Udayavni Special

ಪ್ರಧಾನಿ ನೇತೃತ್ವದ ಸರ್ವ ಪಕ್ಷಗಳ ಸಭೆಯನ್ನು ಸ್ವಾಗತಿಸಿದ ಕಾಶ್ಮೀರದ ಪ್ರಾದೇಶಿಕ ಪಕ್ಷಗಳು..!

ಜೂನ್ 24 ರಂದು ಜಮ್ಮು ಕಾಶ್ಮೀರದಲ್ಲಿ ಸರ್ವ ಪಕ್ಷಗಳ ಸಭೆ

Team Udayavani, Jun 20, 2021, 6:47 PM IST

Parties in Kashmir welcome PM’s initiative of all-party meet

ಜಮ್ಮು : 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಇದೇ ಮೊದಲ ಬಾರಿಗೆ ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡು ಎಲ್ಲಾ ರಾಷ್ಟ್ರೀಯ ಪಕ್ಷಗಳ ಸಭೆಯನ್ನು ಬರುವ ಗುರವಾರ( ಜೂನ್ 24) ರಂದು ಕರೆದಿದೆ.

ಸರ್ವಪಕ್ಷ ಸಭೆ ಕರೆಯುವ ಪ್ರಧಾನ ಮಂತ್ರಿಯ ಪ್ರಯತ್ನವನ್ನು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳು ಸ್ವಾಗತಿಸಿವೆ. ಸಭೆ ಜೂನ್ 24 ರಂದು ನಡೆಯಲಿದ್ದು, ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ಈ ಹೆಜ್ಜೆಯನ್ನು ಸ್ವಾಗತಿಸಿದ್ದು, ಸಂವಾದವೇ ಮುಂದಿನ ದಾರಿ ಎಂದು ಹೇಳಿವೆ.

ಈ ಕುರಿತಾಗಿ ಪ್ರತಿಕ್ರಿಯಿಸಿದ  ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷ ಮೆಹಬೂಬಾ ಮುಫ್ತಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಇದುವರೆಗೆ  ಕೇಂದ್ರದಿಂದ ಕರೆ ಬಂದಿದೆ. ಆದರೆ, ಯಾವುದೇ ಪಕ್ಷಕ್ಕೆ ಇನ್ನೂ ಅಧಿಕೃತ ಆಹ್ವಾನವನ್ನು ಕಳುಹಿಸಲಾಗಿಲ್ಲ.

ಇದನ್ನೂ ಓದಿ : ಯೋಗಿ ಸಿಎಂ ಆಗಿ ಮುಂದುವರಿಯಲ್ಲ, 2022ರ ಚುನಾವಣೆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸಮುಖ!

“ನಮಗೆ ಯಾವುದೇ ಔಪಚಾರಿಕ ಲಿಖಿತ ಆಹ್ವಾನ ಬಂದಿಲ್ಲ. ಮೆಹಬೂಬಾ ಮುಫ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಕರೆದ ಸರ್ವ ಪಕ್ಷಗಳ ಸಭೆಯಲ್ಲಿ ಭಾಗವಹಿಸುತ್ತದೆಯೋ ಇಲ್ಲವೋ ಎಂಬುವುದಾಗಿ ನಿರ್ಧರಿಸಲಿದೆ ಎಂದು ಪಿಡಿಪಿ ತಿಳಿಸಿದೆ.

ಇನ್ನು,  ಬಿಜೆಪಿಯ ರಾಜ್ಯ ವಿಭಾಗ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಕೇಂದ್ರದಿಂದ ಯಾವುದೇ ಔಪಚಾರಿಕ ಆಹ್ವಾನ ಬಂದಿಲ್ಲ. ಆದರೆ ಪ್ರತಿಯೊಂದು ರಾಜಕೀಯ ಪಕ್ಷವೂ ಈ ಹೆಜ್ಜೆಯನ್ನು ಮೆಚ್ಚಿವೆ.

ಈ ಕುರಿತಾಗಿ ಮಾತನಾಡಿದ ಅಪ್ನಿ ಪಕ್ಷದ ಹಿರಿಯ ಮುಖಂಡ ರಫಿ ಮಿರ್,  ಸಭೆಯಲ್ಲಿ ಭಾಗವಹಿಸುವಂತೆ ಇದುವರೆಗೆ ಯಾವುದೇ ಔಪಚಾರಿಕ ಆಹ್ವಾನ ಬಂದಿಲ್ಲ, ಆದರೆ ಇದು ರಾಜಕೀಯ ಪಕ್ಷಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಉತ್ತಮ ಅವಕಾಶವಿದು ಎಂದು ನಾನು ಭಾವಿಸುತ್ತೇನೆ. ರಾಜಕೀಯ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳಿರುವುದರಿಂದ  ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು. ಎಲ್ಲಾ ಪ್ರತಿ ಪಕ್ಷಗಳು ಸಭೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದಾರೆ.

‘ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್’ (ಪಿಎಜಿಡಿ) ಎಂದು ಕರೆಯಲ್ಪಡುವ ಕಾಶ್ಮೀರದ ರಾಜಕೀಯ ಪಕ್ಷಗಳ ಸಂಘಟನೆಯು ಇಲ್ಲಿಯವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲವಾದರೂ, ಸಂಯೋಜಿತ ಪಕ್ಷಗಳು ಸಂಘಟಕರು ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಹೇಳಿದೆ.

ಪಿಎಜಿಡಿ ಸದಸ್ಯ ಮುಜಾಫರ್ ಷಾ  ಮಾತನಾಡಿ, ಈ ಸಭೆ ಸ್ವಾಗತಾರ್ಹ. ಪ್ರಧಾನಿಯವರೇ ಈ ಸಭೆಯನ್ನು ಕರೆದು ಮಾತಾಡುತ್ತಿದ್ದಾರೆ ಎಂದರೇ, ಇದು ಒಳ್ಳೆಯ ಬೆಳವಣಿಗೆ ಇಲ್ಲಿನ ಪರಿಸ್ಥಿತಿ ಹಾಗೂ ಎಲ್ಲಾ ವಿಚಾರಗಳ ಬಗ್ಗೆ ವಿಚಾರ ವಿನಿಮಯ ಆಗಬೇಕು.  ಆದರೆ ಅಂತಿಮ ತೀರ್ಮಾನವನ್ನು ಪಕ್ಷದ ಅಧ್ಯಕ್ಷರು ಮತ್ತು ಪಿಎಜಿಡಿ ನಾಯಕತ್ವ ತೆಗೆದುಕೊಳ್ಳಲಿದೆ. ಮತ್ತು ನಾವು ಅತ್ಯುತ್ತಮವಾದದ್ದನ್ನು ಆಶಿಸುತ್ತೇವೆ  ಎಂದು ಹೇಳಿದ್ದಾರೆ.

ಎನ್‌ ಸಿ ಸಂಸದ ಅಕ್ಬರ್ ಲೋನ್, ನಾವು ಆಹ್ವಾನವನ್ನು ಪಡೆದರೆ, ಸಭೆಯಲ್ಲಿ ಭಾಗಿಯಾಗುತ್ತೇವೆ. ನಮ್ಮಲ್ಲಿರುವ ಅಂಶಗಳನ್ನು ನಾವು ತಿಳಿಸುತ್ತೇವೆ ಎಂದಿದ್ದಾರೆ.

ಈ ಬೆಳವಣಿಗೆ ನಡೆಯುತ್ತಿರುವ ಹಿನ್ನಲೆಯಲ್ಲಿ, ಸರ್ಕಾರವು ಮೆಹಬೂಬಾ ಮುಫ್ತಿಯ ಸಂಬಂಧಿ ಸರ್ತಾಜ್ ಮಡ್ನಿ ಅವರನ್ನು ಬಂಧನದಿಂದ ಬಿಡುಗಡೆ ಮಾಡಿದೆ.

ಇನ್ನು, ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ, ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯ ನಂತರ, ಜಮ್ಮ ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದ್ದರು.

ಇದನ್ನೂ ಓದಿ : ಮೂಳೂರು : ತೀವ್ರ ಕಡಲ್ಕೊರೆತದಿಂದ ಹತ್ತಾರು ತೆಂಗಿನಮರಗಳು ಕಡಲಿಗೆ ಆಹುತಿ

ಟಾಪ್ ನ್ಯೂಸ್

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಜಿಲ್ಲೆ ಮತ್ತೆ ಕಡೆಗಣನೆ : ಕಾರ್ಯಕರ್ತರಿಗೆ ನಿರಾಸೆ

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಜಿಲ್ಲೆ ಮತ್ತೆ ಕಡೆಗಣನೆ : ಕಾರ್ಯಕರ್ತರಿಗೆ ನಿರಾಸೆ

ಉಡುಪಿ : ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮಹಿಳೆಗೆ 19 ಲ.ರೂ ವಂಚನೆ

ಬೆಲ್ಲದ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಜಿಲ್ಲೆಯ ಬಿಜೆಪಿ ನಾಯಕರ ಹುನ್ನಾರ :ಬೆಂಬಲಿಗರ ಅಸಮಧಾನ

ಬೆಲ್ಲದ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಜಿಲ್ಲೆಯ ಬಿಜೆಪಿ ನಾಯಕರ ಹುನ್ನಾರ :ಬೆಂಬಲಿಗರ ಅಸಮಧಾನ

shashikala-jolle-bommai-cabinet-minister

ಶಶಿಕಲಾ ಜೊಲ್ಲೆಯವರಿಗೆ ಸಚಿವ ಸ್ಥಾನ : ಚಿಕ್ಕೋಡಿ-ನಿಪ್ಪಾಣಿಯಲ್ಲಿ ಸಂಭ್ರಮಾಚರಣೆ

Madhya Pradesh floods: Over 1,200 villages affected, Army, Air Force pressed into action

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

Tokyo Olympics: ಸೆಮಿಫೈನಲ್ ನಲ್ಲಿ ಪರಾಜಯ-ಕಂಚಿನ ಪದಕ ಗೆದ್ದ ಬಾಕ್ಸರ್ ಲವ್ಲಿನಾ

Tokyo Olympics: ಸೆಮಿಫೈನಲ್ ನಲ್ಲಿ ಪರಾಜಯ-ಕಂಚಿನ ಪದಕ ಗೆದ್ದ ಬಾಕ್ಸರ್ ಲವ್ಲಿನಾ

ಬಿ.ವೈ ವಿಜಯೇಂದ್ರಗೆ ಇಲ್ಲ ಸಚಿವ ಪಟ್ಟ, ಯಡಿಯೂರಪ್ಪ ವಿರುದ್ಧ ಗುಡುಗಿದವರಿಗೆ ಶಾಕ್!

ಬಿ.ವೈ ವಿಜಯೇಂದ್ರಗೆ ಇಲ್ಲ ಸಚಿವ ಪಟ್ಟ, ಯಡಿಯೂರಪ್ಪ ವಿರುದ್ಧ ಗುಡುಗಿದವರಿಗೆ ಶಾಕ್!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಜಿಲ್ಲೆ ಮತ್ತೆ ಕಡೆಗಣನೆ : ಕಾರ್ಯಕರ್ತರಿಗೆ ನಿರಾಸೆ

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಜಿಲ್ಲೆ ಮತ್ತೆ ಕಡೆಗಣನೆ : ಕಾರ್ಯಕರ್ತರಿಗೆ ನಿರಾಸೆ

kaml-panth

ಜೋನ್‌ ಸಾವು ಲಾಕಪ್‌ ಡೆತ್‌ ಅಲ್ಲ; ಬಂಧಿತ ಐವರಲ್ಲಿ ಒಬ್ಬ ಡ್ರಗ್ಸ್‌ ವ್ಯಸನಿ

ಉಡುಪಿ : ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮಹಿಳೆಗೆ 19 ಲ.ರೂ ವಂಚನೆ

ಬೆಲ್ಲದ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಜಿಲ್ಲೆಯ ಬಿಜೆಪಿ ನಾಯಕರ ಹುನ್ನಾರ :ಬೆಂಬಲಿಗರ ಅಸಮಧಾನ

ಬೆಲ್ಲದ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಜಿಲ್ಲೆಯ ಬಿಜೆಪಿ ನಾಯಕರ ಹುನ್ನಾರ :ಬೆಂಬಲಿಗರ ಅಸಮಧಾನ

shashikala-jolle-bommai-cabinet-minister

ಶಶಿಕಲಾ ಜೊಲ್ಲೆಯವರಿಗೆ ಸಚಿವ ಸ್ಥಾನ : ಚಿಕ್ಕೋಡಿ-ನಿಪ್ಪಾಣಿಯಲ್ಲಿ ಸಂಭ್ರಮಾಚರಣೆ

MUST WATCH

udayavani youtube

50000 ರೂಪಾಯಿ ಕೊಡಿ, JOB ಕೊಡ್ತಿನಿ?

udayavani youtube

ಆಕ್ಟಿಂಗ್ ಎಲ್ಲಾ ನಿನಗೆ ಯಾಕೆ ಬೇರೆ ಒಳ್ಳೆಯ ಕೆಲಸ ಮಾಡು ಅಂದಿದ್ರು : ರಾಕೇಶ್ ಪೂಜಾರಿ

udayavani youtube

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ರಸ್ತೆ ಬಂದ್ ಮಾಡಿದರೂ ಜನ ಕ್ಯಾರೇ ಎನ್ನಲ್ಲ

udayavani youtube

ಕಿರುಕುಳ ನೀಡಲು ಮುಂದಾದ ವ್ಯಕ್ತಿಯ ಸ್ಕೂಟರ್ ಚರಂಡಿಗೆಸೆದ ಮಹಿಳೆ

udayavani youtube

ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡ ಕೋವಿಡ್ ಸೋಂಕಿನ ಪ್ರಮಾಣ

ಹೊಸ ಸೇರ್ಪಡೆ

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಜಿಲ್ಲೆ ಮತ್ತೆ ಕಡೆಗಣನೆ : ಕಾರ್ಯಕರ್ತರಿಗೆ ನಿರಾಸೆ

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಜಿಲ್ಲೆ ಮತ್ತೆ ಕಡೆಗಣನೆ : ಕಾರ್ಯಕರ್ತರಿಗೆ ನಿರಾಸೆ

kaml-panth

ಜೋನ್‌ ಸಾವು ಲಾಕಪ್‌ ಡೆತ್‌ ಅಲ್ಲ; ಬಂಧಿತ ಐವರಲ್ಲಿ ಒಬ್ಬ ಡ್ರಗ್ಸ್‌ ವ್ಯಸನಿ

ಉಡುಪಿ : ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮಹಿಳೆಗೆ 19 ಲ.ರೂ ವಂಚನೆ

ಬೆಲ್ಲದ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಜಿಲ್ಲೆಯ ಬಿಜೆಪಿ ನಾಯಕರ ಹುನ್ನಾರ :ಬೆಂಬಲಿಗರ ಅಸಮಧಾನ

ಬೆಲ್ಲದ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಜಿಲ್ಲೆಯ ಬಿಜೆಪಿ ನಾಯಕರ ಹುನ್ನಾರ :ಬೆಂಬಲಿಗರ ಅಸಮಧಾನ

shashikala-jolle-bommai-cabinet-minister

ಶಶಿಕಲಾ ಜೊಲ್ಲೆಯವರಿಗೆ ಸಚಿವ ಸ್ಥಾನ : ಚಿಕ್ಕೋಡಿ-ನಿಪ್ಪಾಣಿಯಲ್ಲಿ ಸಂಭ್ರಮಾಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.