ಫುಟ್ ಬಾಲ್ಗೆ ಸರ್ಗಿಯೊ ಎಗ್ವೆರೊ ವಿದಾಯ
Team Udayavani, Dec 15, 2021, 11:15 PM IST
ಬಾರ್ಸಿಲೋನಾ: ನಿರೀಕ್ಷೆಯಂತೆ ಆರೋಗ್ಯ ಸಮಸ್ಯೆಯಿಂದಾಗಿ ಆರ್ಜೆಂಟೀನಾ ಹಾಗೂ ಬಾರ್ಸಿಲೋನಾದ ಖ್ಯಾತ ಸ್ಟ್ರೈಕರ್ ಸರ್ಗಿಯೊ ಎಗ್ವೆರೊ ಫುಟ್ ಬಾಲ್ಗೆ ಭಾವುಕ ವಿದಾಯ ಹೇಳಿದರು.
33 ವರ್ಷದ ಎಗ್ವೆರೊ ಅ. 30ರ ಸ್ಪ್ಯಾನಿಶ್ ಲೀಗ್ ಪಂದ್ಯದ ವೇಳೆ ಹೃದಯ ಬೇನೆಯಿಂದ ಎದೆ ಹಿಡಿದುಕೊಂಡೇ ಅಂಗಳ ತ್ಯಜಿಸಿದ್ದರು. ಆಸ್ಪತ್ರೆಗೆ ದಾಖಲಾಗಿ ಹೃದಯ ತಪಾಸಣೆ ಮಾಡಿಕೊಂಡಾಗ ಪರಿಸ್ಥಿತಿ ತುಸು ಗಂಭೀರವಾಗಿರುವುದು ಅರಿವಿಗೆ ಬಂದಿತ್ತು. ಇದಕ್ಕೆ ಕಾಲಕಾಲಕ್ಕೆ ತಪಾಸಣೆ ಹಾಗೂ ಸುದೀರ್ಘ ವಿಶ್ರಾಂತಿ ಸೂಚಿಸಲಾಗಿತ್ತು. ಮತ್ತೆಂದೂ ಫುಟ್ ಬಾಲ್ ಆಡಲು ಸಾಧ್ಯವಾಗದು ಎಂದು 10 ದಿನಗಳ ಹಿಂದೆಯೇ ತಿಳಿಸಿದ್ದರು. ಬುಧವಾರ ಕಣ್ಣೀರು ಸುರಿಸುತ್ತಲೇ ಫುಟ್ ಬಾಲ್ ವಿದಾಯ ಘೋಷಿಸಿದರು.
ಇದನ್ನೂ ಓದಿ:ಎನ್ಕೌಂಟರ್: ಎ+ ಕೆಟಗರಿಯ ಹಿಜ್ಬುಲ್ ಉಗ್ರನ ಹತ್ಯೆ
ಮ್ಯಾಂಚೆಸ್ಟರ್ ಸಿಟಿ ಪರ ದಾಖಲೆಯ 260 ಗೋಲು ಹೊಡೆದದ್ದು ಎಗ್ವೆರೊ ಸಾಧನೆ. 184 ಪ್ರೀಮಿಯರ್ ಲೀಗ್ ಗೋಲುಗಳಲ್ಲಿ 12 ಹ್ಯಾಟ್ರಿಕ್ ಸಾಧಿಸಿದ ಹೆಗ್ಗಳಿಕೆ ಇವರದಾಗಿದೆ. ಆರಂಭದಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ ತಂಡವನ್ನು ಪ್ರತಿನಿಧಿಸಿದ್ದರು.
ಆರ್ಜೆಂಟೀನಾ ಪರ 97 ಪಂದ್ಯಗಳಿಂದ 41 ಗೋಲು ಹೊಡೆದ ಹೆಗ್ಗಳಿಕೆ ಎಗ್ವೆರೊ ಅವರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ