Udayavni Special

ಸನಾತನ , ಶ್ರೀಮಂತ ಕೊಂಕಣಿ ಭಾಷೆ – ಸಾಹಿತ್ಯ – ಸಂಸ್ಕೃತಿ

Team Udayavani, Feb 21, 2020, 6:30 AM IST

sanatana

ಕೊಂಕಣಿ ಭಾಷೆ, ಸಾಹಿತ್ಯ , ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಕೊಂಕಣಿ ಅಕಾಡೆಮಿಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಈ ನಿಮಿತ್ತ ಕೊಂಕಣಿ ಅಕಾಡೆಮಿಯ ಕಾರ್ಯಚಟುವಟಿಕೆಗಳು ಮತ್ತು ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಿದು.

ಆಂಗ್ಲ ಭಾಷೆಯ ಪ್ರಭಾವದಿಂದ ಎಷ್ಟೋ ಭಾಷೆಗಳು ಅವನತಿಯತ್ತ ಸಾಗುತ್ತಿದೆ. ಇದಕ್ಕೆ ಕೊಂಕಣಿ ಭಾಷೆಯೂ ಹೊರತಾಗಿಲ್ಲ . ಈ ದೃಷ್ಟಿಯಿಂದ ಕೊಂಕಣಿ ಭಾಷೆಯನ್ನು ಉಳಿಸಿ, ಬೆಳೆಸಬೇಕು, ಕೊಂಕಣಿ ಭಾಷೆಯಲ್ಲಿ ಸಾಹಿತ್ಯದ ಕೃಷಿ ನಿರಂತರವಾಗಿ ನಡೆಯಬೇಕು, ಕೊಂಕಣಿ ಸಮುದಾಯದ ಕಲೆ – ಸಂಸ್ಕೃತಿ ಉಳಿಯಬೇಕೆಂಬ ಸದಾಶಯದಿಂದ 21-4-1994ರಂದು “ಕೊಂಕಣಿ ಸಾಹಿತ್ಯ ಅಕಾಡೆಮಿ’ ಕರ್ನಾಟಕ ಸರಕಾರದಿಂದ ಸ್ಥಾಪನೆಯಾಯಿತು.

ಭಾರತದ ಸಂವಿಧಾನವು 22 ಭಾಷೆಗಳಿಗೆ 8ನೇ ಪರಿಚ್ಛೇದದಲ್ಲಿ ಮಾನ್ಯತೆ ನೀಡಿದೆ. ಅವುಗಳಲ್ಲಿ ಕೊಂಕಣಿಯೂ ಒಂದು. ಕೊಂಕಣಿ ಭಾರತದ ಪಶ್ಚಿಮ ಮತ್ತು ಕೊಂಕಣ ಪ್ರದೇಶದಲ್ಲಿ ಬಳಕೆಯಲ್ಲಿದೆ. ಕೊಂಕಣಿ ಎಂಬ ಶಬ್ದದ ಉತ್ಪತ್ತಿ “ಕೊಂಕಣ್‌’ ಎಂಬ ಶಬ್ದದಿಂದಾಗಿದೆ. ಸಂಸ್ಕೃತದಲ್ಲಿ “ಕುಹು’ ಎಂದರೆ ಭೂಮಿ ಮತ್ತು “ಕೋನಾ’ ಎಂದರೆ ಮೂಲೆ. ಈ ಶಬ್ದಗಳಿಂದ ಭೂಮೂಲೆಯ ಪ್ರದೇಶ ಎಂಬ ಅರ್ಥದಲ್ಲಿ ಈ ಶಬ್ದ ಬಂದಿದೆ. ದಕ್ಷಿಣ ಏಷ್ಯಾದ ಮೂಲ ನಿವಾಸಿ ಜನರ ಆಡುಭಾಷೆಯ ಮೇಲೆ ಕ್ರಮೇಣ ವಿವಿಧ ಭಾಷೆಗಳ ಪ್ರಭಾವವಿದ್ದು ಹೊಸ ಭಾಷೆಗಳು ರೂಪುಗೊಂಡಂತೆ ಕೊಂಕಣ ತೀರದ ಕೊಂಗ (ಕೊಂಕು) ಜನರ ಆಡು ನುಡಿಯ ಮೇಲೆ ಪ್ರಾಕೃತ ಹಾಗೂ ಉತ್ತರ ಮಹಾರಾಷ್ಟ್ರದ ಭಾಷೆಗಳ ಪ್ರಭಾವ ಬೀಳುತ್ತಾ ಸರಿಸುಮಾರು ಹತ್ತನೇ ಶತಮಾನದಲ್ಲಿ ಕೊಂಕಣಿ ಭಾಷೆ ಉದಯಿಸಿತು.

ಕೊಂಕಣಿಯು ಒಂದು ಸಾವಿರ ವರ್ಷಗಳಿಂದ ಲಿಖೀತ ರೂಪದಲ್ಲಿ ಬಳಕೆಯಲ್ಲಿದೆ. ಗುಜರಾತ್‌ನಿಂದ ಕೇರಳದ ತುದಿಯ ತನಕ 5 ರಾಜ್ಯಗಳ ಕರಾವಳಿಯಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಮ್‌ ಹೀಗೆ 3 ಧರ್ಮಗಳ, 41 ಉಪಜಾತಿಗಳ ಜನರ ಆಡು ಭಾಷೆಯಾಗಿರುವ ಕೊಂಕಣಿಗೆ ನಿರ್ದಿಷ್ಟ ಏಕ ಲಿಪಿ ಇಲ್ಲ. ಈ ಪ್ರದೇಶದ ಜನ ಕೊಂಕಣಿಯನ್ನು ಬರೆಯಲು ದೇವನಾಗರಿ, ಕನ್ನಡ, ರೋಮನ್‌, ಮಲಯಾಳಂ ಹಾಗೂ ಪಸೋì – ಅರೇಬಿಕ್‌ ಲಿಪಿಗಳ ಬಳಕೆ ಮಾಡುತ್ತಿದ್ದಾರೆ.

ಸಾಂಸ್ಕೃತಿಕ – ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೊಂಕಣಿ ಗರು ಸಂಗೀತ, ಗಾಯನಕ್ಕೆ ವಿಶೇಷ ಸ್ಥಾನ ನೀಡಿದ್ದಾರೆ. ಬನಾ³ಡಾ, ವಳಿxಕೆ ಗೀತೆಗಳು, ಪಾಳಾ¡éಗಿತಾಂ, ಬೆಳಾಗಿತಾಂ, ಧಾಲೋ, ದರ್ಜಸ್‌, ದುಲೊ³ಡ್‌, ದುವಾಳೊ, ಫೇಲ್‌, ದೆಕ್ಲಿ …ಇತ್ಯಾದಿ “ಗುಮಟೆ’ ಎಂಬ ವಾದನ ಕೊಂಕಣಿ ಸಂಸ್ಕೃತಿಯ ಸ್ವಂತ ಅನನ್ಯವಾದನ. ಮಣ್ಣಿನ, ಸಣ್ಣ ಕಂಠದ ವೃತ್ತಾಕಾರದ ಮಡಿಕೆಯ ಬಾಯಿಗೆ ಉಡದ ಚರ್ಮವನ್ನು ಕಟ್ಟಿ ಇದನ್ನು ಸಿದ್ಧಪಡಿಸಲಾಗುತ್ತದೆ.

ಕೊಂಕಣಿ ಸಾಹಿತ್ಯ, ಸಂಸ್ಕೃತಿ, ಭಾಷೆ, ಶಿಕ್ಷಣ, ಸಮುದಾಯದ ಬೆಳವಣಿಗೆಗೆ 25 ವರ್ಷಗಳಿಂದ “ಕೊಂಕಣಿ ಸಾಹಿತ್ಯ ಅಕಾಡೆಮಿ’ ನಿರಂತರವಾಗಿ ಶ್ರಮಿಸುತ್ತಿದೆ. ಪ್ರತಿ ವರ್ಷ ಅಕಾಡೆಮಿ ಕೊಂಕಣಿ ಸಾಹಿತ್ಯ, ಕಲೆ ಹಾಗೂ ಜಾನಪದ ಈ ಮೂರು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಸಾಧಕರನ್ನು ಗುರುತಿಸಿ, ಗೌರವಿಸುವ ಕಾರ್ಯಕ್ರಮವನ್ನು ಅಕಾಡೆಮಿಯು ರಾಜ್ಯಾದ್ಯಂತ ನಡೆಸಿಕೊಂಡು ಬರುತ್ತಿದೆ. 1995ರಿಂದ 2018ರ ವರೆಗೆ ಒಟ್ಟು 97 ಸಾಧಕರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವರೆಗೆ ಒಟ್ಟು 62 ಪುಸ್ತಕಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಅಕಾಡೆಮಿಯ ಸತತ ಪ್ರಯತ್ನದಿಂದ ಕರ್ನಾಟಕದಲ್ಲಿ ಕೊಂಕಣಿ ಕಲಿಕೆ ಅಭಿವೃದ್ಧಿಯಲ್ಲಿದೆ. 6ನೇ ತರಗತಿಯಿಂದ 10ನೇ ತರಗತಿವರೆಗೆ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ವಿದ್ಯಾರ್ಥಿಗಳು ಕೊಂಕಣಿಯನ್ನು ಐಚ್ಛಿಕ ಭಾಷೆಯಾಗಿ ಕಲಿಯುತ್ತಿದ್ದಾರೆ. ಹಂಪನ ಕಟ್ಟೆಯ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಸ್ನಾತಕೋತ್ತರದಲ್ಲಿ ಕೊಂಕಣಿ ಮೊಳಕೆಯೊಡೆದಿದೆ. ಅಕಾಡೆಮಿ ವತಿಯಿಂದ ಕೊಂಕಣಿ ಎಂ.ಎ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುತ್ತಿದೆ.

ಅಕಾಡೆಮಿ ವತಿಯಿಂದ ಪುಸ್ತಕ ಪ್ರಕಟನೆ ಮತ್ತು ಮಾರಾಟ, ಗ್ರಂಥಾಲಯ ಅಭಿವೃದ್ಧಿ ಇತ್ಯಾದಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕತೆ, ಕಾದಂಬರಿ, ಮಹಾಕಾವ್ಯ, ಕವಿತೆ, ಲೇಖನ ಸಂಗ್ರಹ, ಜೀವನ ಚರಿತ್ರೆ, ಫೆಲೋಶಿಪ್‌ ಅಧ್ಯಯನ, ವ್ಯಾಕರಣ, ಪ್ರವಾಸ ಸಾಹಿತ್ಯ, ಆರ್ಥಿಕ ಮಾಹಿತಿ, ಶಿಶು ಸಾಹಿತ್ಯ, ಸ್ತ್ರೀಯರ ಸಾಹಿತ್ಯ, ಅನುವಾದ, ವಿಜ್ಞಾನ, ಜನಪದ ಹಾಡುಗಳು, ಗಮಕ ಹಾಡುಗಳು, ಕೃಷಿ ಮಾಹಿತಿ, ನಾಟಕ, ಸಮುದಾಯ ಅಧ್ಯಯನ, ದಿನಬಳಕೆಯ ಪದಕೋಶ ಹೀಗೆ ವಿವಿಧ ಪ್ರಕಾರಗಳ ವೈವಿಧ್ಯತೆಯನ್ನು ಅಳವಡಿಸಿ ಪುಸ್ತಕ ಪ್ರಕಟಿಸಲಾಗುತ್ತಿದೆ.
ಇದುವರೆಗೆ ಅಕಾಡೆಮಿ ವತಿಯಿಂದ 263 ಪುಸ್ತಕಗಳನ್ನು ಪ್ರಕಟಿಸಲಾಗಿದೆ.

ಲೇಖಕರಿಗೆ ಗೌರವ ಧನದ ಜೊತೆಗೆ 25 ಪುಸ್ತಕಗಳನ್ನು ಹಾಗೂ ಮಾರಾಟಕ್ಕೆ ಶೇ. 50 ರಿಯಾಯಿತಿಯಲ್ಲಿ 100 ಪುಸ್ತಕಗಳನ್ನು ನೀಡಲಾಗುತ್ತಿದೆ. ಕೊಂಕಣಿ ಸಾಹಿತಿಗಳು ಮುದ್ರಿಸಿ ಪ್ರಕಟಿಸಿರುವ ಪುಸ್ತಕಗಳನ್ನು ಸಹ ಅಕಾಡೆಮಿ ವತಿಯಿಂದ ಶೇ. 20 ರಿಯಾಯಿತಿಯೊಂದಿಗೆ ರೂ.2000 ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಪ್ರೋತ್ಸಾಹಿಸಲಾಗುತ್ತಿದೆ. ಕೊಂಕಣಿ ಸಮುದಾಯದ ಅನುಪಮ ಜನಪದ ಹಾಡು, ನೃತ್ಯಗಳು ನಶಿಸಿ ಹೋಗದೆ ಅವುಗಳನ್ನು ಮೂಲರೂಪದಲ್ಲಿ ಉಳಿಸಿ ಬೆಳೆಸುವ, ಅರಿವು ಮೂಡಿಸುವ ಕೆಲಸ ಕಾರ್ಯಗಳು ಅಕಾಡೆಮಿಯಿಂದ ನಡೆಯುತ್ತಿವೆ.

ಈ ರೀತಿ ಬಹು ಆಯಾಮಗಳಿಂದ ಜನೋಪಯೋಗಿ ಕೆಲಸ ಮಾಡುತ್ತಿರುವ “ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ’ಗೆ ಈಗ 25ರ ಹರೆಯ. ಅಕಾಡೆಮಿಯ ಈ ಬೆಳ್ಳಿಹಬ್ಬವನ್ನು ಹಾಗೂ ಕೊಂಕಣಿ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕಾರ್ಕಳದ ಶಾಲೆಯ ಆವರಣದಲ್ಲಿ ಫೆ. 22 ಮತ್ತು 23ರಂದು ಆಚರಿಸಬೇಕೆಂದು ಅಕಾಡೆಮಿ ನಿರ್ಧರಿಸಿದೆ. ಫೆ.23 ಸಾಯಂಕಾಲ 4.30ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಬೆಳ್ಳಿಹಬ್ಬದ ಸಂದರ್ಭದಲ್ಲಿ 25 ಕೊಂಕಣಿ ಸಾಧಕರನ್ನು ಹಾಗೂ ಅಕಾಡೆಮಿಯ 6 ಜನ ಪೂರ್ವ ಅಧ್ಯಕ್ಷರನ್ನು ಸಮ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳನ್ನು ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪ್ರತಿನಿಧಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ, ಆಯುರ್ವೇದ ಗಿಡಮೂಲಿಕೆಗಳ ಹಾಗೂ ದೇಶಿಯ ಗೋತಳಿಗಳ ಪ್ರದರ್ಶನಗಳನ್ನೂ ಏರ್ಪಡಿಸಲಾಗಿದೆ. ರೆಡ್‌ಕ್ರಾಸ್‌ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

– ಡಾ| ಕೆ. ಜಗದೀಶ ಪೈ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mk-34

ಪುಣ್ಯ ಪರ್ವದಿನ ಸಂಕ್ರಮಣ

j-17

ಕೆ.ಕೆ.ಪೈ ಮತ್ತು ಪರ್ಯಾಯದ ಪಳಮೆ

n-40

ಉತ್ತಮರಾಗೋಣ, ಉಪಕಾರಿಗಳಾಗೋಣ…

32

ಸಾಂಸ್ಕೃತಿಕ ಹರಿಕಾರ ಶ್ರೀವಿಶ್ವೇಶತೀರ್ಥರು

32

ಪೇಜಾವರ ಶ್ರೀ ಮೂಲಕ ವಿಧಿ ಕೊಟ್ಟ ಕರೆ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ