ಹುತಾತ್ಮ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಚಿತ್ರ ಬಿಡುಗಡೆ ಮುಂದಕ್ಕೆ
Team Udayavani, Jan 24, 2022, 11:00 PM IST
2008ರ ಮುಂಬೈ ದಾಳಿಯ ಹುತಾತ್ಮ, ಕನ್ನಡಿಗ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಬಹುಭಾಷಾ ಫೀಚರ್ ಸಿನಿಮಾ “ಮೇಜರ್’ ಬಿಡುಗಡೆ ಮೇಲೂ ಕೊರೊನಾ ಛಾಯೆ ಆವರಿಸಿದೆ.
ತೆಲುಗು ನಟ ಅಡವಿ ಶೇಷ್ ಅಭಿನಯದ ಈ ಚಿತ್ರವು ಫೆಬ್ರವರಿಯಲ್ಲಿ ಬಿಡುಗಡೆ ಆಗುವುದರಲ್ಲಿತ್ತು. ಆದರೆ, ಈಗ ಅದನ್ನು ಮುಂದೂಡಲಾಗಿದ್ದು, ಸದ್ಯದಲ್ಲೇ ಹೊಸ ದಿನಾಂಕ ಪ್ರಕಟಿಸಲಿದ್ದೇವೆ ಎಂದು ಚಿತ್ರತಂಡ ಹೇಳಿದೆ.
ಸಿನಿಮಾದಲ್ಲಿ ಶೋಭಿತಾ ಧುಲಿಪಾಲ, ಸಾಯಿ ಮಂಜ್ರೇಕರ್, ಪ್ರಕಾಶ್‌ರಾಜ್, ರೇವತಿ, ಮುರಳಿ ಶರ್ಮಾ ಮತ್ತಿತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಯಲ್ಲಾಪುರ: ಇದೇನು ಪಾಳುಬಿದ್ದ ಕಟ್ಟಡವೇ? ಯಾರೂ ದಾತಾರರು ಇಲ್ಲವೇ?