ಯಾವ ಪುರುಷಾರ್ಥಕ್ಕೆ ಈ ಯುದ್ಧ?
Team Udayavani, Mar 6, 2022, 6:50 AM IST
ಈ ಫೋಟೋವನ್ನು ನೋಡಿದರೆ ಯಾವ ಕಲ್ಲುಹೃದಯವೂ ಕರಗದೇ ಇರದು. ಇನ್ನೇನು ಒಂದೆರಡು ಕ್ಷಣ ಕಳೆದಿದ್ದರೆ, ಆ ಕುಟುಂಬವು ಯುದ್ಧದ ಕರಾಳತೆಯಿಂದ ಹೊರಗೆ ಕಾಲಿಡುತ್ತಿತ್ತು.
ಆದರೆ, ಶೆಲ್ ದಾಳಿಯಿಂದ ಸಿಡಿದ ಮೊಳೆಯೊಂದು ಉಕ್ರೇನ್ನ ಈ ದಂಪತಿಯ ಕರುಳಕುಡಿಯ ಪ್ರಾಣವಾಯುವನ್ನೇ ಕಸಿದುಕೊಂಡು ಬಿಟ್ಟಿದೆ. ಮರಿಯುಪೋಲ್ನಲ್ಲಿ ಶನಿವಾರ ರಷ್ಯಾ ಸೇನೆಯು ನಿರಂತರವಾಗಿ ಶೆಲ್ ದಾಳಿ ನಡೆಸಿತ್ತು.
ಈ ವೇಳೆ, ಅಲ್ಲಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ದಂಪತಿಯ 18 ತಿಂಗಳ ಹಸುಗೂಸುವಿನ ದೇಹವನ್ನು ಮೊಳೆಯು ಹೊಕ್ಕೇಬಿಟ್ಟಿತು. ರಕ್ತಸಿಕ್ತ ಕುಡಿಯನ್ನು ಎದೆಗವಚಿಕೊಂಡು ಹೆತ್ತವರು ಆಸ್ಪತ್ರೆಗೆ ಧಾವಿಸಿದರು. ಆದರೆ, ವೈದ್ಯರು ಎಷ್ಟೇ ಪ್ರಯತ್ನಪಟ್ಟರೂ ಮಗು ಬದುಕುಳಿಯಲಿಲ್ಲ. ಒಂದೆಡೆ, ಮಗುವಿನ ನಿಶ್ಚಲ ದೇಹದ ಮುಂದೆ ಕಣ್ಣೀರಿಡುತ್ತಿದ್ದ ಹೆತ್ತವರು, ಮತ್ತೊಂದು ಕಡೆ ಹಸುಗೂಸನ್ನು ಕೊನೆಗೂ ಬದುಕುಳಿಸಲು ಆಗಲಿಲ್ಲವಲ್ಲಾ ಎಂದು ಕುಸಿದು ಕುಳಿತಿರುವ ವೈದ್ಯ… ಈ ಎರಡು ಚಿತ್ರಗಳೇ ಸಾಕು “ಯಾವ ಪುರುಷಾರ್ಥಕ್ಕೆ ಈ ಯುದ್ಧ’ ಎಂಬ ಪ್ರಶ್ನೆ ಮೂಡಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
MUST WATCH
ಹೊಸ ಸೇರ್ಪಡೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ
Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ