Udayavni Special

ಟಿಕ್‌ಟಾಕ್‌ ನಿಷೇಧಕ್ಕೆ ಒತ್ತಾಯಿಸಿದ ಸ್ಯಾಂಡಲ್‌ವುಡ್‌


Team Udayavani, May 23, 2020, 3:55 AM IST

tik-nishedha

ಇತ್ತೀಚೆಗೆ ಮೊಬೈಲ್‌ ಪೋನ್‌ ಗಳು ಮತ್ತು ಸೋಶಿಯಲ್‌ ಮೀಡಿಯಾಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದ ಟಿಕ್‌ಟಾಕ್‌ ಆ್ಯಪ್‌ ಅನ್ನು ಇಂಡಿಯಾದಲ್ಲಿ ಬ್ಯಾನ್‌ ಮಾಡುವಂತೆ ಟ್ವಿಟ್ಟರ್‌ನಲ್ಲಿ ಅಭಿಯಾನ ಶುರುವಾಗಿದೆ. ಇತ್ತೀಚೆಗೆ ಯುವ  ಜನತೆ ಸೋಶಿಯಲ್‌ ಮೀಡಿಯಾಗಳಲ್ಲಿ ಹೆಚ್ಚಾಗಿ ಟಿಕ್‌ಟಾಕ್‌ ಬಳಸುತ್ತಿದ್ದು, ಇದೊಂದು ವ್ಯಸನವಾಗಿ ಬದಲಾಗುತ್ತಿದೆ. ಇಲ್ಲಿ ವಿಡಿಯೋವನ್ನು ಮಾಡಲು ಹೋಗಿ ಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು  ಅನೇಕರ ಆರೋಪ.

ಈಗ ಈ ಆ್ಯಪ್‌ ಅನ್ನು ಬ್ಯಾನ್‌ ಮಾಡುವಂತೆ ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಮೊದಲಿಗೆ 4.6ರ  ರೇಟಿಂಗ್‌ನಲ್ಲಿ ಇದ್ದ ಟಿಕ್‌ಟಾಕ್‌ ಆ್ಯಪ್‌ ಈಗ 1.3ಕ್ಕೆ ಇಳಿದಿದೆ.  ಟಿಕ್‌ಟಾಕ್‌ ಚೀನಾದ ಆ್ಯಪ್‌ ಆಗಿದ್ದು,  ಸ್ವದೇಶಿ ವಸ್ತುಗಳನ್ನು ಬಳಸಿ ಹಾಗೂ ಚೀನಾದ ವಸ್ತುಗಳನ್ನು ತಿರಸ್ಕರಿಸಬೇಕು ಎಂಬ ನಿಟ್ಟಿನಲ್ಲಿ ಕೆಲವರು ಟಿಕ್‌ಟಾಕ್‌ ಅನ್ನು ವಿರೋಧ ಮಾಡುತ್ತಿದ್ದರೆ, ಇನ್ನೂ ಕೆಲವರು ಇದರಲ್ಲಿ  ವಿಡಿಯೋ ಮಾಡಿ ಜನಪ್ರಿಯತೆ ಪಡೆಯುವ ಗೀಳಿಗೆ ಬಿದ್ದ  ಯುವಕ-ಯುವತಿಯರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ.

ಈ ಎಲ್ಲ ಕಾರಣದಿಂದ ಟಿಕ್‌ ಟಾಕ್‌ ಬ್ಯಾನ್‌ ಆಗಬೇಕು ಎಂದು ಅಭಿಯಾನವನ್ನು ಆರಂಭಿಸಿದ್ದಾರೆ. ಟಿಕ್‌ಟಾಕ್‌ ಆ್ಯಪ್‌ನಲ್ಲಿ ಕೆಲ  ಸೆಲೆಬ್ರಿಟಿಗಳು ವಿಡಿಯೋ ಮಾಡುತ್ತಿದ್ದರೆ, ಈ  ಕಡೆ ಕೆಲ ಸೆಲೆಬ್ರಿಟಿಗಳು ಅದನ್ನು ಬ್ಯಾನ್‌ ಮಾಡುವಂತೆ ಟ್ವೀಟ್‌ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್‌ವುಡ್‌ನ‌ ಸ್ಟಾರ್‌ ನಿರ್ದೇಶಕರಾದ ಸಂತೋಷ್‌ ಅನಂದ್‌ರಾಮ್‌, ಪವನ್‌ ಒಡೆಯರ್‌ ಮತ್ತು  ಎಪಿ ಅರ್ಜುನ್‌ ಟಿಕ್‌ಟಾಕ್‌ ಅನ್ನು ಬ್ಯಾನ್‌ ಮಾಡಿ ಎಂದು ಬರೆದು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಕೆಲ ಬಾಲಿವುಡ್‌ ನಟರು ಕೂಡ ಕೈಜೋಡಿಸಿದ್ದು, ಟಿಕ್‌ಟಾಕ್‌ ಬ್ಯಾನ್‌ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.

ಇನ್ನು ಟಿಕ್‌ಟಾಕ್‌ ತಪ್ಪು  ದಾರಿಗೆ ಎಳೆಯುತ್ತಿದೆ ಎಂದು ರಾಷ್ಟೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯಪಟ್ಟಿದ್ದು, ಟಿಕ್‌ ಟಾಕ್‌ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು.  ಸದ್ಯ ಟ್ವಿಟ್ಟರ್‌ ನಲ್ಲಿ ಟಿಕ್‌ ಟಾಕ್‌ ನಿಷೇಧಿಸಿ ಅಭಿಯಾನಕ್ಕೆ ಕಲಾವಿದರು ಮತ್ತು ನಿರ್ದೇಶಕರು ಸಾಥ್‌ ನೀಡಿದ್ದು ಟಿಕ್‌ ಟಾಕ್‌ ಬ್ಯಾನ್‌ ಆಗುತ್ತ ಅನ್ನೋದು ಮುಂದೆ ಗೊತ್ತಾಗಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯಸಭೆ ಚುನಾವಣೆ: ಟಿಕೆಟ್‌ಗಾಗಿ ಬಿಜೆಪಿಯಲ್ಲಿ ತೀವ್ರ ಲಾಬಿ

ರಾಜ್ಯಸಭೆ ಚುನಾವಣೆ: ಟಿಕೆಟ್‌ಗಾಗಿ ಬಿಜೆಪಿಯಲ್ಲಿ ತೀವ್ರ ಲಾಬಿ

ನಮ್ಮಲ್ಲಿ 198 ಹೊಸ ತಳಿ! ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಈ ಅಂಶ: ಝಡ್‌ಎಸ್‌ಐ ಶೋಧನೆನಮ್ಮಲ್ಲಿ 198 ಹೊಸ ತಳಿ! ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಈ ಅಂಶ: ಝಡ್‌ಎಸ್‌ಐ ಶೋಧನೆ

ನಮ್ಮಲ್ಲಿ 198 ಹೊಸ ತಳಿ! ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಈ ಅಂಶ: ಝಡ್‌ಎಸ್‌ಐ ಶೋಧನೆ

ಎನ್‌ಐಸಿ ಪೋರ್ಟಲ್‌ಗ‌ಳ ಮೂಲಕ ಅಧಿವೇಶನ?

ಎನ್‌ಐಸಿ ಪೋರ್ಟಲ್‌ಗ‌ಳ ಮೂಲಕ ಅಧಿವೇಶನ?

ಪುಲ್ವಾಮಾ ದಾಳಿ ರೂವಾರಿ ಹತ್ಯೆ

ಪುಲ್ವಾಮಾ ದಾಳಿ ರೂವಾರಿ ಹತ್ಯೆ

ಒಂದು ದೇಶ,ಒಂದು ಮಾರುಕಟ್ಟೆ; ಎಪಿಎಂಸಿ ಹಂಗಿನಿಂದ ಅನ್ನದಾತ ಪಾರು

ಒಂದು ದೇಶ,ಒಂದು ಮಾರುಕಟ್ಟೆ; ಎಪಿಎಂಸಿ ಹಂಗಿನಿಂದ ಅನ್ನದಾತ ಪಾರು

ಅಮೆರಿಕ-ಚೀನ ಏರ್‌ಲೈನ್‌ ಸಮರ

ಅಮೆರಿಕ-ಚೀನ ಏರ್‌ಲೈನ್‌ ಸಮರ

ಮಹಾ: ನಿಸರ್ಗ ನಿಟ್ಟುಸಿರು; ಮೂವರ ಸಾವು

ಮಹಾ: ನಿಸರ್ಗ ನಿಟ್ಟುಸಿರು; ಮೂವರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

expetation

ನಿರೀಕ್ಷೆ ಮತ್ತು ಸಿನಿ ಬಿಡುಗಡೆಯ ಕನಸು

mechge prasneeta

ಪ್ರಣೀತಾ ಕಾರ್ಯಕ್ಕೆ ಮೆಚ್ಚುಗೆ

i-am-pragnent

ಕಾಮಿಡಿ ಧರ್ಮನ ಹೊಸ ಲುಕ್

atrs-fans

ಸ್ಟಾರ‍್ಸ್‌ ಅಭಿಮಾನಿಗಳಿಗೆ ಓಟಿಟಿ ಭಯ

keeru chitra madi

ಕರಾವಳಿಯ ಆಟಿ ಕಳಂಜ ಜನಪದ ಕಲೆ ಹಿನ್ನೆಲೆಯ “ಮಡಿ’

MUST WATCH

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

ಹೊಸ ಸೇರ್ಪಡೆ

chalane hasn

ವರ್ತುಲ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಚಾಲನೆ

kudi-neeru

ಕುಡಿವ ನೀರಿಗೆ ಆದ್ಯತೆ ನೀಡಿ: ಶಾಸಕ

ಉದ್ಯೋಗ ಖಾತ್ರಿ ಉತ್ತಮ ಅವಕಾಶ

ಉದ್ಯೋಗ ಖಾತ್ರಿ ಉತ್ತಮ ಅವಕಾಶ

lakes addi

ಜಿಲ್ಲೆಯ 43 ಕೆರೆಗಳಿಗೆ ನೀರು ಹರಿಸಲು ಅಡ್ಡಿ

vydyakiya-bill

ವೈದ್ಯಕೀಯ ಬಿಲ್‌ ಪಾವತಿ ಸರ್ಕಾರದ ಕರ್ತವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.