ಲಂಕಾಸುರನ ಜೊತೆ ಯೋಗಿ
Team Udayavani, Jan 13, 2021, 3:48 PM IST
“ಲೂಸ್ ಮಾದ’ ಯೋಗಿ ಹೊಸ ವರ್ಷದಲ್ಲಿ ಒಂದಷ್ಟು ಹೊಸ ಸಿನಿಮಾಗಳಲ್ಲಿ ನಟಿಸಲು ಅಣಿಯಾಗುತ್ತಿದ್ದಾರೆ. ಈಗಾಗಲೇ
ಆರಂಭವಾಗಿರುವ ಅವರ ಕೆಲವು ಸಿನಿಮಾಗಳು ಈ ರ್ಷ ತೆರೆಕಂಡರೆ, ಇನ್ನು ಕೆಲವು ಸಿನಿಮಾಗಳು ಈ ವರ್ಷ ಆರಂಭವಾಗಲಿದೆ. ಅದರಲ್ಲಿ “ಲಂಕಾಸುರ’ ಕೂಡಾ ಒಂದು. ಹೌದು, ಯೋಗಿ “ಲಂಕಾಸುರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. “ಲಂಕಾಸುರ’ ಚಿತ್ರದಲ್ಲಿ
ವಿನೋದ್ ಪ್ರಭಾಕರ್ ಹೀರೋ. ಈಗ ಹೊಸದಾಗಿ ಯೋಗಿ ಸೇರ್ಪಡೆಯಾಗಿದ್ದಾರೆ. ಯೋಗಿ ಇಲ್ಲಿ ಆ್ಯಕ್ಷನ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ, ಯೋಗಿ ಈ ಹಿಂದೆ “ಲಂಕೆ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವುದು ಸುದ್ದಿಯಾಗಿತ್ತು.
ಎ.ಎಂ.ಎಸ್ ಪೊ›ಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ .ಈ ಹಿಂದೆ ಮೂರ್ಕಲ್ ಎಸ್ಟೇಟ್ ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ್ ಕುಮಾರ್ ಲಂಕಾಸುರ ಚಿತ್ರದ ನಿರ್ದೇಶಕರು. ಇದು ಅವರಿಗೆ ಎರಡನೇ ನಿರ್ದೇಶನದ ಚಿತ್ರ.
ಇದನ್ನೂ ಓದಿ:ಮಲಯಾಳಿ ನಟಿಯ ಕನ್ನಡ ಪ್ರೀತಿ
ಎಲ್ಲಾ ಓಕೆ, “ಲಂಕಾಸುರ’ ಎಂಬ ಟೈಟಲ್‌ನಡಿ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ ಎಂದು ನೀವು ಕೇಳಬಹುದು.
ಅದಕ್ಕೆ ಉತ್ತರ ಅಂಡರ್‌ವರ್ಲ್ಡ್. ಹೌದು, “ಲಂಕಾಸುರ’ದಲ್ಲಿ ರೌಡಿಸಂ ಕಥೆಯನ್ನು ನಿರ್ದೇಶಕರು ಹೇಳಲಿದ್ದಾರಂತೆ. “ಲಂಕಾಸುರ’ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಆಕೆ ಪಾರ್ವತಿ ಅರುಣ್. ಯಾವ ಪಾರ್ವತಿ ಅರುಣ್ ಎಂದರೆ ಮಲಯಾಳಂ ನಟಿ ಎನ್ನಬೇಕು. ಹಾಗಂತ ಆಕೆ ಕೇವಲ ಮಲಯಾಳಂಗೆ ಸೀಮಿತವಾಗಿಲ್ಲ. ಈಗಾಗಲೇ ಕನ್ನಡದ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ಅದು “ಗೀತಾ’. ಗಣೇಶ್ ನಾಯಕರಾಗಿರುವ “ಗೀತಾ’ ಚಿತ್ರದಲ್ಲಿ ಪಾರ್ವತಿ ನಟಿಸಿದ್ದರು. ಈಗ “ಲಂಕಾಸುರ’ ಮೂಲಕ ಮತ್ತೂಮ್ಮೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಸಂಕ್ರಾಂತಿಗೆ ಆರಂಭವಾಗಲಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444