ದಾವಣಗೆರೆ : ಮನೆಯಲ್ಲಿ ಸಿಕ್ಕಿತು ಡಜನ್ ಗಟ್ಟಲೆ ಪ್ರಶ್ನೆ ಪತ್ರಿಕೆ
Team Udayavani, Sep 28, 2019, 7:13 PM IST
ದಾವಣಗೆರೆ : ಬೆಣ್ಣೆ ನಗರಿಯಲ್ಲಿ ಪ್ರಶ್ನೆ ಪತ್ರಿಕೆ ಮಾಫಿಯಾ ಜಾಲ ಹೆಚ್ಚಾಗುತ್ತಿದ್ದು ಇದಕ್ಕೆ ಪೂರಕವೆಂಬಂತೆ ಪೋಲೀಸರು ನಡೆಸಿದ ದಾಳಿಯಲ್ಲಿ
ಕೆಟಿಜೆ ನಗರದ ಮನೆಯೊಂದರಲ್ಲಿ ಬಂಡಲ್ ಗಟ್ಟಲೆ ಪ್ರಶ್ನೆ ಪತ್ರಿಕೆ ಪತ್ತೆಯಾಗಿದೆ .
ಮೇ 26 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಟಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ದಾವಣಗೆರೆಯ ಕೆಟಿಜೆ ನಗರದ 17 ನೇ ಕ್ರಾಸ್ ನ ಮನೆಯಲ್ಲಿ ಸಿಕ್ಕ ಪ್ರಶ್ನೆ ಪತ್ರಿಕೆಗಳು ಎರಡು ಒಂದೇ ಆಗಿದ್ದವು .
ಪ್ರಶ್ನಾ ಪತ್ರಿಕೆಗಳನ್ನು ಕೆಟಿಜೆ ನಗರ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.