ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಕುಸಿತ
Team Udayavani, May 10, 2022, 2:20 AM IST
ಮುಂಬಯಿ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರ 54 ಪೈಸೆ ಕುಸಿದು 77.44 ರೂ.ಗಳಿಗೆ ಮುಕ್ತಾಯವಾಗಿದೆ.
ಇದು ಡಾಲರ್ ಎದುರು ರೂಪಾಯಿಯ ಗರಿಷ್ಠ ಕುಸಿತ. ಕಳೆದ ಶುಕ್ರವಾರ, ಮೇ 6ರಂದು ಮುಕ್ತಾಯವಾಗಿದ್ದ ವಹಿ ವಾಟಿನ ವೇಳೆ 55 ಪೈಸೆ ಇಳಿಕೆಯಾಗಿ 76.90 ರೂ. ಆಗಿತ್ತು.
ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಏರುತ್ತಿರುವ ಹಣದುಬ್ಬರ ಮತ್ತು ಸೆಂಟ್ರಲ್ ಬ್ಯಾಂಕ್ಗಳು ಆರ್ಥಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಬಡ್ಡಿದರಗಳನ್ನು ಏರಿಸುತ್ತಿರುವ ಹಿನ್ನೆಲೆ ಯಲ್ಲಿ ವಿದೇಶಿ ಹೂಡಿಕೆದಾರರು ದೇಶಿಯ ಮಾರುಕಟ್ಟೆಗಳಲ್ಲಿ ಸದ್ಯ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.