ಕಾಶ್ಮೀರ ಸಹಜ ಸ್ಥಿತಿಗೆ ಬರುತ್ತಿರುವಾಗ ಪ್ರತಿಪಕ್ಷಗಳ ಭೇಟಿ ಸೂಕ್ತವೇ? ಇಲ್ಲಿದೆ ಓದುಗರ ಉತ್ತರ

Team Udayavani, Aug 24, 2019, 4:32 PM IST

ಮಣಿಪಾಲ: ವಿಶೇಷ ಸ್ಥಾನಮಾನ ರದ್ದಾದ ನಂತರ ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿರುವಾಗ ಕಣಿವೆ ರಾಜ್ಯಕ್ಕೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳು ಭೇಟಿ ನೀಡುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಯನ್ನು ಉದಯವಾಣಿ ಓದುಗರಿಗೆ ಕೇಳಿದ್ದು, ಓದುಗರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ಗಣೇಶ್‌ ಶೆಟ್ಟಿ ಕುಂದಾಪು ಕೊರ್ಗಿ: ಆಡಳಿತ ಪಕ್ಷಕ್ಕೆ ಸಹಕಾರ ಕೊಡಲು ಹಾಗೂ ಅಲ್ಲಿನ ಜನರಲ್ಲಿ ಆಶಾ ಭಾವನೆ ಮತ್ತು ಧೈರ್ಯ ತುಂಬುವ ಸಲುವಾಗಿ ಭೇಟಿ ಕೊಡಬೇಕೆ ಹೊರತು ಅಲ್ಲಿನ ಜನರಲ್ಲಿ ಗಲಭೆ ಎಬ್ಬಿಸಲು ನೀವು ಭೇಟಿ ನೀಡುವ ಅಗತ್ಯ ಇಲ್ಲ

ಮಂಜು ಶಾಂತಲಾ: ಪ್ರತಿಪಕ್ಷಗಳ ಭೇಟಿ ಸಮಂಜಸ.ಆದರೆ ಅವರು ಅಲ್ಲಿ ಹೋಗಿ ಜನರಿಗೆ ಅಭಯ ನೀಡೊ ಹಾಗಿರಬೇಕೆ ಹೊರತು ಮತ್ತಷ್ಟು ಪ್ರಚೋದನೆ ಮಾಡಬಾರದು. ಮತ್ತೆ ಅಲ್ಲಿಯ ಜನರ ನಿಜವಾದ ಅಭಿಪ್ರಾಯ ಪಡೆದು ಆಳುವ ಪಕ್ಷಕ್ಕೆ ಸಹಕಾರ ಕೊಡಬೇಕು ಹಾಗೇ ಸರ್ಕಾರ ತಪ್ಪು ಮಾಡಿದರೆ ಎಚ್ಚರಿಸಬೇಕು.

ಭುವನೇಂದ್ರ ಶಿವಪುರ: ದೇಶದ ಇಂತಹ ಪ್ರಮುಖ ವಿಷಯದಲ್ಲಿ ಜನಾಭಿಪ್ರಾಯ ಸಂಗ್ರಹಣೆಗೆ ಮುಂದಾದ ಉದಯವಾಣಿ ಪತ್ರಿಕೆಗೆ ಪ್ರಣಾಮಗಳು. ನನ್ನ ಅನಿಸಿಕೆಯ ಪ್ರಕಾರ ಕಾಶ್ಮೀರದ ಜನತೆ ಹಾಗೂ ಅಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಯತ್ತ ಸಾಗುತ್ತಿದೆ, ಮರಳುತ್ತಿದೆ ಎನ್ನಲು ನನ್ನ ಮನ ಒಪ್ಪುತ್ತಿಲ್ಲ. ಯಾಕೆಂದರೆ ಅಲ್ಲಿ ಜನರ ಜೀವನ ಸಹಜ ಸ್ಥಿತಿಯಲ್ಲಿ ಇದ್ದಿರಲಿಲ್ಲ. ಪ್ರತಿಪಕ್ಷ ಹಾಗೂ ಅವರ ತಂಡ ಜಮ್ಮು ಕಾಶ್ಮೀರಕ್ಕೆ ಹೋಗುವುದು ಅವರ ನಿರ್ಧಾರಕ್ಕೆ ಬಿಟ್ಟಿದ್ದು. ಯಾಕೆಂದರೆ ಈಗ ಜಮ್ಮು ಮತ್ತು ಕಾಶ್ಮೀರ ಭಾರತ ಹಾಗೂ ಭಾರತದ ಸಂವಿಧಾನಕ್ಕೆ ಒಳಪಟ್ಟಿದೆ,. ಹಾಗಾಗಿ ಅವರಿಗೂ ಅಲ್ಲಿಗೆ ಹೋಗಲು ಸ್ವಾತಂತ್ರ್ಯ ಇದೆ. ಆದರೆ ಇವರು ಹೋದ ಪರಿಣಾಮವಾಗಿ ಅಲ್ಲಿ ದೊಂಬಿ, ಗಲಾಟೆಗಳು ನಡೆದರೆ ನೇರವಾಗಿ ಪ್ರತಿಪಕ್ಷದವರನ್ನು ಮುಲಾಜಿಲ್ಲದೆ ಹೊಣೆ ಮಾಡಿ, ಅದರಿಂದಾಗುವ ನಷ್ಟವನ್ನು ಅವರಿಂದಲೇ ಭರಿಸಬೇಕು.

ಸದಸಂಜಯ್‌ ಪಾಟೀಲ್:‌ ಭೇಟಿ ನೀಡಲಿ. ಆದರೆ ದೇಶದ ಸಂವಿಧಾನ ಹಾಗೂ ಭಾರತೀಯರ ಅಸ್ಮಿತೆಗೆ ಧಕ್ಕೆ ತರುವ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೊಂದಲ ಮೂಡಿಸುವಂತಹ ಪ್ರಚೋದನಕಾರಿ ಹೇಳಿಕೆ ನೀಡಬಾರದು.

ಕೃಷ್ಣ ಟಿಕೆ ದನುಷ: ಭೇಟಿಯ ಅವಶ್ಯಕತೆ ಏನಿದೆ,ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಇತರ ಪಕ್ಷಗಳು ಕಾಶ್ಮೀರದ ಬಗ್ಗೆ ನಡೆದುಕೊಂಡ ರೀತಿ ನಮ್ಮ ಕಣ್ಮುಂದೆ ಇರುವಾಗ ?

ನಿತೇಶ್ ಬಿ: ಪ್ರಜಾಪ್ರಭುತ್ವ ದೇಶದಲ್ಲಿ ಸರ್ವಾಧಿಕಾರಿ ಆಡಳಿತವನ್ನು ವಿರೋಧ ಮಾಡಲೇಬೇಕು, ಒಕ್ಕೂಟ ಸರ್ಕಾರ ಕೈ ಗೊಂಡು ಇರೋ ಕ್ರಮಗಳ ಬಗ್ಗೆ ವಿರೋಧ ಪಕ್ಷಗಳು ಭೇಟಿ ನೀಡಿ ಅಲ್ಲಿನ ಸ್ಥಿತಿಗಳನ್ನು ನೋಡಲು ಹೋಗೋದ್ರಲ್ಲಿ ತಪ್ಪು ಏನು ಇಲ್ಲ. ಒಕ್ಕೂಟ ಸರ್ಕಾರ ಸರಿಯಾಗಿ ಮಾಡಿದ್ರೆ ಯಾಕೆ ಭಯ ಪಡ ಬೇಕು, ವಿರೋಧ ಪಕ್ಷಗಳು ಭೇಟಿ ನೀಡೋದ್ರಲ್ಲಿ ವಿರೋಧ ಯಾಕೆ ಮಾಡ್ಬೇಕು

ಹೆಚ್‌ ಗೌಡ: ಸರಿಯಿಲ್ಲ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಒಂದು ಮಾತಿದೆ ‘ ಮಾರಾಟ ಮಾಡಿ , ಇಲ್ಲಾಂದ್ರೆ ಗ್ರಾಹನಿಗೆ ಗೊಂದಲ ಮೂಡಿಸಿ , ಅಂತ .ಅದನ್ನ ಚಾಚು ತಪ್ಪದೆ ಕೇಂದ್ರದ ಈ ವಿರೋಧ ಪಕ್ಷಗಳು ಮಾಡುತ್ತಿವೆ, ಬರಿ ಗೊಂದಲ ಆಗಿದ್ದರೆ ಸಹಿಸಬಹುದಿತ್ತು. ಆದರೆ ಇವರು ದೇಶದ್ರೋಹಿ ನಿಲುವುಗಳನ್ನ ಪ್ರತಿಪಾದಿಸುತ್ತಿರೋದೆ ಹೇಸಿಗೆ ಹುಟ್ಟಿಸುತ್ತಿರೋದು .

ದಿನೇಶ್‌ ಎಸ್:‌ ಪ್ರತಿಪಕ್ಷಗಳ ಭೇಟಿ ಅಲ್ಲಿನ ನೈಜ ವಾತಾವರಣ ಅರಿತು ಕೊಳ್ಳುವುದಾಗಿರಬೇಕಿದೆ, ಆದರೆ ಪ್ರತಿಪಕ್ಷಗಳ ನಾಯಕರು ಕಾಶ್ಮೀರಕ್ಕೆ ಮಗ್ಗುಲ ಮುಳ್ಳಾಗಿದ್ದ ಸಂವಿಧಾನದ ಆರ್ಟಿಕಲ್ಗಳನ್ನು ತೆರವುಗೊಳಿಸಿದಾಗ ಅದರ ಸಾಧಕ ಬಾಧಕಗಳನ್ನರಿಯದೇ ವಿರೋಧಿಸಿದ ಅವರು ಕಾಶ್ಮೀರದ ಭೇಟಿಯನ್ನು ಯಾವ ಉದ್ದೇಶದಿಂದ ಕೈಗೊಳ್ಳುತ್ತಿದ್ದಾರೆ ಎನ್ನುವುದು ಜನರು ಗಮನಿಸುತ್ತಾರೆ.

ಬಾಬು ಮನು: ದೇಶಭಕ್ತ ಸೈನಿಕರ ಮೇಲೆ ದಾಳಿ ನಡೆದಾಗ ಕಲ್ಲುಗಳನ್ನು ಎಸೆದಾಗ ಸೈನಿಕರ ಮೇಲೆ ಹಲ್ಲೆ ನಡೆಸಿದಾಗ ಯಾಕೆ ಹೋಗಲಿಲ್ಲ?

ಚನ್ನಕೇಶವ ಮೂರ್ತಿ: ಈ ದೇಶದ ವಿರೋಧ ಪಕ್ಷಗಳು ತಮ್ಮ ಜವಾಬ್ದಾರಿ ಅರಿತು ಕಾಶ್ಮೀರದಲ್ಲಿ ಜನರ ಸಂಗಡ ಮಾತುಕತೆ ಮಾಡಿದರೆ ತಪ್ಪು ಅಲ್ಲ, ಕೇಂದ್ರ ಸರ್ಕಾರ ಮತ್ತು ಅಲ್ಲಿನ ಬಹುಜನರ ಮನಸಿನ ಭಾವನೆ ಕೂಡ ಎಲ್ಲರಿಗೂ ತಿಳಿಯಬೇಕು. ಇದು ಪ್ರಜಾಪ್ರಭುತ್ವ ರಾಷ್ಟ್ರ.

ಚೌಕಿದಾರ್ ಶರಣಬಸವ ಪಾಟೀಲ್: ದೇಶದ ಒಳಗೆ ಇದ್ದುಕೊಂಡು ಕಾಶ್ಮೀರದ ನ್ಯಾಯವನ್ನು ವಿರೋಧಿಸಿದ ಈ ಪ್ರತಿಪಕ್ಷಗಳು ಅಲ್ಲಿ ಹೋಗಿ ಪ್ರಚೋದಿಸಿ ಬರುತ್ತಾರೆ. ಪರಿಣಾಮವಾಗಿ ಇಲ್ಲಿ ಬಂದು ಬೊಬ್ಬೆ ಹಾಕುತ್ತಾರೆ. ಎಲ್ಲ ಸಹಜ ಸ್ಥಿತಿಗೆ ಮರಳಿರುವ ಸಂಧರ್ಭದಲ್ಲಿ ಇಂತಹ ಆಟೋಟ ಬೇಡವಾಗಿತ್ತು.

ಪವನ್‌ ರಾಜ್:‌ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಇವರಿಗೆ ನೆಮ್ಮದಿ ಇಲ್ಲ. ಕಲ್ಲು ಹೊಡೆಸಲು ಹೋಗ್ತಾ ಇದ್ದಾರೆ. ಮೊದಲು ಇವರ ಮೇಲೆ ದೇಶ ದ್ರೋಹಿಯ ಕೇಸ್ ದಾಖಲು ಮಾಡುವಂತೆ ಒತ್ತಾಯ ಮಾಡಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ