ಶುದ್ಧಗಂಗಾ ಘಟಕಗಳಿಗೆ ಸೆಲ್ಕೊ ಸೋಲಾರ್‌ ಇನ್ವರ್ಟರ್‌

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ಧ ಕುಡಿಯುವ ನೀರು

Team Udayavani, Sep 28, 2021, 7:16 AM IST

ಶುದ್ಧಗಂಗಾ ಘಟಕಗಳಿಗೆ ಸೆಲ್ಕೊ ಸೋಲಾರ್‌ ಇನ್ವರ್ಟರ್‌

ಬೆಳ್ತಂಗಡಿ: ಹಿಂದೆ ಹಳ್ಳಿಗಳಲ್ಲಿ ಸೌರಶಕ್ತಿ ಬಳಕೆಯ ಕುರಿತು ಜಾಗೃತಿ ಇರಲಿಲ್ಲ, ಆದರೆ ಇಂದು ವಿದ್ಯುತ್‌ಗೆ ಪರ್ಯಾಯವಾಗಿ ಸೌರಶಕ್ತಿ ಬಳಕೆಯಡೆಗೆ ಮಹತ್ವದ ತಿರುವು ಸಿಕ್ಕಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯಾದ್ಯಂತ ಸ್ಥಾಪಿಸಿರುವ “ಶುದ್ಧಗಂಗಾ’ ಯೋಜನೆಯನ್ನು ಗಮನಿಸಿ ಸೆಲ್ಕೋ ಫೌಂಡೇಶನ್‌ ಆಯ್ದ 40 ಘಟಕಗಳಿಗೆ ಉಚಿತ ಸೋಲಾರ್‌ ಇನ್ವರ್ಟರ್‌ಗಳನ್ನು ಅಳವಡಿಸಲು ಇಚ್ಛಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

ಎಸ್‌ಕೆಡಿಆರ್‌ಡಿಪಿ ಆಶ್ರಯದಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕಗಳಿಗೆ ಉಚಿತ ಸೋಲಾರ್‌ ಇನ್ವರ್ಟರ್‌ ಅಳವಡಿಸುವ ಕುರಿತು ಸೋಮವಾರ ಧರ್ಮಸ್ಥಳದಲ್ಲಿ ನಡೆದ ವಾರ್ಷಿಕ ನಿರ್ವಹಣಾ ಒಪ್ಪಂದ ಪತ್ರವನ್ನು ಸೆಲ್ಕೋ ಜತೆಗೆ ವಿನಿಮಯಗೊಳಿಸಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಕಡುಬಡವರಿಗೂ ಅತೀ ಕಡಿಮೆ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿರುವ ಯೋಜನೆ ಇದಾಗಿದೆ. ಪ್ರತೀ ಘಟಕಕ್ಕೆ 6 ಲಕ್ಷದಂತೆ 40 ಘಟಕಗಳಿಗೆ 2.40 ಕೋಟಿ ರೂ. ವೆಚ್ಚ ತಗಲಲಿದೆ. ಈ ವೆಚ್ಚವನ್ನು ಪೂರ್ತಿಯಾಗಿ ಸೆಲ್ಕೋ ಫೌಂಡೇಶನ್‌ ಭರಿಸಲಿದೆ ಹಾಗೂ ಮುಂದಿನ ಒಂದು ವರ್ಷದವರೆಗೆ ನಿರ್ವಹಣೆಯನ್ನು ಉಚಿತ ವಾಗಿ ಮಾಡಲಿದೆ ಎಂದು ಹೇಳಿದರು.

ಇದನ್ನೂ ಓದಿ:ಎರಡು ಗುಂಪುಗಳ ಗಲಾಟೆಯಲ್ಲಿ ʼಬಸವʼ ಬಡವಾಯ್ತು

ಸೋಲಾರ್‌ ಯುಗದ ಕ್ರಾಂತಿ
ಸೆಲ್ಕೋ ಫೌಂಡೇಶನ್‌ ಸಿಇಒ ಡಾ| ಹರೀಶ್‌ ಹಂದೆ ಮಾತನಾಡಿ, ಭವಿಷ್ಯದಲ್ಲಿ ಸೋಲಾರ್‌ ಈ ದೇಶದ ಚಿತ್ರಣವನ್ನು ಬದಲಿಸಲಿದೆ. 2030ರ ಅವಧಿಗೆ ಸೋಲಾರ್‌ ಯುಗದ ಕ್ರಾಂತಿಯಾಗಲಿದೆ. ಸೆಲ್ಕೊ ಭವಿಷ್ಯದಲ್ಲಿ ಜೀವನಾಧರಿತ ಸಾಧನಗಳ ಅನ್ವೇಷಣೆಗೆ ಮುಂದಾಗಿದೆ ಎಂದರು.

321 ಶುದ್ಧಗಂಗಾ ಘಟಕ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಮಾತನಾಡಿ, ಡಾ| ಹೆಗ್ಗಡೆ ಅವರ ಅಪೇಕ್ಷೆಯಂತೆ ಬಡವರಿಗೂ ಅತ್ಯಂತ ಕಡಿಮೆ ದರದಲ್ಲಿ ಶುದ್ಧನೀರು ತಲುಪಬೇಕೆನ್ನುವ ನಿಟ್ಟಿನಲ್ಲಿ 2009ರಿಂದ ಆರಂಭಿಸಿ ಇಂದು ರಾಜ್ಯದಾದ್ಯಂತ 321 ಶುದ್ಧಗಂಗಾ ಶುದ್ಧ ಕುಡಿಯುವ ನೀರಿನ ಘಟಕ ಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ 81,000 ಜನ ಪ್ರತೀ ನಿತ್ಯ 16,20,000 ಲೀಟರ್‌ ಶುದ್ಧನೀರನ್ನು ಪಡೆಯು ತ್ತಿದ್ದಾರೆ ಎಂದರು. ಸೋಲಾರ್‌ ಅಳವಡಿಕೆಯಿಂದ ವಾರ್ಷಿಕ ಸುಮಾರು 21 ಲಕ್ಷ ರೂ. ಮೊತ್ತ ಉಳಿತಾಯವಾಗಲಿದೆ ಎಂದರು.

ಯೋಜನೆಯ ಸಿಇಒ ಅನಿಲ್‌ ಕುಮಾರ್‌ ಎಸ್‌.ಎಸ್‌., ಸೆಲ್ಕೋ ಸೋಲಾರ್‌ನ ಸಿಇಒ ಮೋಹನ ಭಾಸ್ಕರ ಹೆಗಡೆ, ಪ್ರಧಾನ ವ್ಯವಸ್ಥಾಪಕ ಜಗದೀಶ್‌ ಪೈ, ಯೋಜನೆಯ ಪ್ರಾದೇಶಿಕ ಹಣಕಾಸು ನಿರ್ದೇಶಕ ಶಾಂತಾರಾಮ ಪೈ, ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಸೆಲ್ಕೋ ಸೋಲಾರ್‌ನ ಗುರುಪ್ರಕಾಶ್‌ ಶೆಟ್ಟಿ, ಸಸ್ಟೈನ್‌ ಪ್ಲಸ್‌ನ ಸುಪ್ರಿಯಾ ಗೌಡ, ಶುದ್ಧಗಂಗಾ ವಿಭಾಗದ ನಿರ್ದೇಶಕರಾದ ಲಕ್ಷ್ಮಣ್‌ ಎಂ., ಯೋಜನಾಧಿಕಾರಿ ಯುವರಾಜ್‌ ಜೈನ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.