ಪಾಕಿಸ್ಥಾನದಲ್ಲಿದ್ದ ಭಾರತೀಯರು ಕೊನೆಗೂ ತವರಿಗೆ

Team Udayavani, Jun 27, 2020, 10:29 AM IST

ಪಾಕಿಸ್ಥಾನದಲ್ಲಿದ್ದ ಭಾರತೀಯರು ಕೊನೆಗೂ ತವರಿಗೆ

ಲಾಹೋರ್‌: ಲಾಕ್‌ಡೌನ್‌ನಿಂದಾಗಿ ಪಾಕಿಸ್ಥಾನದಲ್ಲಿ ಬಾಕಿಯಾಗಿದ್ದ ಭಾರತೀಯರು ಕೊನೆಗೂ ತವರಿಗೆ ಮರಳಿದ್ದಾರೆ. ಸುಮಾರು 250 ಮಂದಿ ಪಾಕಿಸ್ಥಾನದಲ್ಲಿದ್ದು, ಅವರು ವಾಘಾ ಗಡಿ ಮೂಲಕ ಭಾರತಕ್ಕೆ ಬಂದರು.

ಗುರುವಾರ 248 ಮಂದಿಯನ್ನು ಕರೆತರಲಾಗಿತ್ತು. ಶನಿವಾರ 250 ಮಂದಿ ಬರಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯರನ್ನು ಕಳುಹಿಸಿಕೊಡಲು ಪಾಕಿಸ್ಥಾನ ಜೂ.25ರಿಂದ 27ರವರೆಗೆ ವಾಘಾ ಗಡಿಯನ್ನು ತೆರೆದಿದೆ. ಪಾಕಿಸ್ಥಾನದಲ್ಲಿ ಬಾಕಿಯಾದ ಭಾರತೀಯರಲ್ಲಿ ಹೆಚ್ಚಿನವರು ಆ ದೇಶದಲ್ಲಿರುವ ಸಂಬಂಧಿಗಳನ್ನು ಭೇಟಿಯಾಗಲು ಬಂದವರಾಗಿದ್ದರು.

ಅತಿ ಕಡಿಮೆ ಏರಿಕೆ
ಏತನ್ಮಧ್ಯೆ ಪಾಕಿಸ್ಥಾನದಲ್ಲಿ ಶುಕ್ರವಾರ ಅತಿ ಕಡಿಮೆ ಸಂಖ್ಯೆಯಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆ ಕಂಡಿವೆ. 2775 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1.95 ಲಕ್ಷದ ಗಡಿ ದಾಟಿದೆ. ಈ ಮೊದಲು ಜೂ.13ರಂದು ಅತ್ಯಧಿಕ 6825 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗಿನ ಸರ್ವಾಧಿಕವಾಗಿತ್ತು. ಮೇ 29ರಂದು 2429 ಪ್ರಕರಣಗಳು ಕಂಡುಬಂದಿದ್ದು, ಈವರೆಗಿನ ಅತಿ ಕಡಿಮೆ ಸಂಖ್ಯೆಯ ಪ್ರಕರಣಗಳಾಗಿತ್ತು. ಪಾಕ್‌ ಆರೋಗ್ಯ ಇಲಾಖೆ ಪ್ರಕಾರ, ಈ ಹಿಂದಿನ 24 ತಾಸುಗಳಲ್ಲಿ 3962 ಮಂದಿ ಕೋವಿಡ್‌ನಿಂದಾಗಿ ಸಾವಿಗೀಡಾಗಿದ್ದಾರೆ. 84168 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸಿಂಧ್‌ ಪ್ರಾಂತ್ಯದಲ್ಲಿ ಅತ್ಯಧಿಕ ಸೋಂಕು ಪತ್ತೆಯಾಗಿದ್ದು 75168 ಮಂದಿಗೆ ರೋಗ ತಗುಲಿದೆ. ಪಂಜಾಬ್‌ನಲ್ಲಿ 71987, ಖೈಬರ್‌ ಪಂಖು¤ಂಖ್ವಾದಲ್ಲಿ 24303, ಇಸ್ಲಾಮಾಬಾದ್‌ನಲ್ಲಿ 11981, ಬಲೂಚಿಸ್ಥಾನದಲ್ಲಿ 9946, ಗಿಲಿYಟ್‌ ಬಾಲ್ಟಿಸ್ಥಾನದಲ್ಲಿ 1398, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 962 ಪ್ರಕರಣಗಳು ಕಂಡುಬಂದಿವೆ. ಈವರೆಗೆ ಒಟ್ಟು 11 ಲಕ್ಷಕ್ಕೂ ಹೆಚ್ಚು ಮಂದಿಯ ಪರೀಕ್ಷೆ ನಡೆಸಲಾಗಿದೆ. ಕಳೆದ 24 ತಾಸಿನಲ್ಲಿ 21041 ಪರೀಕ್ಷೆ ನಡೆಸಲಾಗಿದೆ. ಕೋವಿಡ್‌ ನಿಭಾವಣೆ ವಿಚಾರದಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌ ಸರಕಾರವನ್ನು ಸಂಸತ್ತಿನಲ್ಲಿ ಸಮರ್ಥಿಸಿಕೊಂಡಿದ್ದು, ಯಾವುದೇ ಗೊಂದಲವಿಲ್ಲದೆ ಕೋವಿಡ್‌ ನಿಯಂತ್ರಣಕ್ಕೆ ನಿಯಮಾವಳಿ ರೂಪಿಸಿ ಹೋರಾಡುತ್ತಿರುವ ವಿಶ್ವದ ಏಕೈಕ ಸರಕಾರ ನಮ್ಮದು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ISREL

Iran ವಿರುದ್ಧ ಪ್ರತೀಕಾರ ಬೇಡ: ಇಸ್ರೇಲ್‌ ಮೇಲೆ ಹಲವು ರಾಷ್ಟ್ರಗಳ ಒತ್ತಡ

Flash Floods: ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ: 33 ಮಂದಿ ಮೃತ್ಯು, 600 ಮನೆಗಳಿಗೆ ಹಾನಿ

Flash Floods: ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ: 33 ಮಂದಿ ಮೃತ್ಯು, 600 ಮನೆಗಳಿಗೆ ಹಾನಿ

1eewqew

Sydney attack: ತನ್ನ ಪ್ರಾಣವೇ ಹೋಗುತ್ತಿದ್ದರೂ ಪುತ್ರಿ ರಕ್ಷಣೆಗೆ ಮಹಿಳೆ ಕೋರಿಕೆ!

1qeqweqwe

Canada; ಅಮೆರಿಕ ಮಾದರಿಯಲ್ಲಿ ಭಾರತೀಯ ವಿದ್ಯಾರ್ಥಿಯ ಹತ್ಯೆ

police USA

US ಷಿಕಾಗೋದಲ್ಲಿ ಶೂಟೌಟ್‌: 7 ವರ್ಷದ ಬಾಲಕಿ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.