ಓಡಿ ಬಂದು ರಾಜೀನಾಮೆ

Team Udayavani, Jul 12, 2019, 5:14 AM IST

REBEL_MLA–BNP-(7)

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಗುರುವಾರ ರಾಜೀನಾಮೆ ಪ್ರಹಸನಕ್ಕೆ “ಸ್ಪೀಡ್‌’ ಸಿಕ್ಕಿದೆ. ಸುಪ್ರೀಂಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಮುಂಬೈನ ಹೊಟೇಲ್‌ನಿಂದ ಓಡೋಡಿ ಬಂದ ಅತೃಪ್ತ ಶಾಸಕರು ಮತ್ತೂಮ್ಮೆ “ಕ್ರಮಬದ್ಧ’ ರಾಜೀನಾಮೆ ಸಲ್ಲಿಸಿ, ಹಾಗೆಯೇ ಓಡೋಡಿ ವಾಪಸ್‌ ಮುಂಬೈ ಸೇರಿಕೊಂಡಿದ್ದಾರೆ.

ಗುರುವಾರ ಸಂಜೆ 6 ಗಂಟೆಯೊಳಗೆ 10 ಅತೃಪ್ತ ಶಾಸಕರಿಂದ ಮರಳಿ ರಾಜೀನಾಮೆ ಪಡೆಯುವಂತೆ ಸುಪ್ರೀಂ ಕೋರ್ಟ್‌, ಸ್ಪೀಕರ್‌ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರೆಲ್ಲರೂ ಎದ್ದುಬಿದ್ದು ಬೆಂಗಳೂರಿಗೆಬಂದಿದ್ದರು. ಇದಷ್ಟೇ ಅಲ್ಲ, ಸುಪ್ರೀಂ ನಿರ್ದೇಶನದ ಮೇರೆಗೆ ಭಾರೀ ಪೊಲೀಸ್‌ ಬಂದೋಬಸ್ತ್ನಲ್ಲಿ ಬಂದ ಇವರೆಲ್ಲರೂ,
ಏರ್‌ಪೋರ್ಟ್‌ನಲ್ಲೂ ಓಡೋಡಿ ವಾಹನ ಹತ್ತಿದವರು, ವಿಧಾನಸೌಧದ ಬಳಿಯೂ ಓಡೋಡಿ ಸ್ಪೀಕರ್‌ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದರು.

5.15ಕ್ಕೆ ಎಚ್‌ಐಎಲ್‌ಗೆ ಆಗಮನ: ಮುಂಬೈನಿಂದ ವಿಶೇಷ ವಿಮಾನದಲ್ಲಿ ಹೊರಟ ಶಾಸಕರು ಗುರುವಾರ ಸಂಜೆ 5.15ರ ಹೊತ್ತಿಗೆ ಬೆಂಗಳೂರಿನ ಎಚ್‌ ಎಎಲ್‌ ವಿಮಾನನಿಲ್ದಾಣ ತಲುಪಿದರು.

ಸ್ಪೀಕರ್‌ ಮುಂದೆ ಹಾಜರಾಗಲು ಸುಪ್ರೀಂನ ತ್ರಿಸದಸ್ಯ ಪೀಠ ನೀಡಿದ್ದ ಗಡುವಿಗೆ ಕೇವಲ 45 ನಿಮಿಷ ಬಾಕಿಯಿದ್ದ ಕಾರಣ ಶಾಸಕರು ಆತಂಕಗೊಂಡಿದ್ದರು.

ಶಾಸಕರು ಆಗಮಿಸುವ ಮೊದಲೇ ಶಾಸಕರಾದ ಎಸ್‌.ಟಿ.ಸೋಮಶೇಖರ್‌,ಮುನಿರತ್ನ ಅವರು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿದ್ದರು. ವಿಶೇಷ ವಿಮಾನ ಆಗಮಿಸುತ್ತಿದ್ದಂತೆ ಶಾಸಕರು ಧಾವಂತದಿಂದಲೇ ಕೆಳಗಿಳಿದರು. ಆತಂಕದಿಂದ ಓಡುತ್ತಾ ಬಂದ ಬೈರತಿ ಬಸವರಾಜು ಅವರನ್ನು ತಕ್ಷಣವೇ ಬಸ್‌ ಬಳಿಗೆ ತೆರಳುವಂತೆ ಸೋಮಶೇಖರ್‌,
ಮುನಿರತ್ನ ಕೈ ಸನ್ನೆ ಸೂಚನೆ ನೀಡಿದ್ದು ಕಂಡುಬಂತು. ಇತರೆ ಶಾಸಕರು ಕೂಡ ಧಾವಂತದಲ್ಲೇ ನಿಲ್ದಾಣದ ಹೊರಗೆ ಬಂದು ವಾಹನಗಳನ್ನು ಏರಿದರು.

ಬಿಗಿ ಭದ್ರತೆ
ಶಾಸಕರನ್ನು ಸುರಕ್ಷಿತವಾಗಿ ಕರೆದೊಯ್ಯಲು ಪೊಲೀಸ್‌ ಇಲಾಖೆ ಬಿಗಿ ಭದ್ರತೆ ವ್ಯವಸ್ಥೆ ಮಾಡಿಕೊಂಡಿತ್ತು.ಮೊದಲಿಗೆ ಡಿಸಿಪಿ ವಾಹನ. ಅದರ ಹಿಂದೆ ಒಂದು ಪೈಲಟ್‌, ಅದರ
ಹಿಂದೆ ಮತ್ತೂಂದು ಡಿಸಿಪಿ ವಾಹನ, ಅದನ್ನು ಹಿಂಬಾಲಿಸಿದ ಬೆಂಗಾವಲು ವಾಹನ. ಅದರ ಹಿಂದೆ ಶಾಸಕರು, ಆಪ್ತ ಸಹಾಯಕರಿದ್ದ ಮೂರು ಕಾರು, ಒಂದು ಮಿನಿ ಬಸ್‌, ಒಂದು ಟೆಂಪೊ ಟ್ರಾವೆಲ್ಲರ್‌. ಅದನ್ನು ಅನುಸರಿಸಿದ್ದ ಒಂದು ಬೆಂಗಾವಲು ವಾಹನ, ಅದನ್ನು ಹಿಂಬಾಲಿಸಿದ್ದ ಕೆಎಸ್‌ಆರ್‌ಪಿ ತುಕಡಿಯಿದ್ದ ವಾಹನಹಾಗೂ ಕೊನೆಯಲ್ಲಿ ಸಂಚಾರಿ ಪೊಲೀಸ್‌ ಜೀಪ್‌ ಸಾಗಿತ್ತು.

ಕಾಂಗ್ರೆಸ್‌ ವಿಪ್‌
ಮೈತ್ರಿ ಸರ್ಕಾರ ಅತಂತ್ರ ಸ್ಥಿತಿಯಲ್ಲಿರುವ ಸಂದರ್ಭದಲ್ಲಿಯೇ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವುದರಿಂದ ಕಾಂಗ್ರೆಸ್‌ ಪಕ್ಷದ ಎಲ್ಲ ಶಾಸಕರಿಗೂ ಜುಲೈ 12 ರಿಂದ  26 ರ ವರೆಗೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಗಣೇಶ್‌ ಹುಕ್ಕೇರಿ ವಿಪ್‌ ಜಾರಿಗೊಳಿಸಿದ್ದಾರೆ.

ಸ್ಪೀಕರ್‌ ರಮೇಶ್‌ ಕುಮಾರ್‌ ಕಲಾಪ ನಡೆಸುವ ಪ್ರತಿ ದಿನವೂ ಕಡ್ಡಾ ಯವಾಗಿ ಹಾಜರಿರಬೇಕು. ಯಾವುದೇ ಸಮಯದಲ್ಲಿ ಹಣಕಾಸು ಮಸೂದೆ ಹಾಗೂ ಪ್ರಮುಖ ಮಸೂದೆ ಗಳು ಮಂಡನೆಯಾಗಿ ಅಂಗೀಕಾರಗೊಳಿಸಬೇಕಾಗುತ್ತದೆ. ಹೀಗಾಗಿ ಜುಲೈ 12 ರಿಂದ 26 ರ ವರೆಗೆ ಆಡಳಿತ ಪಕ್ಷದ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರು ವಂತೆ ವಿಪ್‌ ಜಾರಿಗೊಳಿಸಿದ್ದಾರೆ. ಒಂದು ವೇಳೆ ಶಾಸಕರು ಅಧಿ ವೇಶನಕ್ಕೆ ಹಾಜರಾಗದಿದ್ದರೆ ಸಂವಿಧಾ ನದ 10 ನೇ ಪರಿಚ್ಛೇದ ದನ್ವಯ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಶಾಸಕ ಸ್ಥಾನದಿಂದ ಅನರ್ಹ ಗೊಳಿಸಲು ಸೂಚಿಸಲಾಗುವುದು ಎಂದು ವಿಪ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ಈಗಾಗಲೇ ರಾಜಿನಾಮೆ ನೀಡಿ ರುವ ಶಾಸಕರಿಗೂ ವಿಪ್‌ ಜಾರಿಗೊಳಿಸಲಾಗಿದ್ದು ಶಾಸಕರ ಭವನದಲ್ಲಿರುವ ಶಾಸಕರ ಕೊಠಡಿಗಳಿಗೆ ವಿಪ್‌ ಪ್ರತಿಯನ್ನುಅಂಟಿಸಲಾಗಿದೆ.

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.