ಆ್ಯಕ್ಷನ್‌ ಥ್ರಿಲ್ಲರ್‌ ನಲ್ಲಿ ರಕ್ತದೋಕುಳಿ

ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಸಿನಿಮಾಕ್ಕೆ ಎಂ. ನಾಗರಾಜು ಬಂಡವಾಳ ಹೂಡಿದ್ದಾರೆ.

Team Udayavani, Sep 22, 2022, 1:38 PM IST

ಆ್ಯಕ್ಷನ್‌ ಥ್ರಿಲ್ಲರ್‌ ನಲ್ಲಿ ರಕ್ತದೋಕುಳಿ

ಟೀಸರ್‌ ರಿಲೀಸ್‌ ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ಸಸ್ಪೆನ್ಸ್‌ ಕಂ ಆ್ಯಕ್ಷನ್‌-ಥ್ರಿಲ್ಲರ್‌ ಕಥಾಹಂದರದ “ರಕ್ತದೋಕುಳಿ’ ಸಿನಿಮಾದ ಮೊದಲ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಯುವ ನಟ ಧೀರೇನ್‌ ರಾಮ್‌ ಕುಮಾರ್‌ “ರಕ್ತದೋಕುಳಿ’ ಸಿನಿಮಾದ ಮೊದಲ ಟೀಸರ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕನ್ನಡ ಚಿತ್ರರಂಗದಲ್ಲಿ ನಿರ್ದೇಶನ ಹಾಗೂ ತಾಂತ್ರಿಕ ವಿಭಾಗದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿರುವ ಯುವ ಪ್ರತಿಭೆ ಎನ್‌. ಎನ್‌ ಜಾಕಿ ಈಡಿಗರ್‌, “ರಕ್ತದೋಕುಳಿ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಈಗಾಗಲೇ “ರಕ್ತದೋಕುಳಿ’ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ. ಇದೇ ವೇಳೆ ಸಿನಿಮಾದ ಟೀಸರ್‌ ಬಿಡುಗಡೆ ಮಾಡಿರುವ ಚಿತ್ರತಂಡ, ಸಿನಿಮಾದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.

ಮೊದಲಿಗೆ “ರಕ್ತದೋಕುಳಿ’ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಜಾಕಿ ಈಡಿಗರ್‌, “ಬೆಂಗಳೂರಿನ ಸ್ಲಂ ಗಳಲ್ಲಿ ನಡೆಯುವ ಕಥೆ ಸಿನಿಮಾದಲ್ಲಿದೆ. ಸ್ಲಂ ಹುಡುಗರು ಹೇಗೆ ಅಲ್ಲಿನ ವಾತಾವರಣದಿಂದ ಪ್ರೇರಿತರಾಗಿ ಅಡ್ಡದಾರಿ ಹಿಡಿಯುತ್ತಾರೆ. ತಪ್ಪು ದಾರಿ ಹಿಡಿದ ಮೇಲೆ ಏನೆಲ್ಲ ಕ್ರೈಂ ಮಾಡುತ್ತಾರೆ ಅನ್ನೋದರ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ. ಕ್ರೈಂ ಮಾಡಬೇಡಿ ಅನ್ನೋದನ್ನ ಸೂಕ್ಷ್ಮವಾಗಿ ಈ ಸಿನಿಮಾದಲ್ಲಿ ಹೇಳ ಹೊರಟಿದ್ದು. ಐದು ಜನ ಹುಡುಗರು
ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸಸ್ಪೆನ್ಸ್‌ ಕಂ ಆ್ಯಕ್ಷನ್‌-ಥ್ರಿಲ್ಲರ್‌ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಪ್ರತಿ ಹಂತದಲ್ಲೂ ಪ್ರೇಕ್ಷಕರಿಗೆ ಥ್ರಿಲ್‌ ನೀಡುವ ಕಂಟೆಂಟ್‌ ಸಿನಿಮಾದಲ್ಲಿದೆ’ ಎಂದು ಮಾಹಿತಿ ನೀಡಿದರು.

ಬೆಂಗಳೂರು ಸುತ್ತಮುತ್ತ “ರಕ್ತದೋಕುಳಿ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಸಿನಿಮಾಕ್ಕೆ ಎಂ. ನಾಗರಾಜು ಬಂಡವಾಳ ಹೂಡಿದ್ದಾರೆ. ಕಿರುತೆರೆಯ “ಕಾಮಿಡಿ ಕಿಲಾಡಿಗಳು’ ಶೋ ಖ್ಯಾತಿಯ ನಯನಾ, ನಾಗೇಂದ್ರ ಅರಸ್‌ ಮೊದಲಾದವರು “ರಕ್ತದೋಕುಳಿ’ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ ನಾಲ್ಕು ಹಾಡುಗಳಿಗೆ ಅನಿಲ್‌ ಸಿ. ಜೆ ಸಂಗೀತ ಸಂಯೋಜಿಸಿದ್ದು, ಲೋಕಲ್‌ ಲೋಕಿ ಸಾಹಿತ್ಯವಿದೆ. ಚಿತ್ರಕ್ಕೆ ರಂಗಸ್ವಾಮಿ ಎಲ್‌. ಛಾಯಾಗ್ರಹಣ, ಗಂಗಮ್‌ ರಾಜು ನೃತ್ಯ ನಿರ್ದೇಶನ, ಚಂದ್ರು ಬಂಡೆ ಸಾಹಸ ಸಂಯೋಜನೆಯಿದೆ.

ಟಾಪ್ ನ್ಯೂಸ್

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ| ದೇವಿಪ್ರಸಾದ್‌ ಶೆಟ್ಟಿ ಖಂಡನೆ

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ| ದೇವಿಪ್ರಸಾದ್‌ ಶೆಟ್ಟಿ ಖಂಡನೆ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

1-asdadad

ಹಲವು ದಶಕಗಳ ನಂತರ ಮತ್ತೆ ಕಾಶ್ಮೀರದಲ್ಲಿ ನೆಲೆಸಳಿದ್ದಾಳೆ ಶಾರದೆ

ಪಿಎಫ್ಐ ಜತೆಗೆ ನಂಟು ಪೊಲೀಸ್‌ ಅಧಿಕಾರಿ ಸಸ್ಪೆಂಡ್‌

ಪಿಎಫ್ಐ ಜತೆಗೆ ನಂಟು ಪೊಲೀಸ್‌ ಅಧಿಕಾರಿ ಸಸ್ಪೆಂಡ್‌

ಪ್ರಸಿದ್ಧ ವಾಹಿನಿಗಳಾಗಿರುವ ಜೀ-ಸೋನಿ ವಿಲೀನಕ್ಕೆ ಸಿಸಿಐ ಒಪ್ಪಿಗೆ

ಪ್ರಸಿದ್ಧ ವಾಹಿನಿಗಳಾಗಿರುವ ಜೀ-ಸೋನಿ ವಿಲೀನಕ್ಕೆ ಸಿಸಿಐ ಒಪ್ಪಿಗೆ

1-sadasdd

ಸಿಎಂ ಯೋಗಿ ಚಿರತೆ ಮರಿಗೆ ಹಾಲುಣಿಸುವ ವಿಡಿಯೋ ವೈರಲ್

ಆರ್‌ಟಿಇ ಶುಲ್ಕ ಮರು ಪಾವತಿಗೆ ಕ್ರಿಯಾ ಯೋಜನೆ ರೂಪಿಸಿದ ಶಿಕ್ಷಣ ಇಲಾಖೆ

ಆರ್‌ಟಿಇ ಶುಲ್ಕ ಮರು ಪಾವತಿಗೆ ಕ್ರಿಯಾ ಯೋಜನೆ ರೂಪಿಸಿದ ಶಿಕ್ಷಣ ಇಲಾಖೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-1

ರಮ್ಯಾ – ರಾಜ್. ಬಿ.ಶೆಟ್ಟಿ ಕಾಂಬಿನೇಷನ್‌ ನಲ್ಲಿ ಬರುತ್ತಿದೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’

tdy-4

ಕಬ್ಜ ಮೇಲೆ ಶ್ರೇಯಾ ನಿರೀಕ್ಷೆ

tdy-3

ಅಭಿಮಾನಿಗಳ ಜೊತೆ ರಚಿತಾ ಬರ್ತ್‌ಡೇ

ಮಕ್ಕಳ ಮನಸ್ಸುಗಳ ಸುತ್ತ ‘ರೂಬಿಕ್ಸ್’

ಮಕ್ಕಳ ಮನಸ್ಸುಗಳ ಸುತ್ತ ‘ರೂಬಿಕ್ಸ್’

vijay raghavendra Raghu movie

ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ‘ರಾಘು’ ಬ್ಯುಸಿ; ಈ ವರ್ಷವೇ ತೆರೆಗೆ

MUST WATCH

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

udayavani youtube

ದಿನ7 | ಕಾಳರಾತ್ರಿ ದೇವಿ

ಹೊಸ ಸೇರ್ಪಡೆ

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ| ದೇವಿಪ್ರಸಾದ್‌ ಶೆಟ್ಟಿ ಖಂಡನೆ

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ| ದೇವಿಪ್ರಸಾದ್‌ ಶೆಟ್ಟಿ ಖಂಡನೆ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

1-asdasdasd

ವಾಡಿ: ದೇವಿಯ ಮುಂದೆ ಬೃಹತ್ ರಾವಣ ಪ್ರತಿಕೃತಿ ದಹನ

1–dsadasd

ಹುಣಸೂರು: ಹಾಡು ಹಗಲೇ ಮನೆ ಮುಂದೆ ಚಿರತೆ ಪ್ರತ್ಯಕ್ಷ; ಜನರಲ್ಲಿಆತಂಕ

1-qwwqewe

ರಾಷ್ಟ್ರೀಯ ಭೂ ಸ್ವಾಧೀನ ಅಧಿಕಾರಿಯ ಸೋಗಿನಲ್ಲಿ ವಂಚನೆ: ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.