

Team Udayavani, Jul 21, 2024, 11:53 PM IST
ಪ್ಯಾರಿಸ್: ದೊಡ್ಡ ಪದಕದ ಕನಸು ಹೊತ್ತ ಭಾರತೀಯ ಹಾಕಿ ತಂಡ ಪ್ಯಾರಿಸ್ ತಲುಪಿದೆ. “ಹಾಕಿ ಇಂಡಿಯಾ’ ತನ್ನ “ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದೆ. “ಹಾಕಿ ತಂಡ ಒಲಿಂಪಿಕ್ ಗ್ರಾಮಕ್ಕೆ ಕಾಲಿರಿಸಿದೆ. ಒಲಿಂಪಿಕ್ ಕನಸು ಇನ್ನು ಗರಿಗೆದರಲಿದೆ’ ಎಂದಿದೆ.
ಒಲಿಂಪಿಕ್ಸ್ ಹಾಕಿಯಲ್ಲಿ ಅತ್ಯಧಿಕ 8 ಚಿನ್ನದ ಪದಕ ಗೆದ್ದು ಪ್ರಭುತ್ವ ಸ್ಥಾಪಿಸಿರುವ ಭಾರತ, 1980ರ ಮಾಸ್ಕೊ ಒಲಿಂಪಿಕ್ಸ್ ಬಳಿಕ ಚಾಂಪಿಯನ್ ಆಗಿಲ್ಲ. ಕಳೆದ ಟೋಕಿಯೊ ಗೇಮ್ಸ್‌ನಲ್ಲಿ ಕಂಚು ಗೆದ್ದು ಪದಕದ ಬರವನ್ನು ನೀಗಿಸಿಕೊಂಡಿತ್ತು.
ಆದರೆ ಹಾಕಿ ತಂಡಕ್ಕೂ ಮೊದಲು 6 ಸದಸ್ಯರ ಆರ್ಚರಿ ತಂಡ ಒಲಿಂಪಿಕ್ ಗ್ರಾಮಕ್ಕೆ ಆಗಮಿಸಿದೆ. ಚೆಫ್ ಡಿ ಮಿಷನ್ ಗಗನ್ ನಾರಂಗ್ ಮತ್ತು ಸಹಾಯಕ ಚೆಫ್ ಡಿ ಮಿಷನ್ ಶಿವ ಕೇಶವನ್ ಅವರು ಈ ತಂಡಗಳಿಗೆ ಹಾರ್ದಿಕ ಸ್ವಾಗತ ಕೋರಿದರು.
Ad
You seem to have an Ad Blocker on.
To continue reading, please turn it off or whitelist Udayavani.