Udayavni Special

ಮುಂದಿನ ವರ್ಷವೂ ಅಸಾಧ್ಯವಾದರೆ ಒಲಿಂಪಿಕ್ಸ್‌ ರದ್ದು: ಐಒಸಿ


Team Udayavani, May 22, 2020, 7:10 AM IST

ಮುಂದಿನ ವರ್ಷವೂ ಅಸಾಧ್ಯವಾದರೆ ಒಲಿಂಪಿಕ್ಸ್‌ ರದ್ದು: ಐಒಸಿ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ ಸದ್ಯ ಬೀಸುವ ದೊಣ್ಣೆಯಿಂದ ಪಾರಾಗಿದೆಯೇನೋ ನಿಜ, ಆದರೆ ಮುಂದಿನ ವರ್ಷವೂ ಇದೇ ಸ್ಥಿತಿಯಿದ್ದು, ನಡೆಸಲು ಅಸಾಧ್ಯವಾದರೆ ಈ ಕ್ರೀಡಾಕೂಟವನ್ನು ರದ್ದು ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್‌ ಕಮಿಟಿಯ (ಐಒಸಿ) ಅಧ್ಯಕ್ಷ ಥಾಮಸ್‌ ಬಾಕ್‌ ಹೇಳಿದ್ದಾರೆ.

ಕೋವಿಡ್ 19 ವೈರಸ್‌ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ಸ್‌ ಪಂದ್ಯಾವಳಿಯನ್ನು 2021ಕ್ಕೆ ಮುಂದೂಡಲಾಗಿದೆ. ಆದರೆ ಮುಂದಿನ ವರ್ಷವೂ ಇದನ್ನು ನಡೆಸಲು ಸಾಧ್ಯವಾಗದೆ ಹೋದರೆ ಇನ್ನು ಇದನ್ನು ಮುಂದುವರಿಸಲಾಗದು, ಆಗ ಕೂಟವನ್ನೇ ಕೈಬಿಡಬೇಕಾಗುತ್ತದೆ ಎಂಬುದಾಗಿ ಥಾಮಸ್‌ ಬಾಕ್‌ ಹೇಳಿದರು.

“ಪ್ರತೀ ವರ್ಷವೂ ವಿಶ್ವದ ಕ್ರೀಡಾಕೂಟಗಳ ವೇಳಾಪಟ್ಟಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕೆ ಕ್ರೀಡಾ ಒಕ್ಕೂಟಗಳು ಒಪ್ಪುವುದೂ ಇಲ್ಲ. ಹಾಗೆಯೇ ಇದರಿಂದ ಕ್ರೀಡಾಪಟುಗಳನ್ನು ಅನಿಶ್ಚಿತತೆಗೆ ತಳ್ಳಿದಂತಾಗುತ್ತದೆ’ ಎಂಬುದಾಗಿ ಬಾಕ್‌ ಸ್ಪಷ್ಟಪಡಿಸಿದರು.

ಆರೋಗ್ಯ ನಿಯಮ ಪಾಲನೆ
2021ರಲ್ಲಿ ಕೂಟ ನಡೆಯುವುದೇ ಆದರೆ ಆ್ಯತ್ಲೀಟ್‌ಗಳನ್ನು ಕ್ವಾರಂಟೈನ್‌ ಹಾಗೂ ಇತರ ಆರೋಗ್ಯ ನಿಯಮಗಳ ವ್ಯಾಪ್ತಿಯಲ್ಲಿ ಸಜ್ಜುಗೊಳಿಸುವುದು ಐಒಸಿಯ ಉದ್ದೇಶವಾಗಿದೆ. ಆದರೆ ಎಲ್ಲವನ್ನೂ ಈಗಲೇ ಬಹಿರಂಗಗೊಳಿಸಲು ಆಗುವುದಿಲ್ಲ ಎಂದು ಬಾಕ್‌ ಹೇಳಿದರು.

“ನಿಜಕ್ಕೂ ಇದೊಂದು ದೊಡ್ಡ ಟಾಸ್ಕ್. 2021ರ ಜುಲೈ 23ರಂದು ಜಗತ್ತು ಹೇಗೆ ಕಾಣುತ್ತದೆ, ಯಾವ ಸ್ಥಿತಿಯಲ್ಲಿರುತ್ತದೆ ಎಂಬುದನ್ನು ನೋಡಿದ ಬಳಿಕ ಮುಂದಿನ ನಿರ್ಧಾರ…’ ಎಂಬುದಾಗಿ ಥಾಮಸ್‌ ಬಾಕ್‌ ಹೇಳಿದರು.ಜಪಾನಿನಲ್ಲಿ ಈವರೆಗೆ 17,100 ಮಂದಿ ಕೋವಿಡ್ 19 ಸೋಂಕಿತರಿದ್ದು, 797 ಮಂದಿ ಮೃತ ಪಟ್ಟಿದ್ದಾರೆ. ಉಳಿದೆಡೆ ಹೋಲಿಸಿದರೆ ಜಪಾನಿನಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ.

ಪ್ರಧಾನಿ ಶಿಂಜೊ ಅಬೆಗೆ ಅಂದೇ ಅನುಮಾನ
ಕಳೆದ ಮಾರ್ಚ್‌ ತಿಂಗಳಲ್ಲಿ ಐಒಸಿ ಮತ್ತು ಜಪಾನ್‌ ಸರಕಾರ ಸೇರಿಕೊಂಡು ಟೋಕಿಯೊ ಒಲಿಂಪಿಕ್ಸ್‌ ಪಂದ್ಯಾವಳಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೂಡಲು ತೀರ್ಮಾನಿಸಿದ್ದವು. ಇದೇ ವೇಳೆ ಜಪಾನ್‌ ಪ್ರಧಾನಿ ಶಿಂಜೊ ಆಬೆ, 2021ರಲ್ಲೂ ಒಲಿಂಪಿಕ್ಸ್‌ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಕೋವಿಡ್ 19 ವೈರಸ್‌ ಹಾವಳಿ ಮುಂದುವರಿದರೆ ಕೂಟವನ್ನು ನಡೆಸುವುದು ಕಷ್ಟ ಎಂದಿದ್ದರು. ಥಾಮಸ್‌ ಬಾಕ್‌ ಕೂಡ ಇದನ್ನು ಸಮರ್ಥಿಸಿಕೊಂಡಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಂತಾರಾಷ್ಟ್ರೀಯ ಆರ್ಚರಿ ಕೋಚ್ ನ್ಯಾನೋಮಾ ರಸ್ತೆ ಅಪಘಾತದಲ್ಲಿ ಸಾವು

ಅಂತಾರಾಷ್ಟ್ರೀಯ ಆರ್ಚರಿ ಕೋಚ್ ನ್ಯಾನೋಮಾ ರಸ್ತೆ ಅಪಘಾತದಲ್ಲಿ ಸಾವು

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಕರಾವಳಿಯಲ್ಲಿ ಎರಡು ದಿನ ಭಾರಿ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಕರಾವಳಿಯಲ್ಲಿ ಎರಡು ದಿನ ಭಾರಿ ಮಳೆ ಸಾಧ್ಯತೆ

ಪೊಲೀಸ್ ಠಾಣೆಯಿಂದ ಪಾಯಿಂಟ್ 303 ರೈಫಲ್ಸ್‌ನ 50 ಬುಲೆಟ್ ಗಳು ನಾಪತ್ತೆ!

ಪೊಲೀಸ್ ಠಾಣೆಯಿಂದ ಪಾಯಿಂಟ್ 303 ರೈಫಲ್ಸ್‌ನ 50 ಬುಲೆಟ್ ಗಳು ನಾಪತ್ತೆ!

ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ಓಡಾಡುತ್ತಿದ್ದವರ ಮೇಲೆ ಕೇಸ್!

ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ಓಡಾಡುತ್ತಿದ್ದವರ ಮೇಲೆ ಕೇಸ್!

ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಇನ್ಫಿನಿಕ್ಸ್‌ ಹಾಟ್‌ 9 ಪ್ರೋ ಸ್ಮಾರ್ಟ್‌ಫೋನ್‌ಗಳು

ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಇನ್ಫಿನಿಕ್ಸ್‌ ಹಾಟ್‌ 9 ಪ್ರೋ ಸ್ಮಾರ್ಟ್‌ಫೋನ್‌ಗಳು

covid19-india

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.9 ಲಕ್ಷಕ್ಕೆ ಏರಿಕೆ: ಸಹಜ ಸ್ಥಿತಿಗೆ ಮರಳಿದ ಜನಜೀವನ

ಡೋಕ್ಲಾಮ್‌ ಮುಖಭಂಗದ ಬಳಿಕ ಚೀನ ತಣ್ಣಗೆ ಕುಳಿತಿಲ್ಲ!

ಡೋಕ್ಲಾಮ್‌ ಮುಖಭಂಗದ ಬಳಿಕ ಚೀನ ತಣ್ಣಗೆ ಕುಳಿತಿಲ್ಲ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂತಾರಾಷ್ಟ್ರೀಯ ಆರ್ಚರಿ ಕೋಚ್ ನ್ಯಾನೋಮಾ ರಸ್ತೆ ಅಪಘಾತದಲ್ಲಿ ಸಾವು

ಅಂತಾರಾಷ್ಟ್ರೀಯ ಆರ್ಚರಿ ಕೋಚ್ ನ್ಯಾನೋಮಾ ರಸ್ತೆ ಅಪಘಾತದಲ್ಲಿ ಸಾವು

ಜಿಮ್‌ ನಂಬಿದ್ದ ಕುಟುಂಬಗಳ ಬದುಕು ಮೂರಾಬಟ್ಟೆ

ಜಿಮ್‌ ನಂಬಿದ್ದ ಕುಟುಂಬಗಳ ಬದುಕು ಮೂರಾಬಟ್ಟೆ

ಖೇಲ್‌ ರತ್ನ ಪ್ರಶಸ್ತಿ ರೇಸ್‌ನಲ್ಲಿ 7 ಕಲಿಗಳು

ಖೇಲ್‌ ರತ್ನ ಪ್ರಶಸ್ತಿ ರೇಸ್‌ನಲ್ಲಿ 7 ಕಲಿಗಳು

ಖೇಲ್‌ರತ್ನಕ್ಕೆ ಪಂಘಲ್‌, ವಿಕಾಸ್‌ ಹೆಸರು

ಖೇಲ್‌ರತ್ನಕ್ಕೆ ಪಂಘಲ್‌, ವಿಕಾಸ್‌ ಹೆಸರು

ಕ್ಲೀನರ್‌ ಮೇಲೆ ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್‌ ಹಲ್ಲೆ?

ಕ್ಲೀನರ್‌ ಮೇಲೆ ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್‌ ಹಲ್ಲೆ?

MUST WATCH

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

ಹೊಸ ಸೇರ್ಪಡೆ

ಲಾಕ್‌ಡೌನ್‌ ವೇಳೆ ರಾಜ್ಯದಲ್ಲಿ ಹಾಲು ಉತ್ಪಾದನೆ 12 ಲಕ್ಷ ಲೀ.ಹೆಚ್ಚಳ

ಲಾಕ್‌ಡೌನ್‌ ವೇಳೆ ರಾಜ್ಯದಲ್ಲಿ ಹಾಲು ಉತ್ಪಾದನೆ 12 ಲಕ್ಷ ಲೀ.ಹೆಚ್ಚಳ

ದೇರಳಕಟ್ಟೆ ಬಿಎಸ್ಎನ್ಎಲ್ ಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್: ಲಕ್ಷಾಂತರ ರೂ. ನಷ್ಟ

ದೇರಳಕಟ್ಟೆ ಬಿಎಸ್ಎನ್ಎಲ್ ಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್: ಲಕ್ಷಾಂತರ ರೂ. ನಷ್ಟ

ಪಡಿತರ ವಿತರಣೆಗೆ ಸೂಚನೆಪಡಿತರ ವಿತರಣೆಗೆ ಸೂಚನೆ

ಪಡಿತರ ವಿತರಣೆಗೆ ಸೂಚನೆ

ಭಾರತ ವಿಶ್ವದಲ್ಲೇ 2ನೇ ಬೃಹತ್‌ ಮೊಬೈಲ್‌ ಉತ್ಪಾದಕ ದೇಶ!

ಭಾರತ ವಿಶ್ವದಲ್ಲೇ 2ನೇ ಬೃಹತ್‌ ಮೊಬೈಲ್‌ ಉತ್ಪಾದಕ ದೇಶ!

ಕ್ರೆಟಾ, ಕಿಕ್‌ಗೆ ಸೆಡ್ಡು : ಕಿಯಾದಿಂದ ಸುಧಾರಿತ ಸೆಲ್ಟೋಸ್‌

ಕ್ರೆಟಾ, ಕಿಕ್‌ಗೆ ಸೆಡ್ಡು : ಕಿಯಾದಿಂದ ಸುಧಾರಿತ ಸೆಲ್ಟೋಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.