ಕಳೆದ ಐದು ವರ್ಷಗಳಲ್ಲಿ 813 ಹೊಸ ರೈಲು
Team Udayavani, Oct 3, 2021, 9:45 PM IST
ನವದೆಹಲಿ: 2017ರಲ್ಲಿ ರೈಲ್ವೆ ಬಜೆಟನ್ನು, ಕೇಂದ್ರದ ಸಾಮಾನ್ಯ ಬಜೆಟ್ನೊಂದಿಗೆ ವಿಲೀನಗೊಳಿಸಿದ ನಂತರ, ಈವರೆಗಿನ ಐದು ವರ್ಷಗಳಲ್ಲಿ 813 ಹೊಸ ರೈಲುಗಳ ಸೇವೆಯನ್ನು ಜಾರಿಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮಧ್ಯಪ್ರದೇಶದ ಚಂದ್ರಶೇಖರ್ ಗೌರ್ ಎಂಬವರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ನೀಡಿರುವ ಉತ್ತರದಲ್ಲಿ ಇಲಾಖೆ ಈ ವಿವರಣೆ ನೀಡಿದೆ.
ಅಲ್ಲದೆ, 2020-21ರಲ್ಲಿ ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ, ದೇಶದಲ್ಲಿ ಯಾವುದೇ ಹೊಸ ರೈಲು ಸೇವೆಯನ್ನು ನೀಡಲಾಗಿಲ್ಲ ಎಂದಿರುವ ಇಲಾಖೆ, 2016-17ರಲ್ಲಿ 233, 2017-18ರಲ್ಲಿ 170, 2018-19ರಲ್ಲಿ 266 ಮತ್ತು 2020-21ರಲ್ಲಿ 144 ಹೊಸ ರೈಲು ಸೇವೆಗಳನ್ನು ನಿಡಲಾ ಗಿದೆ ಎಂದಿದೆ.
ಇದನ್ನೂ ಓದಿ:ಎತ್ತಿನ ಭುಜದ ಮ್ಯಾಲೆ ಸವಾರಿ..!