ಅಕ್ಷಿತ್ ಪ್ರೇಮ ಪುರಾಣ
Team Udayavani, Jan 23, 2021, 4:33 PM IST
ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ನಟನೆಯ “ಓ ಮೈ ಲವ್’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಸಚಿವ ಶ್ರೀರಾಮುಲು ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ಸ್ಮೈಲ್ ಶ್ರೀನು ಈ ಚಿತ್ರದ ನಿರ್ದೇಶಕರು. ಈ ಚಿತ್ರದಲ್ಲಿ ಹದಿ ಹರೆಯದ ಪ್ರೇಮ ತುಡಿತಗಳ ಜೊತೆ ಜೊತೆಗೆ ಕಮರ್ಷಿಯಲ್ ಅಂಶಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಜಿಸಿಬಿ ರಾಮಾಂಜಿನಿ ಕಥೆ ಬರೆಯುವುದರ ಜೊತೆಗೆ ಜಿಸಿಬಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ಸ್ಮೈಲ್ ಶ್ರೀನು ಅವರದ್ದು. ಚಿತ್ರದ ಬಗ್ಗೆ ಮಾತನಾಡುವ ಶ್ರೀನು, ಇದೊಂದು ರೊಮ್ಯಾಂಟಿಕ್ ಲವ್‌ಸ್ಟೋರಿ. ಹಾಗಂತ ಕೇವಲ ಅಷ್ಟಕ್ಕೇ ಸೀಮಿತವಾಗಿಲ್ಲ. ಇದರ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್, ಆ್ಯಕ್ಷನ್ ಕೂಡಾ ಇದ್ದು, ಚಿತ್ರ ಅದ್ಧೂರಿಯಾಗಿ ತಯಾರಾಗಲಿದೆ. ಈ ಹಿಂದೆ ಈ ತರಹದ ಲವ್‌ಸ್ಟೋರಿ ಬಂದಿಲ್ಲ ಎನ್ನುವುದು ಶ್ರೀನು ಮಾತು. ಚಿತ್ರದಲ್ಲಿ ಕೀರ್ತಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:‘ಸ್ಟಾಲ್’ ಚಿತ್ರೀಕರಣ ತಂಡಕ್ಕೆ ದಾಖಲೆ ಖುಷಿ!