ಸರ್ವಿಸ್‌ ಜೀಪ್‌ -ರಿಕ್ಷಾಗಳಿಗೆ ಬಾಡಿಗೆ ಆಗುತ್ತಿಲ್ಲ

ಲಾಕ್‌ಡೌನ್‌ ಸಡಿಲಗೊಂಡಿದ್ದರೂ ಜನ ಓಡಾಡುತ್ತಿಲ್ಲ

Team Udayavani, May 29, 2020, 5:26 AM IST

ಸರ್ವಿಸ್‌ ಜೀಪ್‌ -ರಿಕ್ಷಾಗಳಿಗೆ ಬಾಡಿಗೆ ಆಗುತ್ತಿಲ್ಲ

ಮುಂಡಾಜೆ: ಲಾಕ್‌ಡೌನ್‌ ತನಕ ಪ್ರತಿದಿನ ಹಲವು ಟ್ರಿಪ್‌ ಗಳನ್ನು ನಡೆಸುತ್ತಿದ್ದ ಸರ್ವಿಸ್‌ ರಿಕ್ಷಾ ಹಾಗೂ ಜೀಪುಗಳಿಗೆ ಈಗ ಒಂದೆರಡು ಟ್ರಿಪ್‌ ನಡೆಸಲೂ ಜನ ಸಿಗುತ್ತಿಲ್ಲ.

ಬೆಳ್ತಂಗಡಿ ತಾಲೂಕಿನ ದಿಡುಪೆ, ಕಕ್ಕಿಂಜೆ, ಮುಂಡಾಜೆ, ಚಾರ್ಮಾಡಿ, ನಿಡಿಗಲ್‌, ನೆರಿಯ, ಕಡಿರುದ್ಯಾವರ, ಮಿತ್ತಬಾಗಿಲು, ಗುರಿಪ್ಪಳ್ಳ ಮೊದಲಾದ ಕಡೆಯವರಿಗೆ ಪ್ರಮುಖ ವ್ಯಾಪಾರ, ವ್ಯವಹಾರ ಕೇಂದ್ರ ಉಜಿರೆ. ಚಾರ್ಮಾಡಿ, ಕಕ್ಕಿಂಜೆ, ನೆರಿಯ ಹಾಗೂ ದಿಡುಪೆ ಕಡೆಯಿಂದ ಉಜಿರೆಗೆ ಸುಮಾರು ಹತ್ತಕ್ಕಿಂತ ಹೆಚ್ಚಿನ ಸರ್ವಿಸ್‌ ಜೀಪುಗಳು ಲಾಕ್‌ಡೌನ್‌ಗೆ ಮೊದಲು ಕನಿಷ್ಠ 4ರಿಂದ 5 ಟ್ರಿಪ್‌ ಗಳನ್ನು ಮಾಡು ತ್ತಿದ್ದವು. ಈ ಪ್ರದೇಶಗಳಲ್ಲಿ ಅಂದು ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವಿದ್ದರೂ, ಜೀಪ್‌ನವರಿಗೂ ಪ್ರಯಾಣಿಕರು ಸಿಗುತ್ತಿದ್ದರು.

ಜನ ಸಂಚಾರವಿಲ್ಲ
ಲಾಕ್‌ಡೌನ್‌ ಸಡಿಲಗೊಂಡಿ ದ್ದರೂ ಜನರ ಓಡಾಟವಿಲ್ಲದ ಕಾರಣ ಸರ್ವಿಸ್‌ ಜೀಪುಗಳು ದಿನಕ್ಕೆ ಒಂದು ಟ್ರಿಪ್‌ ನಡೆಸಲು ಕಷ್ಟವಾಗುತ್ತಿದೆ. 10 ಜೀಪುಗಳು ಇದ್ದಲ್ಲಿ ಈಗ ಸ್ಟಾಂಡ್‌ಗೆ ಬರುವ ಒಂದೆರಡು ಜೀಪುಗಳಿಗೂ ಜನ ಸಿಗುತ್ತಿಲ್ಲ. ಗರಿಷ್ಠ 5 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದರೂ ಜನ ಬರು ವುದಿಲ್ಲ. ಈ ಪ್ರದೇಶಗಳಲ್ಲಿ ಅಪರಾಹ್ನ 2 ಗಂಟೆ ಬಳಿಕ ಪೇಟೆಗಳತ್ತ ಜನರು ಸುಳಿಯುತ್ತಿಲ್ಲ. ಸೋಮಂತಡ್ಕದಿಂದ ಉಜಿರೆಗೆ ಸರ್ವಿಸ್‌ ಮಾಡುವ 20ಕ್ಕಿಂತ ಅಧಿಕ ಆಪೆ ರಿಕ್ಷಾ ಗಳು ಲಾಕ್‌ಡೌನ್‌ಗೆ ಮೊದಲು ಪ್ರತಿದಿನ 5ರಿಂದ 6 ಟ್ರಿಪ್‌ ಗಳನ್ನು ನಿರ್ವಹಿಸುತ್ತಿದ್ದವು. ಲಾಕ್‌ಡೌನ್‌ ಸಡಿಲ ಗೊಂಡ ಮೇಲೆ ರಿಕ್ಷಾ ನಿಲ್ದಾಣಕ್ಕೆ ದಿನಕ್ಕೆ ನಾಲ್ಕೈದು ರಿಕ್ಷಾ ಗಳು ಮಾತ್ರ ಬರುತ್ತಿದ್ದರೂ, ಒಂದೆರಡು ಟ್ರಿಪ್‌ನಿರ್ವಹಿಸಲು ಕೂಡ ಜನ ಸಿಗುತ್ತಿಲ್ಲ.

ಲಾಕ್‌ಡೌನ್‌ಗೆ ಮೊದಲು 6 ಪ್ರಯಾಣಿಕರನ್ನು ರಿಕ್ಷಾದಲ್ಲಿ ಕೊಂಡೊ ಯ್ಯುತ್ತಿದ್ದರೆ, ಈಗ ಟ್ರಿಪ್‌ ದರ ಒಂದಷ್ಟು ಹೆಚ್ಚಿಸಿ 3 ಪ್ರಯಾಣಿಕರನ್ನು ಕೊಂಡೊ ಯ್ಯುತ್ತಿದ್ದರೂ ಟ್ರಿಪ್‌ ಹೆಚ್ಚಿಸಲು ಜನ ಸಿಗುತ್ತಿಲ್ಲ. ಇದೇ ಪರಿಸ್ಥಿತಿ ಗುರಿಪ್ಪಳ್ಳ, ಉಜಿರೆ ಟ್ರಿಪ್‌ನ ರಿಕ್ಷಾ ಗಳಿಗೂ ಉಂಟಾ ಗಿದೆ. ಕೆಎಸ್‌ಆರ್‌ಟಿಸಿ ಧರ್ಮಸ್ಥಳ ಡಿಪೋದಿಂದ ಲಾಕ್‌ಡೌನ್‌ ಬಳಿಕ ಬೆಳ್ತಂಗಡಿಯಿಂದ ಚಾರ್ಮಾಡಿಗೆ ಬಸ್‌ ಟ್ರಿಪ್‌ ಆರಂಭಿಸಲಾಗಿತ್ತು. ಪ್ರಯಾಣಿಕರ ಕೊರತೆಯಿಂದ 2 ದಿನಗಳಲ್ಲಿ ಈ ಮಾರ್ಗದ ಬಸ್‌ ಸಂಚಾರವನ್ನು ನಿಲ್ಲಿಸ ಲಾಗಿದೆ. ಇನ್ನು ದಿಡುಪೆ, ನೆರಿಯ ಕಡೆಯ ಬಸ್‌ ಸಂಚಾರ ಆರಂಭವೇ ಆಗಿಲ್ಲ.

ಜೀವನ ನಿರ್ವಹಣೆ ಕಷ್ಟ
ಲಾಕ್‌ಡೌನ್‌ಗೆ ಮೊದಲು ದಿನವೊಂದಕ್ಕೆ ನಮ್ಮ ಸ್ಟಾಂಡ್‌ನ‌ ರಿಕ್ಷಾ ಚಾಲಕರಿಗೆ ಪ್ರತಿದಿನ 700ರಿಂದ 800 ರೂ. ತನಕ ಆದಾಯ ಬರುತ್ತಿತ್ತು. ಈಗ 300ರೂ.ಆದಾಯ ಬರುವುದೇ ಕಷ್ಟ. ಇದು ಜೀವನ ನಿರ್ವಹಣೆ ಸಾಕಾಗುತ್ತಿಲ್ಲ.
 -ಬದ್ರುದ್ದೀನ್‌, ಅಧ್ಯಕ್ಷ, ಸೋಮಂತಡ್ಕ-ಉಜಿರೆ ರಿಕ್ಷಾಚಾಲಕ ಮಾಲಕರ ಸಂಘ,ಮುಂಡಾಜೆ

ಎರಡು ಟ್ರಿಪ್‌ ಕೂಡ ಕಷ್ಟ
ದಿಡುಪೆ ಕಡೆಯಿಂದ ಸುಮಾರು ಹತ್ತು ಜೀಪುಗಳು ಪ್ರತಿದಿನ 4ರಿಂದ 5 ಟ್ರಿಪ್‌ ಮಾಡುತ್ತಿದ್ದವು. ಈಗ ಜನರು ತಿರುಗಾಟ ಕಡಿಮೆ ಮಾಡಿರುವ ಕಾರಣ ಎರಡು ಟ್ರಿಪ್‌ ಮಾಡಲು ಕೂಡ ಆಗುತ್ತಿಲ್ಲ.
 -ನಾರಾಯಣ, ಸರ್ವಿಸ್‌ ಜೀಪು ಚಾಲಕ, ಮಾಲಕ, ಕಡಿರುದ್ಯಾವರ

ಟಾಪ್ ನ್ಯೂಸ್

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.