ಮನೆಗಳಲ್ಲಿಯೇ ರಮ್ಜಾನ್ ಆಚರಣೆ:ಇಬ್ರಾಹಿಂ
Team Udayavani, Apr 8, 2020, 5:03 AM IST
ಬೆಂಗಳೂರು: ಕೋವಿಡ್ 19 ವೈರಸ್ ಹರಡುವುದನ್ನು ತಪ್ಪಿಸಲು ಮುಸ್ಲಿಂ ಸಮುದಾಯದವರು ರಮ್ಜಾನ್ ಹಬ್ಬವನ್ನು ಮನೆಗಳಲ್ಲಿ ಆಚರಿಸಲು ನಿರ್ಧರಿಸಿದ್ದು, ಮಸೀದಿಗೆ ತೆರಳದೇ ಮನೆಗಳಲ್ಲಿಯೇ ನಮಾಜ್ ಮಾಡಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಸೂಚನೆಯಂತೆ ನಾವೆಲ್ಲರೂ ಮನೆಯಲ್ಲಿಯೇ ನಮಾಜ್ ಮಾಡುತ್ತಿದ್ದೇವೆ. ರಮ್ಜಾನ್ ಹಬ್ಬವನ್ನೂ ಸಹ ಮಸೀದಿಗೆ ತೆರಳದೇ ಮನೆಯಲ್ಲಿಯೇ ಮಾಡಿ ಕೊಳ್ಳುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗೆ ತಿಳಿಸಿದ್ದೇವೆ ಎಂದರು.