ಗ್ರಾಮಗಳಲ್ಲಿ ಗ್ರಾಮೀಣ ಕಾರ್ಯಪಡೆ ನಿಗಾ

ಕೋವಿಡ್-19 ವೈರಸ್‌ ಹಿಮ್ಮೆಟ್ಟಿಸುವ ಕಾರ್ಯ ನಿರಂತರ

Team Udayavani, Apr 29, 2020, 5:57 AM IST

ಗ್ರಾಮಗಳಲ್ಲಿ ಗ್ರಾಮೀಣ ಕಾರ್ಯಪಡೆ ನಿಗಾ

ಸಾಂದರ್ಭಿಕ ಚಿತ್ರ..

ಉಡುಪಿ ಜಿಲ್ಲೆ ಹಸುರು ವಲಯಕ್ಕೆ ಬಂದಿದ್ದರೂ ಕೋವಿಡ್‌ ಜಾಗೃತಿ, ಮುನ್ನೆಚ್ಚರಿಕೆ, ಸಾಮಾಜಿಕ ಅಂತರ ಮೊದಲಾದವು ಮೊದಲಿನಂತೆಯೇ ಮುಂದುವರಿಯಲಿದೆ. ಪ್ರತಿ ಗ್ರಾಮಮಟ್ಟದಲ್ಲಿ ಇದರ ಮೇಲುಸ್ತುವಾರಿಗಾಗಿ ಸಮಿತಿಯನ್ನೂ ರಚಿಸಲಾಗಿದೆ. ಈ ಸಮಿತಿ ಪ್ರತಿ ಆಗು ಹೋಗುಗಳ ಬಗ್ಗೆ ನಿಗಾ ವಹಿಸುತ್ತದೆ.

ಉಡುಪಿ: ಕೋವಿಡ್‌-19 ವೈರಸ್‌ನಿಂದ ಜನರನ್ನು ರಕ್ಷಿಸಲು ಹಳ್ಳಿಗಳಲ್ಲಿ ಬಿಗಿಯಾದ ಮುಂಜಾಗ್ರತಾ ಕ್ರಮಗಳನ್ನು ಗ್ರಾಮೀಣ ಕಾರ್ಯಪಡೆ ನಿರ್ವಹಿಸುತ್ತಿವೆ.

ಕೋವಿಡ್-19 ನಿಯಂತ್ರಿಸುವ ಉದ್ದೇಶ ದಿಂದ ಸರಕಾರದ ಸೂಚನೆಯಂತೆ ಪ್ರತಿ ಗ್ರಾ.ಪಂ., ಕಂದಾಯ ಗ್ರಾಮಗಳಲ್ಲಿ ಗ್ರಾಮೀಣ ಕಾರ್ಯಪಡೆ ರಚನೆಯಾ ಗಿದೆ. ಗ್ರಾ.ಪಂ. ಅಧ್ಯಕ್ಷರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಪಿಡಿಒ ಕಾರ್ಯದರ್ಶಿ ಯಾಗಿರುತ್ತಾರೆ. ಪಂಚಾಯತ್‌ ಉಪಾ ಧ್ಯಕ್ಷರು, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ, ಗ್ರಾಮದ ಬೀಟ್‌ ಪೊಲೀಸ್‌, ಗ್ರಾಮದ ಆರೋಗ್ಯ ಕೇಂದ್ರದ ಸಿಬಂದಿ, ಅಂಗನ ವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನೋಂದಾ ಯಿತ ಸ್ಥಳಿಯ ವೈದ್ಯರು ಸಮಿತಿಯ ಸದಸ್ಯರಾಗಿರುವರು. ಗ್ರಾ.ಪಂ. ಮತ್ತು ಕಂದಾಯ ಗ್ರಾಮಗಳ ಹಳ್ಳಿಗಳಲ್ಲಿ ತಂಡವು ಸುತ್ತಾಡಿ ಜನರು ಅನಾವಶ್ಯಕವಾಗಿ ಮನೆಗಳಿಂದ ಹೊರ ಬರದಂತೆ ನೋಡಿ ಕೊಳ್ಳುತ್ತಿದ್ದಾರೆ.

ಕಾರ್ಯಪಡೆಯ ಕಾರ್ಯಗಳೇನು?
ಗ್ರಾಮಗಳಲ್ಲಿ ಮದುವೆ ಇನ್ನಿತರ ಕಾರ್ಯಗಳಿಗೆ ಜನರು ಗುಂಪುಗೂಡದಂತೆ ಕ್ರಮವಹಿಸುವುದು. ಸಾರ್ವಜನಿಕ ಸ್ಥಳ ಗಳಲ್ಲಿ ಅಂತರ ಕಾಯ್ದುಕೊಳ್ಳುವುದು, ಗ್ರಾ.ಪಂ. ಕಚೇರಿ, ಬಸ್‌ ನಿಲ್ದಾಣ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನೀರು ವ್ಯವಸ್ಥೆ ಕಲ್ಪಿಸುವುದು, ಮೂಲಕ ನಿಯಮ ಪಾಲನೆ ಮಾಡುವಂತೆ ಮನವೊಲಿಸುವ ಕಾರ್ಯ ಸಮಿತಿ ಮಾಡುತ್ತಿದೆ.

ಅನುದಾನ ಬಳಸಲು ಜಿ.ಪಂ. ಅವಕಾಶ
ಕೋವಿಡ್‌ -19 ನಿಯಂತ್ರಿಸುವುದಕ್ಕಾಗಿ ಗ್ರಾ.ಪಂ.ನ 14ನೇ ಹಣಕಾಸು ಬಳಕೆಗೆ ಜಿ.ಪಂ. ಅವಕಾಶ ನೀಡಿದೆ. ಕ್ರಿಯಾಯೋಜನೆ ಬದಲಿಸಿಕೊಂಡು ಹಣವನ್ನು ಪಡಿತರ ಇಲ್ಲದವರಿಗೆ, ವಲಸೆ ಕಾರ್ಮಿಕರಿಗೆ, ನಿರ್ಗತಿಕರಿಗೆ ದಿನಸಿ, ಆಹಾರ ಒದಗಿಸಲು ಬಳಸಿಕೊಳ್ಳಬಹುದಾಗಿದೆ. ಇನ್ನುಳಿದ ಕೆಲ ಅನುದಾನದಲ್ಲಿ ಬ್ಲೀಚಿಂಗ್‌ ಪೌಡರ್‌, ಮಾಸ್ಕ್ ಸ್ಯಾನಿಟೈಸರ್‌, ಕೈ-ಕಾಲುಗಳಿಗೆ ರಕ್ಷಣಾ ಕವಚ, ಹ್ಯಾಂಡ್‌ ವಾಷ್‌ ಲಿಕ್ವಿಡ್‌, ಖರೀದಿ ಮಾಡಬೇಕಿದೆ.

ಕಾರ್ಯಪಡೆ ಆದ್ಯತೆಯ ಕೆಲಸಗಳೇನು?
1.ಸ್ವಚ್ಚತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ
2 ದಿನಸಿ ಅಂಗಡಿ ಓಪನ್‌ ಮಾಡಿಸಿ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸುವುದು.
3 ಅಗತ್ಯ ಪಡಿತರ ಸಾಮಗ್ರಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುವುದು.
4 ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸುವಂತೆ ತಿಳಿ ಹೇಳುವುದು.
5 ಬೇರೆ ಊರುಗಳಿಂದ ಬರುವ ಅಧಿಕಾರಿಗಳಿಗೆ ಊಟ ನೀಡುವುದರ ಜತೆಗೆ ನೈತಿಕ ಬೆಂಬಲ ನೀಡುವುದು.
6 ಹೊರ ದೇಶ, ರಾಜ್ಯ, ಜಿಲ್ಲೆಗಳಿಂದ ಹಳ್ಳಿಗಳಿಗೆ ಬಂದಿರುವ ಮತ್ತು ಬರುತ್ತಿರುವವರ ಬಗ್ಗೆ ನಿಗಾ ವಹಿಸಿ, ಅವರ ಆರೋಗ್ಯ ತಪಾಸಣೆ ಮಾಡಿಸುವುದು. ಹೋಂ ಕ್ವಾರಂಟೈನ್‌ಗೆ ಸೂಚಿಸುವುದು.
6 ಹೊರಗಿನಿಂದ ಹಳ್ಳಿಗಳಿಗೆ ಬಂದಿರುವವರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುವುದು.
6 ಧ್ವನಿವರ್ಧಕದ ಮೂಲಕ ಕೋವಿಡ್-19 ಬಗ್ಗೆ ಪ್ರಚಾರ,ಜಾಗೃತಿ ಮೂಡಿಸುವುದು.

ಹಣಕಾಸಿನ ನೆರವು
ಸರಕಾರ ಬಿಡುಗಡೆಗೊಳಿಸಿದ 20,000 ರೂ ಮೊತ್ತದ ಹಣವನ್ನು ಗ್ರಾಮ ಮಟ್ಟದ ಪ್ರತಿ ಟಾಸ್ಕ್ ಪೋರ್ಸ್‌ ಕಮಿಟಿಗೆ ಬಳಕೆಗೆ ನೀಡಿದೆ. ಹೆಚ್ಚುವರಿ ಹಣಕಾಸಿನ ನೆರವನ್ನು ಕೂಡ ಬಳಸಿಕೊಳ್ಳಲಾಗಿದೆ. ಎಸ್‌ಬಿಎಂ ಅಡಿಯಲ್ಲಿ ಗ್ರಾ.ಪಂ. ಕಾರ್ಮಿಕರು, ಸ್ವಚ್ಚತೆ ಕಾರ್ಮಿಕರಿಗೆ ಅಗತ್ಯ ಬಳಕೆಗೆ ಸ್ಯಾನಿಟೈಸರ್‌, ಮಾಸ್ಕ್ , ಕೈಗವಸು ಖರೀದಿ ಹಾಗೂ ಹೆಚ್ಚುವರಿ ಇತರ ಹಣವನ್ನು ಬಳಸಿಕೊಳ್ಳಲು ಗ್ರಾ.ಪಂಗ‌ಳಿಗೆ ಸೂಚನೆ ನೀಡಲಾಗಿದೆ.
-ಪ್ರೀತಿ ಗೆಹ್ಲೋಟ್,
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿ.ಪಂ., ಉಡುಪಿ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.