. ಕಾಲ ಕಾಲದಲ್ಲಿ ಒಂದೊಂದು ಯುಗ ಇರುತ್ತದೆ. ಆ ಯುಗದಲ್ಲಿ ಬೇರೆ ಬೇರೆ ಬೆಳವಣಿಗೆಯಾಗುತ್ತವೆ. ನನಗೇನೂ ವಯಸ್ಸಾಗಿಲ್ಲ. 75 ವರ್ಷ ಮೇಲಾಗಿದ್ದರೆ ನನ್ನನ್ನು ನಿವೃತ್ತಿ ಮಾಡುತ್ತಿದ್ದರು. ನನಗೀಗ 54 ವಯಸ್ಸು. ರಾಜ್ಯದ ನಂಬರ್ 1 ರಾಜಕಾರಣಿ ಆಗುವ ಅವಕಾಶ ಇವೆ ಎಂದರು.

ನನಗೂ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯುತ್ತವೆ. ನನ್ನ  ಮೇಲೇನು ಭ್ರಷ್ಟಾಚಾರದ ಆರೋಪವಿದೆಯೇ. ಏನಾದರೂ ಹಗರಣ ಮಾಡಿದ್ದೇನಾ. ಏನೂ ಇಲ್ಲ. ಒಬ್ಬ ಹಿಂದೂ ಮುಖಂಡ ಎಂದು ಜನ ನನ್ನನ್ನು ಒಪ್ಪಿಕೊಂಡಿದ್ದಾರೆ. ನನಗೆ ಭವಿಷ್ಯವಿದೆ. ನನಗೆ ಯುಗಾಂತ್ಯವಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಸ್ಥಾನಕ್ಕಾಗಿ ಸ್ವಾಮೀಜಿಗಳ ಮೂಲಕ ಲಾಭಿ ನಡೆಸಿಲ್ಲ. ಪಕ್ಷವೇ ಗುರುತಿಸಿ ಕೊಡಬೇಕು. ಪಕ್ಷ ಯಾವ ಕಾರಣಗಳಿಂದ ನಿರ್ಣಯ ಕೈಗೊಂಡಿದೆಯೋ.  ಅದರಲ್ಲಿ ಒಳ್ಳೆಯ ಉದ್ದೇಶವಿರಬಹುದು. ನಾನು ಪಕ್ಷದ ರಾಜ್ಯಾಧ್ಯಕ್ಷನಾಗಬೇಕೆಂದು ಪ್ರಯತ್ನ ಮಾಡಿಲ್ಲ. ಕೇಂದ್ರ ಮಂತ್ರಿಯಾಗಲೂ ಪ್ರಯತ್ನಿಸಿಲ್ಲ ಎಂದರು.

ಈಶ್ವರಪ್ಪ ಟೀಕೆ ಮಾಡಲ್ಲ :
ಯತ್ನಾಳರನ್ನು ಕೇಳಿ ಬಿಜೆಪಿ ರಾಜ್ಯಾಧ್ಯಕ್ಷರನ್ನ ಮಾಡೋಕಾಗುತ್ತಾ ಎಂಬ  ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ, ಈಶ್ವರಪ್ಪ ಬಗ್ಗೆ ನನಗೆಬಹಳ ಗೌರವವಿದೆ. ಅವರು ಹಿರಿಯ ಹಿರಿಯ ನಾಯಕರು. ಅವರು ಯಾವಾಗಲೂ ನನಗೆ ಪ್ರೀತಿ ಮಾಡುತ್ತಾರೆ. ತಪ್ಪಿದಾಗ ತಿದ್ದಿದ್ದಾರೆ. ಅವರು ಕರೆದು ನನಗೆ ಹೊಡೆದರೂ ನನಗೆ ಸಿಟ್ಟಿಲ್ಲ. ನಾನು ಅದ್ವಾನಿ, ಅಮೀತ್ ಶಾ, ಮೋದಿ, ಅನಂತಕುಮಾರ, ಈಶ್ವರಪ್ಪ ಬಗ್ಗೆ ಟೀಕೆ ಮಾಡಲ್ಲ ಎಂದು ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ