ಇನ್ಸ್ ಪೆಕ್ಟರ್ ವಿಕ್ರಂ ನಿರೀಕ್ಷೆಯಲ್ಲಿ ಪ್ರಜ್ವಲ್
Team Udayavani, May 31, 2020, 4:10 AM IST
ನಟ ಪ್ರಜ್ವಲ್ ದೇವರಾಜ್ ಅವರ ಸಿನಿಮಾಗಳ ಫಲಿತಾಂಶ ಏನೇ ಆಗಿರಬಹುದು, ಆದರೆ, ಪ್ರಜ್ವಲ್ ಮಾತ್ರ ಸದಾ ಸಿನಿಮಾಗಳಲ್ಲಿ ಬಿಝಿ. ಸತತವಾಗಿ ಚಿತ್ರೀಕರಣದಲ್ಲಿ ಬಿಝಿಯಾಗಿರುವ ಪ್ರಜ್ವಲ್ ಫ್ಯಾಮಿಲಿ ಜೊತೆ ಸಮಯ ಕಳೆಯಲು ಕೂಡಾ ಸರಿಯಾಗಿ ಬಿಡುವು ಸಿಗುತ್ತಿರಲಿಲ್ಲ. ಆದರೆ, ಈಗ ಪ್ರಜ್ವಲ್ ಲಾಕ್ಡೌನ್ನಿಂದಾಗಿ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ. ಕುಟುಂಬ ಜೊತೆ ಜಾಲಿಯಾಗಿದ್ದಾರೆ.
ಇತ್ತೀಚೆಗೆ ತನ್ನ ಪತ್ನಿ ಜೊತೆ ಹಾಡೊಂದಕ್ಕೆ ಸ್ಟೆಪ್ ಹಾಕಿದ ವಿಡಿಯೋ ಸಖತ್ ವೈರಲ್ ಆಗಿತ್ತು. ಸದ್ಯ ಪ್ರಜ್ವಲ್ ದೇವರಾಜ್ ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದ ಮೂಲಕ ಮತ್ತೂಂದು ಮಾಸ್ ಎಂಟ್ರಿ ಕೊಡೋದಕ್ಕೆ ರೆಡಿಯಾಗುತ್ತಿದ್ದಾರೆ. ಈಗಾಗಲೇ ತನ್ನ ಬಹುತೇಕ ಕೆಲಸ ಪೂರ್ಣಗೊಳಿಸಿರುವ ಇನ್ಸ್ ಪೆಕ್ಟರ್ ವಿಕ್ರಂ ಇಷ್ಟೊತ್ತಿಗಾಗಲೇ ತೆರೆಗೆ ಬರಬೇಕಿತ್ತು. ಆದರೆ, ಕೊರೊನಾ ಲಾಕ್ ಡೌನ್ ಅದೆಲ್ಲದಕ್ಕೂ ಬ್ರೇಕ್ ಹಾಕಿದೆ. ಇನ್ನು ಈ ಚಿತ್ರದಲ್ಲಿ ದರ್ಶನ್ ಕೂಡಾ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಚಿತ್ರವನ್ನು ವಿಖ್ಯಾತ್ ನಿರ್ಮಾಣ ಮಾಡಿದ್ದು, ಅನೂಪ್ ಸೀಳಿನ್ ಸಂಗೀತವಿದೆ.
ಈಗಾಗಲೇ ಚಿತ್ರದ ಆಡಿಯೋ ಹುಬ್ಬಳ್ಳಿಯಲ್ಲಿ ಬಿಡುಗಡೆ ಯಾಗಿದ್ದು, ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಜ್ವಲ್ಗೆ ನಾಯಕಿಯಾಗಿ ಭಾವನಾ ಕಾಣಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ತೆರೆಮೇಲೆ ಜಂಟಲ್ ಮನ್ ಗೆಟಪಿನಲ್ಲಿ ಸಿನಿ ಪ್ರೇಕ್ಷಕರ ಮುಂದೆ ಹಾಜರಾಗಿದ್ದರು ನಟ ಪ್ರಜ್ವಲ್ ದೇವರಾಜ್. ಜಂಟಲ್ ಮನ್ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಚಿತ್ರ ಬಾಕ್ಸಾಫೀಸ್ ನಲ್ಲಿ ಅಂದುಕೊಂಡ ಮಟ್ಟಗೆ ಸದ್ದು ಮಾಡಲಿಲ್ಲ. ಈಗ ಇನ್ಸ್ ಪೆಕ್ಟರ್ ವಿಕ್ರಂ ಮೇಲೆ ನಿರೀಕ್ಷೆ ಇಟ್ಟಿದ್ದಾರೆ.