Udayavni Special

ಟೆಂಡರ್‌ ಕೆಲಸದ ನಿರ್ವಹಣೆ ಬಗ್ಗೆ ನಿಗಾ ವಹಿಸಲು ಆಗ್ರಹ


Team Udayavani, Feb 24, 2021, 11:43 PM IST

ಟೆಂಡರ್‌ ಕೆಲಸದ ನಿರ್ವಹಣೆ ಬಗ್ಗೆ ನಿಗಾ ವಹಿಸಲು ಆಗ್ರಹ

ಕೋಟ: ಬೀದಿ ದೀಪ ನಿರ್ವಹಣೆ ಮುಂತಾದ ಕಾಮಗಾರಿಗಳನ್ನು ಟೆಂಡರ್‌ ನೀಡಲಾಗಿದ್ದು ಪ್ರತಿ ತಿಂಗಳು ಗುತ್ತಿಗೆದಾರರಿಗೆ ನಿಗದಿತ ಮೊತ್ತ ಪಾವತಿಯಾಗುತ್ತದೆ. ಆದರೆ ನಿರ್ವಹಣೆ ಸರಿಯಾಗಿಲ್ಲ. ಇದನ್ನು ಸರಿಪಡಿಸಲು ಪಂ.ಪಂ. ಮೇಲುಸ್ತುವಾರಿ ವ್ಯವಸ್ಥೆಯೂ ಇಲ್ಲ ಎಂದು ಬುಧವಾರ ನಡೆದ ಸಾಲಿಗ್ರಾಮ ಪ.ಪಂ. ಸಾಮಾನ್ಯಸಭೆಯಲ್ಲಿ ಸದಸ್ಯ, ಸಂಜೀವ ದೇವಾಡಿಗ ತಿಳಿಸಿದರು. ಇದಕ್ಕೆ ಕಾರ್ಕಡ ರಾಜು ಪೂಜಾರಿ, ಸುಕನ್ಯಾ ಶೆಟ್ಟಿ ದನಿಗೂಡಿಸಿದರು.

ಪಂ.ಪಂ. ಮೂಲಕ ಮೇಲುಸ್ತುವಾರಿಗೆ ಕ್ರಮಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಯಿತು. ಅದೇ ರೀತಿ ಶ್ಮಶಾನಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಮುಂದೆ ಸಮಸ್ಯೆಗಳಾಗುವ ಸಾಧ್ಯತೆ ಇರುವುದರಿಂದ ಗಮನಹರಿಸಬೇಕು ಎಂದು ಸದಸ್ಯ ಶ್ರೀನಿವಾಸ ಅಮೀನ್‌ ತಿಳಿಸಿದರು.

ಸಾರ್ವಜನಿಕ ರಸ್ತೆ ಸ್ಥಿರಾಸ್ಥಿ: ನೋಂದಾಯಿಸಿ
ಸರಕಾರದ ಅನುದಾನ ಬಳಸಿ ಅಭಿವೃದ್ಧಿಪಡಿಸಿದ ರಸ್ತೆಗಳು° ಅಫಿಡವಿಟ್‌ ಮೂಲಕ ಪ.ಪಂ.ಗೆ ಪಡೆದು ಸ್ಥಿರಾಸ್ಥಿ ರಿಜಿಸ್ಟ್ರಿಯಲ್ಲಿ ನೋಂದಾಯಿಸಬೇಕು. ಇಲ್ಲವಾದರೆ ಮುಂದೆ ಆ ರಸ್ತೆಯ ವಿಚಾರದಲ್ಲಿ ಸಮಸ್ಯೆಗಳು ಬಂದಾಗ ಇತ್ಯರ್ಥಪಡಿಸಲು ಸಾಧ್ಯವಾಗುವುದಿಲ್ಲ. ಪ್ರತಿಯೊಂದು ವಾರ್ಡ್‌ ನಲ್ಲೂ ಇಂತಹ ರಸ್ತೆಗಳನ್ನು ಗುರುತಿಸಿ ರಿಜಿಸ್ಟ್ರಿಯಲ್ಲಿ ನೋಂದಾಯಿಸುವ ಕಾರ್ಯವಾಗಬೇಕು ಎಂದು ಸದಸ್ಯರು ತಿಳಿಸಿದರು.

ಚರಂಡಿ ವ್ಯವಸ್ಥೆ
ಸರ್ವೀಸ್‌ ರಸ್ತೆ ನಿರ್ಮಾಣವಾಗುತ್ತಿರುವಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಆಗಬೇಕು. ಇಲ್ಲವಾದರೆ ದೇವಾಡಿಗರಬೆಟ್ಟು ಮುಂತಾದ ಕಡೆ ಮಳೆಗಾಲದಲ್ಲಿ ನೆರೆ ಉಂಟಾಗಲಿದೆ. ಈ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಸದಸ್ಯೆ ರತ್ನಾ ನಾಗರಾಜ್‌ ಗಾಣಿಗ ತಿಳಿಸಿದರು.

ಎನ್‌.ಒ.ಸಿ. ನೀಡುವಾಗ ಎಚ್ಚರ
ಇತ್ತೀಚಿನ ಪ್ರಕರಣವೊಂದರಲ್ಲಿ ದೈವಸ್ಥಾನವೊಂದಕ್ಕೆ ಎನ್‌.ಒ.ಸಿ. ನೀಡಿ ಅನಂತರ ಕಾನೂನು ಪ್ರಕಾರ ಸರಿಯಿಲ್ಲ ಎಂದು ರದ್ದುಪಡಿಸಲಾಗಿದೆ. ಯಾವುದೇ ಎನ್‌.ಒ.ಸಿ. ನೀಡುವ ಮುನ್ನ ಆಲೋಚಿಸಿ ನೀಡಿ. ಮಾನವೀಯ ನೆಲೆಯಲ್ಲಿ ಕ್ರಮಕೈಗೊಳ್ಳಿ ಎಂದು ಸದಸ್ಯ ಶ್ಯಾಮ್‌ಸುಂದರ್‌ ನಾೖರಿ ತಿಳಿಸಿದರು. ಬಬ್ಬುಸ್ವಾಮಿ ದೇವಸ್ಥಾನಕ್ಕೆ ವಿದ್ಯುತ್‌ ಎನ್‌.ಒ.ಸಿ. ನೀಡುವಲ್ಲಿ ಸತಾಯಿಸುತ್ತಿರುವ ಕುರಿತು ಸದಸ್ಯ ರವೀಂದ್ರ ಕಾಮತ್‌ ಪ್ರಸ್ತಾವಿಸಿದರು.

ಉಪಾಧ್ಯಕ್ಷೆ ಅನಸೂಯಾ ಹೇಳೆì, ಸುಕನ್ಯಾ ಶೆಟ್ಟಿ, ರೇಖಾ ಕೇಶವ್‌, ಭಾಸ್ಕರ ಬಂಗೇರ, ಪುನೀತ್‌ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.

ಬಜೆಟ್‌ ಮಂಡನೆ
ಅಧ್ಯಕ್ಷೆ ಸುಲತಾ ಹೆಗ್ಡೆಯವರು ಪ.ಪಂ. 2021-22ನೇ ಸಾಲಿನ ಬಜೆಟ್‌ ಮಂಡನೆ ಮಾಡಿದರು. ಚರ್ಚೆ ನಡೆಸಲು ಸೂಚಿಸಿದಾಗ, ಸಭೆಗೆ ಮೊದಲು ಬಜೆಟ್‌ ಪ್ರತಿ ಅವಲೋಕಿಸಲು, ಚರ್ಚೆಗೆ ಮುನ್ನ ಕಾಲಾವಕಾಶ ನೀಡಬೇಕೆಂದು ಸದಸ್ಯ ಶ್ಯಾಮ್‌ಸುಂದರ್‌ ನಾೖರಿ ತಿಳಿಸಿದರು. ಕಾರಂತ ಬೀದಿಯ ಅಭಿವೃದ್ಧಿಗಾಗಿ ಸರ್ವೆ ನಡೆಸುವ ಕುರಿತು ತೀರ್ಮಾನಿಸಲಾಯಿತು. ಸಾಲಿಗ್ರಾಮ ಮೀನುಮಾರುಕಟ್ಟೆ ಸಮಸ್ಯೆ ಬಗೆಹರಿಸಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು.

3ನೇ ಸಭೆಯಲ್ಲಿ ಪ್ರಮಾಣ ವಚನ!
ಚೆಲ್ಲೆಮಕ್ಕಿ ವಾರ್ಡ್‌ಸದಸ್ಯೆ ಝಹಿರಾ ಅವರು ಕಳೆದ ಎರಡು ಸಭೆಗಳಿಗೆ ನಿರಂತರ ಗೈರಾಗಿದ್ದರು, ಪ್ರಮಾಣವಚನ ಸ್ವೀಕಾರಕ್ಕೂ ಆಗಮಿಸಿರಲಿಲ್ಲ. ಇದೀಗ ಮೂರನೇ ಸಭೆಯಲ್ಲಿ ಭಾಗವಹಿಸಿ ಪ್ರಮಾಣ ವಚನ ಸ್ವೀಕರಿಸಿದರು.

ಟಾಪ್ ನ್ಯೂಸ್

ಕ,ಜಹಗ್ರೆ

ಗಿನ್ನೆಸ್ ದಾಖಲೆ ಬರೆದ ಮೊಲ ಕಳ್ಳತನ : ಹುಡುಕಿ ಕೊಟ್ಟವರಿಗೆ ಸಿಗುತ್ತೆ 2 ಲಕ್ಷ ಬಹುಮಾನ!

‘ಓ ಮೈ ಲವ್‌’ ಗಾನ ಬಜಾನ: ಸ್ಮೈಲ್ ಶ್ರೀನು ನಿರ್ದೇಶನದ ಚಿತ್ರ

‘ಓ ಮೈ ಲವ್‌’ ಗಾನ ಬಜಾನ: ಸ್ಮೈಲ್ ಶ್ರೀನು ನಿರ್ದೇಶನದ ಚಿತ್ರ

ತಮಿಳು ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ತಮಿಳು ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು: ಅಭಿಮಾನಿಗಳಲ್ಲಿ ಆತಂಕ

ಗಹಜಕಜುಹಯತ

ಭಾನುವಾರ ಉತ್ತರ ಪ್ರದೇಶ ಲಾಕ್ ಡೌನ್ : ಮಾಸ್ಕ್ ಹಾಕದಿದ್ದರೆ 10,000 ದಂಡ!

ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿ

ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿ

‍‍ಗಜಗ್ಹದದ್ದಸ

ಬಾಕ್ಸಿಂಗ್ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕಿದ್ದ ವ್ಯಕ್ತಿ ಇಂದು ಆಟೋ ಚಾಲಕ

ಪ್ರತಿಭಟನೆ, ಹಿಂಸಾಚಾರ:ಹಾಂಗ್ ಕಾಂಗ್ ಪ್ರಜಾಪ್ರಭುತ್ವ ಪರ ಪ್ರತಿಭಟನೆ, 9 ಮಂದಿಗೆ ಜೈಲುಶಿಕ್ಷೆ

ಪ್ರತಿಭಟನೆ, ಹಿಂಸಾಚಾರ:ಹಾಂಗ್ ಕಾಂಗ್ ಪ್ರಜಾಪ್ರಭುತ್ವ ಪರ ಪ್ರತಿಭಟನೆ, 9 ಮಂದಿಗೆ ಜೈಲುಶಿಕ್ಷೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ: ದೇವಸ್ಥಾನದ ಹುಂಡಿ ಕಳವಿಗೆ ವಿಫಲ ಯತ್ನ, ಕಾರು ಬಿಟ್ಟು ಓಡಿ ಹೋದ ಕಳ್ಳರು

ಉಡುಪಿ: ದೇವಸ್ಥಾನದ ಹುಂಡಿ ಕಳವಿಗೆ ವಿಫಲ ಯತ್ನ, ಕಾರು ಬಿಟ್ಟು ಓಡಿ ಹೋದ ಕಳ್ಳರು

ಶಿರ್ವದ ಗ್ಯಾಬ್ರಿಯಲ್‌ ಅವರಿಗೆ ಒಲಿದ ಸಿದ್ಧಿವಿನಾಯಕ

ಶಿರ್ವದ ಗ್ಯಾಬ್ರಿಯಲ್‌ ಅವರಿಗೆ ಒಲಿದ ಸಿದ್ಧಿವಿನಾಯಕ

ಪ್ರತಿಷ್ಠಿತ ಆ್ಯಶ್ಡೆನ್‌‌ ಪ್ರಶಸ್ತಿಯ ಅಂತಿಮ ಪಟ್ಟಿಗೆ ಮಣಿಪಾಲದ ಬಿವಿಟಿ ಆಯ್ಕೆ

ಪ್ರತಿಷ್ಠಿತ ಆ್ಯಶ್ಡೆನ್‌‌ ಪ್ರಶಸ್ತಿಯ ಅಂತಿಮ ಪಟ್ಟಿಗೆ ಮಣಿಪಾಲದ ಬಿವಿಟಿ ಆಯ್ಕೆ

ಅಂಡಾರು ಗ್ರಾಮಸ್ಥರಿಗಿಲ್ಲ ತಾ| ಕೇಂದ್ರ ಸಂಪರ್ಕಿಸುವ ಬಸ್‌ ವ್ಯವಸ್ಥೆ

ಅಂಡಾರು ಗ್ರಾಮಸ್ಥರಿಗಿಲ್ಲ ತಾ| ಕೇಂದ್ರ ಸಂಪರ್ಕಿಸುವ ಬಸ್‌ ವ್ಯವಸ್ಥೆ

ಅಂಗಡಿಗೆ ಪರವಾನಿಗೆ ಇದೆ; ಪಾರ್ಕಿಂಗ್‌ಗೆ ಇಲ್ಲ ! ಸಮರ್ಪಕ ನೀತಿ ರೂಪಣೆಯ ಕೊರತೆ

ಅಂಗಡಿಗೆ ಪರವಾನಿಗೆ ಇದೆ; ಪಾರ್ಕಿಂಗ್‌ಗೆ ಇಲ್ಲ ! ಸಮರ್ಪಕ ನೀತಿ ರೂಪಣೆಯ ಕೊರತೆ

MUST WATCH

udayavani youtube

ಮಂಗಳೂರು: ಬೊಟ್ ದುರಂತ ಪ್ರಕರಣ; ಮೂರು ದಿನಗಳಾದರೂ ಪತ್ತೆಯಾಗದ ಮೀನುಗಾರರು

udayavani youtube

ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತುರ್ತು ಸಭೆ

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

ಹೊಸ ಸೇರ್ಪಡೆ

protest at madya

ಮಳೆಯಿಂದ ಅಹೋರಾತ್ರಿ ಧರಣಿ ನಿರತರ ಪರದಾಟ

Drinking water problem  in villages

ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ

ಕ,ಜಹಗ್ರೆ

ಗಿನ್ನೆಸ್ ದಾಖಲೆ ಬರೆದ ಮೊಲ ಕಳ್ಳತನ : ಹುಡುಕಿ ಕೊಟ್ಟವರಿಗೆ ಸಿಗುತ್ತೆ 2 ಲಕ್ಷ ಬಹುಮಾನ!

protest at shreenivasapura

ಭವನ ನಿರ್ಮಾಣ ವಿಳಂಬ: ಪ್ರತಿಭಟನೆ

Soil Mafia Prevention

ಕೆರೆ ಒತ್ತುವರಿ, ಮಣ್ಣು ಮಾಫಿಯಾ ತಡೆಗಟ್ಟಿ : ರೈತಸಂಘ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.