
ಸತೀಶ್-ರಮೇಶ್-ಲಖನ್ ಜಗಳಬಂದಿ
Team Udayavani, Nov 3, 2019, 3:10 AM IST

ಬೆಳಗಾವಿ: ಉಪಚುನಾವಣೆ ಹತ್ತಿರ ಬರುತ್ತಿದ್ದಂತೆ ಜಾರಕಿಹೊಳಿ ಸೋದರರ ಮಧ್ಯೆ ಮಾತಿನ ಸಮರ ಮತ್ತೆ ತೀವ್ರತೆ ಪಡೆದಿದೆ. ಗೋಕಾತ್ ತಾಲೂಕು ಪಂಚಾಯತ್, ಅನರ್ಹ ಶಾಸಕ ರಮೇಶ್ ಜಾರಕಿಹೊಳಿಯ ಹಿಡಿತದಲ್ಲಿರುವುದರಿಂದ ಅವರು ತಾಪಂ ಸದಸ್ಯರ ರಾಜೀನಾಮೆ ಕೊಡಿಸಿರಬಹುದು. ಆದರೆ, ಇದರಿಂದ ಗೋಕಾಕ್‌ದಿಂದ ಕಾಂಗ್ರೆಸ್‌ನ್ನು ಖಾಲಿ ಮಾಡಿಸುವುದು ಅಸಾಧ್ಯ ಎಂದು ಶಾಸಕ ಸತೀಶ್ ಜಾರಕಿಹೊಳಿ ನೇರ ಸವಾಲು ಹಾಕಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೋಕಾಕ್ ತಾಪಂ ಸದಸ್ಯರು ರಾಜೀನಾಮೆ ನೀಡಿರುವ ಬಗ್ಗೆ ಅಚ್ಚರಿ ಪಡಬೇಕಾಗಿಲ್ಲ. ಅದು ದಬ್ಟಾಳಿಕೆಯಿಂದ ಆಗಿರುವ ಬೆಳವಣಿಗೆ. ಆದರೆ, ಇದರಿಂದ ಕಾಂಗ್ರೆಸ್ ಪಕ್ಷವನ್ನು ಗೋಕಾಕ್‌ದಿಂದ ಸಂಪೂರ್ಣ ತೆಗೆದುಹಾಕುತ್ತೇವೆಂದು ತಿಳಿದುಕೊಂಡಿದ್ದರೆ, ಅದಕ್ಕಿಂತ ದೊಡ್ಡ ಭ್ರಮೆ ಬೇರೆ ಇಲ್ಲ. ಕಾಂಗ್ರೆಸ್ ಪಕ್ಷವನ್ನು ಅಲ್ಲಿಂದ ಖಾಲಿ ಮಾಡಿಸುವುದು ಸಾಧ್ಯವಾಗದ ಮಾತು ಎಂದು ಕಿಡಿ ಕಾರಿದರು.
ಗೋಕಾಕ್ ನನ್ನ ಹಿಡಿತದಲ್ಲಿದೆ ಎಂದು ರಮೇಶ್ ತಿಳಿದುಕೊಂಡಿದ್ದಾರೆ. ಆದಷ್ಟು ಬೇಗ ಗೋಕಾಕ್‌ನ ಭ್ರಷ್ಟಾಚಾರದ ಕುರಿತು ವಿಡಿಯೋ ಬಿಡುಗಡೆ ಮಾಡಲಾಗುವುದು. ನಾವು ಉಪಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಜಯ ನಮ್ಮದೇ ಎಂದು ಸತೀಶ್ ಆಕ್ರೋಶ ವ್ಯಕ್ತಪಡಿಸಿದರು.
ಮಾವ-ಅಳಿಯನ ಆಟ ಡಿ.5ರವರೆಗೆ: ಲಖನ್
ಗೋಕಾಕ್‌ದಲ್ಲಿ ಲಖನ್ ಜಾರಕಿಹೊಳಿ ಮಾತನಾಡಿ, ಸೋದರ ರಮೇಶ್ ಹಾಗೂ ಅಳಿಯ ಅಂಬಿರಾವ್ ಪಾಟೀಲ ಅವರ ಆಟ ಗೋಕಾಕ್ ಕ್ಷೇತ್ರದಲ್ಲಿ ಡಿ.5ರವರೆಗೆ ಮಾತ್ರ ನಡೆಯಲಿದೆ. ಸ್ಥಳೀಯ ಸಂಸ್ಥೆಗಳಲ್ಲಿರುವ ರಮೇಶ್ ಬೆಂಬಲಿತ ಸದಸ್ಯರು ರಾಜೀ ನಾಮೆ ಕೊಟ್ಟು ಹೋದರೆ ನಮಗೇನೂ ಭಯವಿಲ್ಲ. 22, 42 ಹಾಗೂ 52 ಸದಸ್ಯರು ಹೋದರೆ ಹೋಗಲಿ. ನಮ್ಮ ಜೊತೆ ಕ್ಷೇತ್ರದ 2.40 ಲಕ್ಷ ಮತದಾರರಿದ್ದಾರೆ. ಈ ಬೆಂಬಲದ ಮುಂದೆ ಮಾವ-ಅಳಿಯನ ಆಟ ಏನೂ ನಡೆಯದು ಎಂದರು.
ಸತೀಶ್ ಜಾರಕಿಹೊಳಿಯವರು ಎಲ್ಲ ಪಂಚಾಯತ್‌ಗಳ ಹಗರಣಗಳನ್ನು ಹೊರ ತೆಗೆಯುತ್ತಿದ್ದಾರೆ. ಇದರಿಂದ ಅವರ ಬೆಂಬಲಿಗರಿಗೆ ಅಂಜಿಕೆ ಆರಂಭವಾಗಿದೆ. ಮೇಲಾಗಿ, ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತ್ತೂಬ್ಬ ಅಳಿಯ ಸೋತಿದ್ದಾರೆ. ಇದೆಲ್ಲದರಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ತಮ್ಮ ಬೆಂಬಲಿತ ಸದಸ್ಯರ ರಾಜೀನಾಮೆ ಕೊಡಿಸುವ ನಾಟಕ ಆರಂಭಿಸಿದ್ದಾರೆ.
ಚುನಾವಣೆ ಬಂದಿರುವುದರಿಂದ ಬ್ಲಾಕ್‌ಮೇಲ್ ಮಾಡಿ ರಾಜೀನಾಮೆ ಕೊಡಿಸುತ್ತಿದ್ದಾರೆ. ಮುಂದೆ ಜಿಪಂ ಸದಸ್ಯರ ರಾಜೀನಾಮೆಯನ್ನೂ ಕೊಡಿಸುತ್ತಾರೆ. ಇದರಿಂದ ನಮಗೇನೂ ಸಮಸ್ಯೆ ಇಲ್ಲ ಎಂದರು. “ನಾನು 25 ವರ್ಷಗಳಿಂದ ಇವರ ಜೊತೆ ರಾಜಕಾರಣ ಮಾಡುತ್ತ ಬಂದಿದ್ದೇನೆ. ಇವರ ಆಟವೆಲ್ಲ ಗೊತ್ತು. ಮಾವ-ಅಳಿಯನ ಭ್ರಷ್ಟಾಚಾರ ಹಾಗೂ ಬ್ಲಾಕ್‌ಮೇಲ್ ಬಂದ್ ಮಾಡಲು ನಾನು ಹಾಗೂ ಸತೀಶ್ ಹೋರಾಟ ಆರಂಭ ಮಾಡಿದ್ದೇವೆ. ಇದರಿಂದ ಹಿಂದೆ ಸರಿಯುವುದಿಲ್ಲ’ ಎಂದು ಕಿಡಿ ಕಾರಿದರು.
ಒಮ್ಮೆ ನಾನು ಸಾವಿರಾರು ಕೋಟಿ ರೂ.ಆಸ್ತಿ ಮಾಡಿದ್ದೇನೆ ಎನ್ನುತ್ತಾನೆ ಸತೀಶ್. ಇನ್ನೊಮ್ಮೆ ಸಾಲಗಾರನಾಗಿದ್ದೇನೆ ಎಂದು ಹೇಳುತ್ತಾನೆ. ಇಂತಹ ಆರೋಪಗಳಿಗೆ ಬಹಿರಂಗ ಸಭೆಯಲ್ಲಿ ಉತ್ತರ ಕೊಡುತ್ತೇನೆ.
-ರಮೇಶ್ ಜಾರಕಿಹೊಳಿ, ಅನರ್ಹ ಶಾಸಕ
ಎಲ್ಲ ಅನರ್ಹ ಶಾಸಕರಿಗೂ ಬಿಜೆಪಿ ಟಿಕೆಟ್ ಖಚಿತ
ಬೆಳಗಾವಿ: ಮುಂದಿನ ತಿಂಗಳು ನಡೆಯುವ ಉಪಚುನಾವಣೆಯಲ್ಲಿ ಎಲ್ಲ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಸಿಗುವುದು ಖಚಿತ. ಈ ವಿಷಯದಲ್ಲಿ ಸಿಎಂ ಯಡಿಯೂರಪ್ಪ ಅವರ ಮೇಲೆ ನಮಗೆ ಸಂಪೂರ್ಣ ವಿಶ್ವಾಸ ಇದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಉಪಚುನಾವಣೆ ಹಿನ್ನೆಲೆ ಯಲ್ಲಿ ಅಥಣಿಯಲ್ಲಿ ಶನಿವಾರ ತಮ್ಮ ಆಪ್ತ ಅನರ್ಹ ಶಾಸಕ ಮಹೇಶ ಕುಮಟಳ್ಳಿ ಹಾಗೂ ಬೆಂಬಲಿಗರ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ನಾವು ಬಿಜೆಪಿ ಸರ್ಕಾರ ರಚನೆಯಾಗಬೇಕು ಎಂಬ ಉದ್ದೇಶದಿಂದ ರಾಜೀನಾಮೆ ನೀಡಿರಲಿಲ್ಲ. ಮೈತ್ರಿ ಸರ್ಕಾರದ ನಿಲುವು ಹಾಗೂ ನಿರ್ಧಾರ ಸರಿಯಾಗಿರಲಿಲ್ಲ. ಇದೇ ಕಾರಣದಿಂದ ಬೇಸತ್ತು ಹೊರ ಬಂದಿದ್ದೇವೆ ಎಂದರು.
ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಚುನಾವಣಾ ಸಿದ್ಧತಾ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಅನರ್ಹ ಶಾಸಕರ ಪರ ಮಾತನಾಡಿದ್ದಾರೆ. ನಮಗೆ ಟಿಕೆಟ್ ನೀಡಬೇಕು ಎಂದು ಬಲವಾಗಿ ಹೇಳಿದ್ದಾರೆ. ಅವರ ಮಾತಿನ ಮೇಲೆ ನಮಗೆ ನಂಬಿಕೆ ಇದೆ. ಹೀಗಾಗಿ, ಎಲ್ಲ ಅನರ್ಹ ಶಾಸಕರೂ ಟಿಕೆಟ್ ಪಡೆಯಲಿದ್ದಾರೆ ಎಂದರು.
ಅನರ್ಹ ಶಾಸಕರಿಗೂ, ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎನ್ನುವ ಡಿಸಿಎಂ ಲಕ್ಷ್ಮಣ ಸವದಿಯವರು ಬಹಳ ದೊಡ್ಡ ಮನುಷ್ಯ. ಅವರಿಗೂ, ನಮಗೂ ಯಾವುದೇ ಸಂಬಂಧ ಇಲ್ಲ. ಅಥಣಿ ಕ್ಷೇತ್ರದಿಂದಲೇ ಎಲ್ಲ ನಡೆದು ಹೋಗಿದೆ. ಇಲ್ಲಿ ಮಹೇಶ ಕುಮಟಳ್ಳಿ ಅವರನ್ನು ಮತ್ತೆ ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ರಾಜಕಾರಣ ಎಂಬುದು ಒಂದು ಉದ್ದಿಮೆ ಇದ್ದಂತೆ. ಇಲ್ಲಿ ಬದಲಾವಣೆ ಸಹಜ. ಅದೇ ರೀತಿ ರಾಜಕಾರಣದಲ್ಲೂ ಆಗಾಗ ಬದಲಾವಣೆಗಳು ಆಗುತ್ತವೆ ಎಂದು ಬಿಜೆಪಿ ಸೇರುವ ಸುಳಿವು ನೀಡಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಚಿತ ಗಿಫ್ಟ್ ಗಳ ಮೇಲೆ ಚುನಾವಣಾ ಆಯೋಗದ ಕಣ್ಣು

ಜೆಡಿಎಸ್ ದ್ವಿತೀಯ ಪಟ್ಟಿ ಬಿಡುಗಡೆಗೆ ಸಿದ್ಧತೆ: ಫೆ. 8ರ ಆಸುಪಾಸು ಬಹಿರಂಗ ಸಾಧ್ಯತೆ

ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ತಾಲೂಕು ಮಟ್ಟದಲ್ಲೇ ಪ್ರಶ್ನೆ ಪತ್ರಿಕೆ

130 ಕ್ಷೇತ್ರಗಳಿಗೆ ಒಂದೇ ಹೆಸರು? ಕಾಂಗ್ರೆಸ್ ಪಟ್ಟಿ ಸಿದ್ಧಪಡಿಸಲು ಇಂದು ಮಹತ್ವದ ಸಭೆ

ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ತಾಲೂಕು ಮಟ್ಟದಲ್ಲೇ ಪ್ರಶ್ನೆ ಪತ್ರಿಕೆ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಪ್ರತಿಭಾವಂತ ಕ್ರಿಕೆಟ್ ಪಟುಗಳ ತವರು ಕರ್ನಾಟಕ: ಕೆ.ವೈ.ವೆಂಕಟೇಶ್

ಎರಡು ಅದ್ಭುತ ಕ್ಯಾಚ್ ಗಳಿಂದ ಬೆರಗು ಮೂಡಿಸಿದ ಸೂರ್ಯಕುಮಾರ್; ವಿಡಿಯೋ ನೋಡಿ

ಲೋಕಸಭೆ ಕಲಾಪದಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪದ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು

ಮಂಗಳೂರು: ಪಾಲಿಕೆ ಆಯುಕ್ತ ವರ್ಗಾವಣೆ; ನೂತನ ಆಯುಕ್ತರಾಗಿ ಚನ್ನಬಸಪ್ಪ ಕೆ. ನೇಮಕ

ಮುದ್ದೇಬಿಹಾಳ: ಕಾಲುವೆಗೆ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಜಲ ಸಮಾಧಿ