
Open AI: ಸ್ಯಾಮ್ ಆಲ್ಟ್ಮ್ಯಾನ್‌ರಿಂದ ಹೊಸ ಕಂಪನಿ ಶುರು?
Team Udayavani, Nov 19, 2023, 10:56 PM IST

ನವದೆಹಲಿ: ಶನಿವಾರ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಓಪನ್ ಎಐನ ಸಿಇಒ ಸ್ಥಾನದಿಂದ ವಜಾಗೊಂಡಿರುವ ಸ್ಯಾಮ್ ಆಲ್ಟ್ಮ್ಯಾನ್ ಹೊಸ ಕಂಪನಿ ಶುರು ಮಾಡುವ ಸಾಧ್ಯತೆಗಳು ಇವೆ. ಈ ಮೂಲಕ ಅವರು ಮತ್ತೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮುಂದುವರಿಯುವ ಸೂಚನೆ ನೀಡಿದ್ದಾರೆ.
ಹುದ್ದೆಯಿಂದ ವಜಾಗೊಂಡ ಮಾರನೇ ದಿನ ಅಂದರೆ ಭಾನುವಾರ ಟ್ವೀಟ್ ಮಾಡಿರುವ ಅವರು, “ಓಪನ್ ಎ.ಐ. ತಂಡವನ್ನು ಬಹುವಾಗಿ ಇಷ್ಟಪಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ಹಾರ್ಟ್ ಇಮೋಜಿಯನ್ನು ಟ್ವೀಟ್ ಮಾಡಿದ್ದಾರೆ. ಇನ್ನೊಂದೆಡೆ, ವಜಾಗೊಂಡಿರುವ ಸ್ಥಾನಕ್ಕೆ ಮತ್ತೆ ಅವರನ್ನೇ ನೇಮಿಸುವ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಚರ್ಚೆಗಳು ನಡೆದಿವೆ. ಇದೇ ವೇಳೆ, ಓಪನ್ ಎಐ ಆಡಳಿತ ಮಂಡಳಿ ಜತೆಗೆ ಮೈಕ್ರೋಸಾಫ್ಟ್ ಸೇರಿದಂತೆ ಹಲವು ಬಂಡವಾಳ ಹೂಡಿಕೆದಾರರು ಮಾತುಕತೆ ನಡೆಸಿ ಆಲ್ಟ್ಮ್ಯಾನ್‌ರನ್ನು ಮತ್ತೆ ನೇಮಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“Color of 2024”: ಪೀಚ್‌ಗೆ “2024ರ ವರ್ಣ”ದ ಗರಿ

China: ಚೀನಾದಲ್ಲಿ ಜಗತ್ತಿನ ಅತ್ಯಂತ ಆಳದ ಪ್ರಯೋಗಾಲಯ ಆರಂಭ

ಈಕೆಗೆ ದಿನಾ ತಿನ್ನಲು ಜಾನ್ಸನ್ ಬೇಬಿ ಪೌಡರೇ ಬೇಕಂತೆ… ಇದು ಬಿಟ್ಟು ಬೇರೆ ಏನು ಬೇಡ್ವಂತೆ

Guyana; ಮಿಲಿಟರಿ ಹೆಲಿಕಾಪ್ಟರ್ ಪತನ : 5 ಅಧಿಕಾರಿಗಳು ಮೃತ್ಯು, ಇಬ್ಬರು ಪಾರು

USA; ನಿಕ್ಕಿ ‘ಲಿಪ್‌ಸ್ಟಿಕ್ ಹಾಕಿರುವ ಫ್ಯಾಸಿಸ್ಟ್’!:ವಿವೇಕ್ ರಾಮಸ್ವಾಮಿ ಆರೋಪ