ಟಿವಿಎಸ್ನಿಂದ “ನಾರ್ಟನ್’ ಸೈಕಲ್ ಖರೀದಿ
Team Udayavani, Apr 19, 2020, 7:40 AM IST
ಚೆನ್ನೈ: ಟಿವಿಎಸ್ ಮೋಟಾರ್, ಬ್ರಿಟನ್ನ ಖ್ಯಾತ ಕ್ರೀಡಾ ಮೋಟಾರ್ ಸೈಕಲ್ ಬ್ರ್ಯಾಂಡ್ “ನಾರ್ಟನ್’ನ್ನು 16 ಮಿಲಿಯನ್ ಬ್ರಿಟಿಷ್ ಪೌಂಡ್ಸ್ (153 ಕೋಟಿ ರೂ.)ಗಳಿಗೆ ಖರೀದಿಸಿದೆ.
ಸಂಪೂರ್ಣ ನಗದು ವ್ಯವಹಾರದ ಮೂಲಕ ಈ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಕಂಪನಿ ತಿಳಿಸಿದೆ. ಈ ಮೂಲಕ ದ್ವಿಚಕ್ರ ವಾಹನಗಳ ತಯಾರಕಾ ಕಂಪನಿ ಟಿವಿಎಸ್, ಸೂಪರ್ ಬೈಕ್ಗಳ (850 ಸಿಸಿ ಮೇಲೆ) ಮಾರುಕಟ್ಟೆಯನ್ನು ಪ್ರವೇಶಿಸಿದೆ. ವಿಶ್ವದ ಸುಮಾರು 21 ರಾಷ್ಟ್ರಗಳಲ್ಲಿ ನಾರ್ಟನ್, 850ಸಿಸಿಯಿಂದ 1200 ಸಿಸಿವರೆಗಿನ ಸಾಮರ್ಥ್ಯದ ಬೈಕ್ಗಳನ್ನು ಮಾರಾಟ ಮಾಡು ತ್ತಿದ್ದು, ಇದರ ಬೆಲೆಗಳು 25,000-45,000 ಪೌಂಡ್ಗಳಷ್ಟಿವೆ.
ಆದರೆ, ಎರಡು ವರ್ಷಗಳ ಅವಧಿಯಲ್ಲಿ ಬೈಕ್ಗಳ ಮಾರಾಟ ದಲ್ಲಿ ಕುಸಿತ ಕಂಡು ಬಂದಿದ್ದು, ಕಂಪನಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ.
ಟಿವಿಎಸ್ ಮೋಟಾರ್, ತನ್ನ ಸಾಗರೋತ್ತರ ಅಂಗಸಂಸ್ಥೆಗಳ ಮೂಲಕ ನಾರ್ಟನ್ ಮೋಟಾರ್ನ ಕೆಲವು ಸ್ವತ್ತುಗಳನ್ನು ವಶಪಡಿಸಿ ಕೊಳ್ಳುತ್ತಿದೆ. ಆದರೆ, ನಾರ್ಟನ್ನ ಯಾವುದೇ ಸಾಲಗಳಿಗೆ ಅದು ಬಾಧ್ಯಸ್ಥ ಅಲ್ಲ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ