ಪಂಚಾಯತ್ ಚುನಾವಣೆ ; ಗೋವಾ ವಿಧಾನಸಭೆ ಕಲಾಪ ಮೊಟಕು
Team Udayavani, Jul 7, 2022, 5:17 PM IST
ಪಣಜಿ: ಗೋವಾ ವಿಧಾನಸಭೆಯ ಮುಂಗಾರು ಅಧಿವೇಶನದ ಅವಧಿಯನ್ನು ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಮುಂಬರುವ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭೆಯ ಕಲಾಪವನ್ನು ಮೊಟಕುಗೊಳಿಸಲಾಗುವುದು. 25 ದಿನಗಳ ಬದಲು 10 ದಿನಗಳ ಅಧಿವೇಶನ ನಡೆಸಲಾಗುವುದು.
ಜುಲೈ 11 ರಿಂದ 22 ರ ವರೆಗೆ ಅಧಿವೇಶನ ನಡೆಯಲಿದೆ ಎಂದು ಗೋವಾ ವಿಧಾನಸಭೆಯ ಸಭಾಪತಿ ರಮೇಶ್ ತವಡಕರ್ ಮಾಹಿತಿ ನೀಡಿದ್ದಾರೆ.
ಗೋವಾ ರಾಜ್ಯದಲ್ಲಿ ಪಂಚಾಯತ್ ಚುನಾವಣೆಯನ್ನು ನಿಗದಿತ ಸಮಯಕ್ಕೆ ನಡೆಸುವಂತೆ ಹೈ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಜುಲೈ 11 ರಿಂದ ಆಗಸ್ಟ್ 12 ರ ವರೆಗೆ ನಡೆಯಬೇಕಿದ್ದ ಅಧಿವೇಶನ ಕಲಾಪವನ್ನು ಮೊಟಕುಗೊಳಿಸಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ.