ದ್ರಾವಿಡ್‌ಗಿಲ್ಲ ಮತದಾನ

Team Udayavani, Apr 15, 2019, 6:04 AM IST

ಬೆಂಗಳೂರು: ಮತದಾನ ಪ್ರಮಾಣ ಹೆಚ್ಚಿಸಲು ಮತದಾರರಲ್ಲಿ ಜಾಗೃತಿ ಮೂಡಿಸಿ ಉತ್ತೇಜನ ನೀಡಲು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರನ್ನು ಲೋಕಸಭಾ ಚುನಾವಣೆಗೆ ರಾಜ್ಯದ “ಚುನಾವಣ ಐಕಾನ್‌’ (ರಾಯಭಾರಿ) ಆಗಿ ಕೇಂದ್ರ ಚುನಾವಣ ಆಯೋಗ ನೇಮಿಸಿದೆ. ವಿಪರ್ಯಾಸದ ಸಂಗತಿ ಎಂದರೆ ಅವರೇ ಈ ಬಾರಿ ಮತದಾನದಿಂದ ವಂಚಿತರಾಗಲಿದ್ದಾರೆ.

2019ರ ಲೋಕಸಭಾ ಚುನಾವಣೆಗೆ ಸಿದ್ಧಪಡಿಸಲಾಗಿರುವ ಅಂತಿಮ ಮತ  ದಾರರ ಪಟ್ಟಿಯಲ್ಲಿ ಅವರ ಹೆಸರು ಇಲ್ಲ. ರಾಹುಲ್‌ ದ್ರಾವಿಡ್‌ರ ಸ್ವಯಂಕೃತ ಪ್ರಮಾದದಿಂದಾಗಿ ಮತ ದಾರರ ಪಟ್ಟಿಯಿಂದ ಅವರ ಹೆಸರು ಡಿಲಿಟ್‌ ಆಗಿದೆ. ರಾಹುಲ್‌ ವಾಸಸ್ಥಳ ಬದಲಿಸಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ದ್ರಾವಿಡ್‌ ಸಹೋದರ ಫಾರಂ-7 (ಹೆಸರು ತೆಗೆದು ಹಾಕುವ) ಭರ್ತಿ ಮಾಡಿ ಕೊಟ್ಟಿದ್ದರು. ಅದರಂತೆ ಡಿಲಿಟ್‌ ಮಾಡಲಾಗಿತ್ತು. ವಾಸಸ್ಥಳದ ವಿಳಾಸ ಬದಲಾವಣೆ ಬಳಿಕ ಫಾರಂ-6ರಲ್ಲಿ ಮಾ.16ರೊಳಗೆ ಅರ್ಜಿ ಸಲ್ಲಿಸಬೇಕಿತ್ತು. ಆದರೆ ರಾಹುಲ್‌ ಸಲ್ಲಿಸಿರಲಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ