Udayavni Special

ಆರ್ಥಿಕ, ಸೈಬರ್‌ ಅಪರಾಧ ತಡೆಗೆ ಆದ್ಯತೆ ನೀಡಿ


Team Udayavani, Dec 18, 2019, 3:09 AM IST

arthika-cybe

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಆರ್ಥಿಕ ಹಾಗೂ ಸೈಬರ್‌ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ನಡೆದ ಬೆಂಗಳೂರು ನಗರ ಸೈಬರ್‌, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ನಿಗ್ರಹ ಪೊಲೀಸ್‌ ಠಾಣೆಗಳು ಮತ್ತು ಭಯೋತ್ಪಾದನಾ ನಿಗ್ರಹ ದಳದ ಉದ್ಘಾಟನಾ ಸಮಾರಂಭ ಹಾಗೂ 88 ಹೆದ್ದಾರಿ ಗಸ್ತು ವಾಹನಗಳಿಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು. ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಪಾಲನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಜೊತೆಗೆ ಪೊಲೀಸರ ಯೋಗಕ್ಷೇಮವನ್ನು ನೋಡಿಕೊಳ್ಳುವುದಕ್ಕೂ ಸರ್ಕಾರ ಆದ್ಯತೆ ನೀಡಿದೆ ಎಂದರು.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಆರ್ಥಿಕ ಹಾಗೂ ಸೈಬರ್‌ ಅಪರಾಧಗಳು, ಅತ್ಯಾಚಾರ ಪ್ರಕರಣಗಳನ್ನು ತಡೆಯುವುದಕ್ಕೆ ಹೆಚ್ಚಿನ ನಿಗಾ ವಹಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರೂ ಜಾಗರೂಕತೆಯಿಂದ ಹಣ ತೊಡಗಿಸಬೇಕು. ಸೈಬರ್‌ ಅಪರಾಧಗಳ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರವನ್ನು ಬೆಂಗಳೂ ರಿನ ಸಿಐಡಿ ಕಚೇರಿಯಲ್ಲಿ ಸ್ಥಾಪಿಸಲಾಗಿದೆ.

ಪೊಲೀಸರಿಗೆ ಅಗತ್ಯ ತರಬೇತಿ ನೀಡಿ ಸೈಬರ್‌ ಪೊಲೀಸ್‌ ಠಾಣೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು. ಹೆದ್ದಾರಿ ಗಸ್ತು ವಾಹನಗಳಿಗೆ ಕರೆ ಬಂದ ಒಂದು ನಿಮಿಷದಲ್ಲಿ ಸ್ಥಳಕ್ಕೆ ವಾಹನ ಕಳುಹಿಸಲು ಕ್ರಮ ಕೈಗೊಂಡು, ಇಪ್ಪತ್ತು ನಿಮಿಷದಲ್ಲಿ ತಲುಪುವಂತೆ ಮಾಡ ಬೇಕು. ಅಪಘಾತ ನಡೆದ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ, ಟ್ರಾಮಾ ಸೆಂಟರ್‌ ಅಥವಾ ಆಸ್ಪತ್ರೆಗೆ ಗಾಯಾಳುಗಳನ್ನು ಸ್ಥಳಾಂತರಿಸುವ ವ್ಯವಸ್ಥೆ ಮಾಡ ಬೇಕು.

ಭಯೋತ್ಪಾದನೆ ಚಟುವಟಿಕೆ ನಿಯಂತ್ರಣ, ಕಳ್ಳತನ, ಡಕಾಯಿತಿ ನಡೆಯುವ ಸೂಕ್ಷ್ಮ ಸ್ಥಳಗಳಲ್ಲಿ ಹೆದ್ದಾರಿ ಗಸ್ತು ವಾಹನಗಳ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು. ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಮುಖ್ಯ ಮಂತ್ರಿಗಳ “ಸಾಂತ್ವನ’ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಭಯೋತ್ಪಾದನಾ ಮುಕ್ತ ನಗರ ನಮ್ಮ ಗುರಿ: ಬೆಂಗಳೂರಿನಲ್ಲಿ ಭಯೋತ್ಪಾದಕ ಸ್ಲಿಪರ್‌ ಸೆಲ್‌ಗ‌ಳಿವೆ ಎಂದು ಎನ್‌ಐಎ ಮಾಹಿತಿ ಬಂದಿದೆ. ಹೀಗಾಗಿ, ಬೆಂಗಳೂರಿಗೆ ಪ್ರತ್ಯೇಕ ಭಯೋತ್ಪಾದಕ ನಿಗ್ರಹ ದಳ ಸ್ಥಾಪನೆ ಮಾಡುತ್ತಿದ್ದೇವೆ. ಬೆಂಗಳೂರನ್ನು ಭಯೋತ್ಪಾದನಾ ಮುಕ್ತ ಹಾಗೂ ನಾಗರಿಕ ಸ್ನೇಹಿ ನಗರ ಮಾಡುವುದು ನಮ್ಮ ಗುರಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಸೈಬರ್‌ ಕ್ರೈಂ ಹಾಗೂ ಆರ್ಥಿಕ ಅಪರಾಧಗಳ ನಡುವೆ ನೇರ ಸಂಬಂಧ ಇದೆ.

ಇತ್ತೀಚೆಗೆ ಸೈಬರ್‌ ಕ್ರೈಂ, ಆರ್ಥಿಕ ಅಪರಾಧ ಹಾಗೂ ಮಾದಕ ವಸ್ತು ಮಾರಾಟ ಬಳಕೆ ಪ್ರಕರಣಗಳು ಹೆಚ್ಚಾಗಿವೆ. ಒಂದೊಂದು ಸೈಬರ್‌ ಠಾಣೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾದಾಗ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ, ಬೆಂಗಳೂರು ವಿಭಾಗದಲ್ಲಿ 8 ಸೈಬರ್‌ ಪೊಲೀಸ್‌ ಠಾಣೆಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಠಾಣೆಗಳಲ್ಲಿ 35 ರಿಂದ 50 ಸಾವಿರ ಮಾಸಿಕ ಸಂಬಳ ನೀಡಿ ಐಟಿ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.

ಪೊಲೀಸರು ಅಪ್‌ಡೇಟ್‌ ಆಗಬೇಕು: ಶಾಸಕ ರಿಜ್ವಾನ್‌ ಅರ್ಷದ್‌ ಮಾತನಾಡಿ, ಇತ್ತೀಚೆಗೆ ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್‌ಗ್ಳಲ್ಲಿ ಫೇಕ್‌ ಸುದ್ದಿಗಳ ಹಾವಳಿ ಹೆಚ್ಚಾಗಿದೆ. ಅದನ್ನು ಮಟ್ಟ ಹಾಕಬೇಕಿದೆ. ಯುವ ಪೀಳಿಗೆ ಮಾದಕ ವಸ್ತುಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಪೊಲೀಸರು ಮನಸು ಮಾಡಿದರೆ ಒಂದೇ ನಿಮಿಷದಲ್ಲಿ ಇದನ್ನು ನಿಯಂತ್ರಿಸಬಹುದು. ಶಾಲಾ-ಕಾಲೇಜುಗಳ ಬಳಿ ಡ್ರಗ್ಸ್‌ ಮಾರಾಟ ನಡೆಯುತ್ತಲೇ ಇದೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಭಯೋತ್ಪಾದನೆ ವಿಷಯದಲ್ಲಿ ಯಾವತ್ತೂ ಹೊಂದಾಣಿಕೆ ಮಾಡಿಕೊಳ್ಳಬೇಕಿಲ್ಲ. ಯಾವುದೇ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಹಣೆ ಪಟ್ಟಿ ಕಟ್ಟುವ ಮೊದಲು ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕು. ಇಲ್ಲದಿದ್ದರೆ ಅವರು ಸುಲಭವಾಗಿ ಹೊರ ಬರುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಪೌರತ್ವ ಕಾಯ್ದೆ ಜಾರಿ: ಬೊಮ್ಮಾಯಿ
ಬೆಂಗಳೂರು: ರಾಷ್ಟ್ರೀಯ ಪೌರತ್ವ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಷ್ಟ್ರೀಯ ಪೌರತ್ವ ಕಾಯ್ದೆ ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆಗೊಂಡಿದ್ದು, ರಾಷ್ಟ್ರಪತಿಯವರು ಅದಕ್ಕೆ ಅಂಕಿತ ಹಾಕಿದ್ದಾರೆ. ಅಲ್ಲದೇ ಅದು ಸಮವರ್ತಿ ಪಟ್ಟಿಯಲ್ಲಿದೆ. ಹಾಗಾಗಿ, ಎಲ್ಲ ರಾಜ್ಯಗಳು ಈ ಕಾಯ್ದೆಯನ್ನು ಜಾರಿಗೊಳಿಸಬೇಕು. ಕೆಲವು ರಾಜ್ಯಗಳು ರಾಜಕೀಯ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದರು.

ಅಸ್ಸಾಂ, ದೆಹಲಿ, ಉತ್ತರ ಪ್ರದೇಶದಲ್ಲಿ ನಡೆದಂತೆ ರಾಜ್ಯದಲ್ಲಿ ಹಿಂಸಾತ್ಮಕ ಘಟನೆಗಳು ನಡೆಯುವುದಿಲ್ಲ ಎಂಬ ವಿಶ್ವಾಸ ಇದೆ. ಅಲ್ಲದೇ ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದೇ ವೇಳೆ, ತಾವು ಜಲ ಸಂಪನ್ಮೂಲ ಖಾತೆಗೆ ಮುಖ್ಯಮಂತ್ರಿ ಬಳಿ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದರು. ಯಾವುದೇ ಖಾತೆಗೂ ನಾನು ಬೇಡಿಕೆ ಇಟ್ಟಿಲ್ಲ. ಪಕ್ಷ ವಹಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಯಾವುದೇ ಊಹಾಪೋಹ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದರು.

ಟಾಪ್ ನ್ಯೂಸ್

k s eshwarappa

ಕುತೂಹಲ ಮೂಡಿಸಿದ ಈಶ್ವರಪ್ಪ ಸುದ್ದಿಗೋಷ್ಠಿ:ಶೆಟ್ಟರ್ ರೀತಿಯಲ್ಲೇ ನಿರ್ಧಾರ ಮಾಡ್ತಾರಾ BJPನಾಯಕ

ninna sanihake

ಪ್ರೇಕ್ಷಕರ ಸನಿಹಕೆ ಬರೋಕೆ ರೆಡಿ: ಆಗಸ್ಟ್‌ 1ಕ್ಕೆ ಟ್ರೇಲರ್‌, ಆ. 20ಕ್ಕೆ ಸಿನಿಮಾ ರಿಲೀಸ್

ಭಾರತ:ಕಳೆದ 24ಗಂಟೆಗಳಲ್ಲಿ 43,509 ಕೋವಿಡ್ ಪ್ರಕರಣ ಪತ್ತೆ,ಸಕ್ರಿಯ ಪ್ರಕರಣ 4ಲಕ್ಷಕ್ಕೆ ಏರಿಕೆ

ಭಾರತ:ಕಳೆದ 24ಗಂಟೆಗಳಲ್ಲಿ 43,509 ಕೋವಿಡ್ ಪ್ರಕರಣ ಪತ್ತೆ,ಸಕ್ರಿಯ ಪ್ರಕರಣ 4ಲಕ್ಷಕ್ಕೆ ಏರಿಕೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ

ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ

ಹೂಡಿಕೆದಾರರಿಗೆ ವಿಮಾ ರಕ್ಷಣೆ; 90 ದಿನದಲ್ಲಿ ಠೇವಣಿದಾರರಿಗೆ ಹಣ ವಾಪಸ್‌ ನಿಶ್ಚಿತ

ಹೂಡಿಕೆದಾರರಿಗೆ ವಿಮಾ ರಕ್ಷಣೆ; 90 ದಿನದಲ್ಲಿ ಠೇವಣಿದಾರರಿಗೆ ಹಣ ವಾಪಸ್‌ ನಿಶ್ಚಿತ

ಸಂಬಳ, ಪಿಂಚಣಿ, ಇಎಂಐ ಪಾವತಿ ನಿಯಮಗಳಲ್ಲಿ ಬದಲಾವಣೆ 

ಸಂಬಳ, ಪಿಂಚಣಿ, ಇಎಂಐ ಪಾವತಿ ನಿಯಮಗಳಲ್ಲಿ ಬದಲಾವಣೆ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k s eshwarappa

ಕುತೂಹಲ ಮೂಡಿಸಿದ ಈಶ್ವರಪ್ಪ ಸುದ್ದಿಗೋಷ್ಠಿ:ಶೆಟ್ಟರ್ ರೀತಿಯಲ್ಲೇ ನಿರ್ಧಾರ ಮಾಡ್ತಾರಾ BJPನಾಯಕ

ನಾಳೆ ದೆಹಲಿಗೆ ತೆರಳಿ ಪ್ರಧಾನಿ ಜೊತೆ ಚರ್ಚೆ ಮಾಡುತ್ತೇನೆ: ಸಿಎಂ ಬೊಮ್ಮಾಯಿ

ನಾಳೆ ದೆಹಲಿಗೆ ತೆರಳಿ ಪ್ರಧಾನಿ ಜೊತೆ ಚರ್ಚೆ ಮಾಡುತ್ತೇನೆ: ಸಿಎಂ ಬೊಮ್ಮಾಯಿ

ಬಿಎಸ್‌ವೈ ನೆರಳಾಗಬೇಡಿ:  ಬೊಮ್ಮಾಯಿಗೆ ದಿಲ್ಲಿ ವೀಕ್ಷಕರ ಕಿವಿಮಾತು

ಬಿಎಸ್‌ವೈ ನೆರಳಾಗಬೇಡಿ:  ಬೊಮ್ಮಾಯಿಗೆ ದಿಲ್ಲಿ ವೀಕ್ಷಕರ ಕಿವಿಮಾತು

ಹೊಸಬರ ನಿರೀಕ್ಷೆ , ಹಳಬರ ಆತಂಕ

ಹೊಸಬರ ನಿರೀಕ್ಷೆ , ಹಳಬರ ಆತಂಕ

Untitled-1

ಪಿಯು ಉಪನ್ಯಾಸಕರ ವರ್ಗಾವಣೆಗೆ ಅಧ್ಯಾದೇಶಕ್ಕೆ ಸಿದ್ಧತೆ

MUST WATCH

udayavani youtube

ಉದುರಿದ ಹೂಗಳಲ್ಲಿ ಅಕ್ಷರ ,123 ಬರಿಸುತ್ತಿದ್ದೆ!

udayavani youtube

ಶುಭಾಶಯಗಳು ಮಾಮ : ಬಸವರಾಜ್ ಬೊಮ್ಮಾಯಿಗೆ ಕಿಚ್ಚ ಸುದೀಪ್ ಹಾರೈಕೆ

udayavani youtube

ಹಳ್ಳಿಯ ಹೋಟೆಲ್ ಉದ್ಯಮದಲ್ಲಿ ತೃಪ್ತಿ ಕಂಡುಕೊಂಡ IT ಉದ್ಯೋಗಿಗಳು!

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

ಹೊಸ ಸೇರ್ಪಡೆ

ಸುಪ್ರೀಂ ತೀರ್ಪು ಬಂದ ಕೂಡಲೇ ಕೃಷ್ಣ ಮೇಲ್ದಂಡೆ ಕಾಮಗಾರಿಗೆ ಚಾಲನೆ: ಸಿಎಂ ಬೊಮ್ಮಾಯಿ

ಸುಪ್ರೀಂ ತೀರ್ಪು ಬಂದ ಕೂಡಲೇ ಕೃಷ್ಣ ಮೇಲ್ದಂಡೆ ಕಾಮಗಾರಿಗೆ ಚಾಲನೆ: ಸಿಎಂ ಬೊಮ್ಮಾಯಿ

k s eshwarappa

ಕುತೂಹಲ ಮೂಡಿಸಿದ ಈಶ್ವರಪ್ಪ ಸುದ್ದಿಗೋಷ್ಠಿ:ಶೆಟ್ಟರ್ ರೀತಿಯಲ್ಲೇ ನಿರ್ಧಾರ ಮಾಡ್ತಾರಾ BJPನಾಯಕ

ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ(ರಿ) ಕಾಪು; ಟೆಂಡರ್ ಆಹ್ವಾನ

ಜಾಹೀರಾತು: ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ(ರಿ) ಕಾಪು; ಟೆಂಡರ್ ಆಹ್ವಾನ

ninna sanihake

ಪ್ರೇಕ್ಷಕರ ಸನಿಹಕೆ ಬರೋಕೆ ರೆಡಿ: ಆಗಸ್ಟ್‌ 1ಕ್ಕೆ ಟ್ರೇಲರ್‌, ಆ. 20ಕ್ಕೆ ಸಿನಿಮಾ ರಿಲೀಸ್

ಭಾರತ:ಕಳೆದ 24ಗಂಟೆಗಳಲ್ಲಿ 43,509 ಕೋವಿಡ್ ಪ್ರಕರಣ ಪತ್ತೆ,ಸಕ್ರಿಯ ಪ್ರಕರಣ 4ಲಕ್ಷಕ್ಕೆ ಏರಿಕೆ

ಭಾರತ:ಕಳೆದ 24ಗಂಟೆಗಳಲ್ಲಿ 43,509 ಕೋವಿಡ್ ಪ್ರಕರಣ ಪತ್ತೆ,ಸಕ್ರಿಯ ಪ್ರಕರಣ 4ಲಕ್ಷಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.