Udayavni Special

“ಕೇಂದ್ರದಿಂದ ದೇಶ ಮಾರಾಟಕ್ಕೆ ಯತ್ನ’ : ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

Team Udayavani, Mar 3, 2021, 4:10 AM IST

“ಕೇಂದ್ರದಿಂದ ದೇಶ ಮಾರಾಟಕ್ಕೆ ಯತ್ನ’ : ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಕಡಬ: ಬಣ್ಣದ ಮಾತು ಗಳನ್ನಾಡಿ ಜನರಿಗೆ ಮೋಡಿ ಮಾಡಿ ಅಧಿಕಾರಕ್ಕೇರಿದ ಮೋದಿ ನೇತೃತ್ವದ ಕೇಂದ್ರ ಸರಕಾರವು ದೇಶವನ್ನೇ ಮಾರಾಟ ಮಾಡಲು ಮುಂದಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳಿಂದಾಗಿ ಜನರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರವು ರೈತ ವಿರೋಧಿಯಾಗಿ ಆಡಳಿತ ನಡೆಸುತ್ತಿದೆ ಎಂದು ಕಡಬ ಸರ್ವ ಪಕ್ಷಗಳ ಒಕ್ಕೂಟದ ಸಂಚಾಲಕ, ಕಡಬ ತಾಲೂಕು ಜೆಡಿಎಸ್‌ ಅಧ್ಯಕ್ಷ ಸಯ್ಯದ್‌ ಮೀರಾ ಸಾಹೇಬ್‌ ಹೇಳಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಕಡಬದ ಸರ್ವ ಪಕ್ಷಗಳ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಕಡಬ ಪೇಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಎಸ್‌ಡಿಪಿಐ ಮುಖಂಡ ಆನಂದ ಮಿತ್ತಬೈಲ್‌ ಮಾತನಾಡಿ, ಹಿಟ್ಲರ್‌ ಮಾದರಿ ಆಡಳಿತ ದೇಶದಲ್ಲಿದೆ. ರಾಮನ ಹೆಸರು ಮತ್ತು ಧರ್ಮದ ಅಫೀಮನ್ನು ಜನರಿಗೆ ತಿನ್ನಿಸಿ ಅಧಿಕಾರ ಪಡೆದಿರುವ ಅವರು ಮುಂದಿನ ಚುನಾವಣೆಗಾಗಿ ಹಣ ಕ್ರೋಢೀಕರಿಸುವುದಕ್ಕಾಗಿ ದೇಶದ ಜನರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದರು.

ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಜಾಕೆ ಮಾಧವ ಗೌಡ ಮಾತನಾಡಿ, ಚಹಾ ಮಾರುತ್ತಿದ್ದ ಮೋದಿ ಪ್ರಧಾನಿಯಾದ ಮೇಲೆ ದೇಶವನ್ನೇ ಅದಾನಿ, ಅಂಬಾನಿಗೆ ಮಾರಾಟ ಮಾಡುತ್ತಿದ್ದಾರೆ. ಪೆಟ್ರೋಲ್‌ ಡೀಸೆಲ್‌ ಬೆಲೆ ಏರುತ್ತಲೇ ಇದೆ ಎಂದರು.

ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ ಮಾತನಾಡಿದರು. ಎಸ್‌ಡಿಪಿಐ ಮುಖಂಡರಾದ ಹಾರಿಸ್‌ ಕಳಾರ, ನಬಿ ಶಾನ್‌, ನೌಶಾದ್‌ ಕಡಬ, ಜೆಡಿಎಸ್‌ ಮುಖಂಡರಾದ ಚಂದ್ರಶೇಖರ ಗೌಡ ಕೋಡಿಬೈಲು, ಸುಂದರ ಗೌಡ ಬಳ್ಳೇರಿ, ಸ್ಕರಿಯಾ ಕಳಾರ, ಸೋಮಸುಂದರ ಕೂಜುಗೋಡು, ದಿನೇಶ್‌ ಮಾಸ್ಟರ್‌, ದುಗ್ಗಪ್ಪ ಅಗ್ರಹಾರ, ನಾರಾಯಣ ಆಗ್ರಹಾರ, ಶಿವರಾಮ ಸುಬ್ರಹ್ಮಣ್ಯ, ಬಾಬು ಇಚ್ಲಂಪಾಡಿ, ಎಲಿಯಾಸ್‌ ಮದನಿ ಕೋಡಿಂಬಾಳ, ಇ.ಜಿ.ಜೋಸೆಫ್‌, ಎಂ.ಪಿ.ಪುಷ್ಪರಾಜ್‌, ಪ್ರವೀಣ್‌ ಮುಂಡೋಡಿ ಭಾಗವಹಿಸಿದ್ದರು.

ಜಲೀಲ್‌ ಕಳಾರ ನಿರೂಪಿಸಿ ವಂದಿಸಿದರು. ಪ್ರತಿಭಟನೆಯ ಬಳಿಕ ಕಡಬ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯ ವೇಳೆ ರಸ್ತೆಯಲ್ಲಿಯೇ ಒಲೆ ಉರಿಸಿ ಚಪಾತಿ ಬಿಸಿ ಮಾಡುವ ಮೂಲಕ ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಲಾಯಿತು.

ಜೆಡಿಎಸ್‌ನಿಂದ 80 ಕೋಟಿ ರೂ. ಅನುದಾನ
ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 10 ತಿಂಗಳ ಅವಧಿಯಲ್ಲಿ ಜೆಡಿಎಸ್‌ ಮುಖಂಡ ಸಯ್ಯದ್‌ ಮೀರಾ ಸಾಹೇಬ್‌ ಅವರ ಮನವಿಯಂತೆ ಕಡಬ ಪರಿಸರದಲ್ಲಿ ರಸ್ತೆ, ಸೇತುವೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ 80 ಕೋಟಿ ರೂ.ಗಳಿಗೂ ಮಿಕ್ಕಿ ಅನು ದಾನ ನೀಡಿದ್ದಾರೆ. ಈಗ ಅದರ ಗುದ್ದಲಿಪೂಜೆ, ಉದ್ಘಾಟನೆ ಮಾಡುತ್ತಿರುವ ಬಿಜೆಪಿಯವರು ನಾವು ಅಭಿವೃದ್ಧಿ ಮಾಡಿದ್ದು ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಸಾಲ್ಯಾನ್‌ ಲೇವಡಿ ಮಾಡಿದರು.

ಟಾಪ್ ನ್ಯೂಸ್

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.

ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಟ್ಲ: ಎರಡು ಬೈಕ್ ಗಳಿಗೆ ಢಿಕ್ಕಿ ಹೊಡೆದ ಕಾರು; ಓರ್ವನಿಗೆ ಗಾಯ

ವಿಟ್ಲ: ಎರಡು ಬೈಕ್ ಗಳಿಗೆ ಢಿಕ್ಕಿ ಹೊಡೆದ ಕಾರು; ಓರ್ವನಿಗೆ ಗಾಯ

ಬಂಟ್ವಾಳ: ಗಾಳಿ ಮಳೆಗೆ ಹಲವೆಡೆ ಹಾನಿ

ಬಂಟ್ವಾಳ: ಗಾಳಿ ಮಳೆಗೆ ಹಲವೆಡೆ ಹಾನಿ

ಶಿಶಿಲ ದೇವರ ಮೀನಿಗೂ ಕಾಡಲಿದೆಯೇ ಜಲಕ್ಷಾಮ?

ಶಿಶಿಲ ದೇವರ ಮೀನಿಗೂ ಕಾಡಲಿದೆಯೇ ಜಲಕ್ಷಾಮ?

ಪುತ್ತೂರು ಸಂತೆ ಇಂದು ಪುನರಾರಂಭ :  ವರ್ಷದ ಬಳಿಕ ವಹಿವಾಟು

ಪುತ್ತೂರು ಸಂತೆ ಇಂದು ಪುನರಾರಂಭ :  ವರ್ಷದ ಬಳಿಕ ವಹಿವಾಟು

ಪೊಳಲಿ: ಸರಳ ಜಾತ್ರೆ ; ರಥೋತ್ಸವ ಸಂಪನ್ನ

ಪೊಳಲಿ: ಸರಳ ಜಾತ್ರೆ ; ರಥೋತ್ಸವ ಸಂಪನ್ನ

MUST WATCH

udayavani youtube

Kanchipuram ಸೀರೆಗಳ ನಿಮ್ಮ Favorite Spot

udayavani youtube

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

udayavani youtube

ಸಾವಿರ ಮಂದಿಗೆ ಕೇವಲ 2 ಫ್ಯಾನ್!

udayavani youtube

ಸಾರಿಗೆ ನೌಕರರ ಕುಟುಂಬದ ಸದಸ್ಯರಿಂದ ತಟ್ಟೆ, ಲೋಟ ಪ್ರತಿಭಟನೆ

udayavani youtube

ಇಲ್ಲಿ ಮನುಷ್ಯರಂತೆ ಕೋಣಗಳಿಗೂ ಇದೆ Swimming Pool

ಹೊಸ ಸೇರ್ಪಡೆ

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.