ಬರಲಿದೆ ಕ್ಯೂಆರ್ ಕೋಡ್ ಆಧರಿತ ಕಾಯಿನ್ ವೆಂಡಿಂಗ್ ಮಷಿನ್
ಪ್ರಾಯೋಗಿಕವಾಗಿ 12 ನಗರಗಳಲ್ಲಿ ಜಾರಿ
Team Udayavani, Feb 8, 2023, 8:52 PM IST
ಮುಂಬೈ:ದೈನಂದಿನ ವ್ಯವಹಾರಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾಣ್ಯಗಳನ್ನು ನೀಡಲು ಆರ್‌ಬಿಐ ಹೊಸ ಮಾರ್ಗ ಕಂಡುಕೊಂಡಿದೆ. ಕ್ಯೂಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮಷಿನ್ (ಕ್ಯೂಸಿವಿಎಂ) ಪ್ರಾಯೋಗಿಕವಾಗಿ ದೇಶದ 12 ನಗರಗಳಲ್ಲಿ ಜಾರಿಯಾಗಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಮುಂಬೈನಲ್ಲಿ ಬುಧವಾರ ಮಾತನಾಡಿದ ಅವರು, ಪ್ರಮುಖ ಬ್ಯಾಂಕ್‌ಗಳ ಸಹಕಾರದಿಂದ ಅದನ್ನು ಜಾರಿಗೊಳಿಸಲಾಗುತ್ತದೆ. ರೈಲು ನಿಲ್ದಾಣಗಳಲ್ಲಿ, ಶಾಪಿಂಗ್ ಮಾಲ್‌ಗಳಲ್ಲಿ, ಮಾರುಕಟ್ಟೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು. ಗ್ರಾಹಕರಿಗೆ ಬೇಕಾದ ಮೌಲ್ಯದ ನಾಣ್ಯಗಳನ್ನು ಪಡೆಯಲು ಅವಕಾಶ ಇದೆ ಎಂದರು.
ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್‌ಬಿಐ ಡೆಪ್ಯುಟಿ ಗವರ್ನರ್ ಟಿ.ರವಿಶಂಕರ್ ಇಂಥ ಮಷಿನ್‌ಗಳಲ್ಲಿ ನಕಲಿ ನೋಟುಗಳು ಲಭ್ಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯುಪಿಐ ಆಧಾರಿತ ಬದಲಿ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಶೇ.6.4 ಬೆಳವಣಿಗೆ:
ಮುಂದಿನ ಹಣಕಾಸು ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆ ಶೇ.6.4ರ ದರಜಲ್ಲಿ ಬೆಳವಣಿಗೆ ಕಾಣಿಸಿಕೊಳ್ಳಲಿದೆ. ಸಂಸತ್‌ನಲ್ಲಿ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆಯಲ್ಲೂ ಈ ಅಂಶ ವ್ಯಕ್ತವಾಗಿತ್ತು ಎಂದರು ದಾಸ್. ಇದೇ ವೇಳೆ, ಮುಂದಿನ ವಿತ್ತೀಯ ವರ್ಷದಲ್ಲಿ ಹಣದುಬ್ಬರ ದರ ಶೇ.5.3ಕ್ಕೆ ಇಳಿಕೆಯಾಗಲಿದೆ ಎಂದಿದ್ದಾರೆ.
ಸಮಸ್ಯೆಯಾಗದು:
ಅದಾನಿ ಗ್ರೂಪ್ ವಿರುದ್ಧ ಕೇಳಿ ಬಂದಿರುವ ಆರೋಪದಿಂದ ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಧಕ್ಕೆಯಾಗದು ಎಂದ ಶಕ್ತಿಕಾಂತ ದಾಸ್, ಅದೊಂದು ಮಹತ್ವದ್ದಲ್ಲ ಎಂದರು. ದೇಶದ ಬ್ಯಾಂಕಿಂಗ್ ವ್ಯವಸ್ಥೆ ಒಂದು ಪ್ರಕರಣದಿಂದ ಆತಂಕಕ್ಕೆ ಒಳಗಾಗದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂಡೆನ್ ಬರ್ಗ್ ವರದಿ ಬಹಿರಂಗ; ಒಂದೇ ದಿನದಲ್ಲಿ ಜಾಕ್ ಡೋರ್ಸಿಗೆ 4,300 ಕೋಟಿ ರೂ. ನಷ್ಟ!
ಅಮೆರಿಕ ಬ್ಯಾಂಕ್ ಗಳ ಪತನದ ಎಫೆಕ್ಟ್: ಭಾರತೀಯ ಷೇರು ಮಾರುಕಟ್ಟೆ ಕುಸಿತ
ಅಮೆರಿಕ ಬ್ಯಾಂಕ್ ಗಳ ಪತನದ ಎಫೆಕ್ಟ್; ಭಾರತದಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆ, ಬೆಲೆ ವಿವರ…
ಅಸಮಾನತೆಗೆ ಅವಕಾಶ ಕೊಡದಿರಿ: ಬ್ಯಾಂಕುಗಳಿಗೆ ಆರ್‌ಬಿಐ ಗವರ್ನರ್ ಎಚ್ಚರಿಕೆ
ಜಾಗತಿಕ ಬೇಡಿಕೆ ಕುಸಿತ: ರಫ್ತು, ವ್ಯಾಪಾರ ಕೊರತೆ ಇಳಿಕೆ