ರಾಜಸ್ಥಾನ್ ರಾಯಲ್ಸ್ ಸಾರ್ವಕಾಲಿಕ ಐಪಿಎಲ್ ತಂಡಕ್ಕೆ ಶೇನ್ ವಾರ್ನ್ ನಾಯಕ
Team Udayavani, Jun 14, 2020, 6:00 AM IST
ಜೈಪುರ: ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವಿಶಿಷ್ಟ ಸ್ಥಾನವಿದೆ. ಅದು ಪ್ರಪ್ರಥಮ ಐಪಿಎಲ್ ಪ್ರಶಸ್ತಿ ಎತ್ತಿದ ತಂಡ (2008). ಅಂದಿನ ಸಾರಥಿ ಶೇನ್ ವಾರ್ನ್. ಫೈನಲ್ನಲ್ಲಿ ಅದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 3 ವಿಕೆಟ್ಗಳಿಂದ ಮಣಿಸಿ ಕಿರೀಟ ಏರಿಸಿಕೊಂಡಿತ್ತು.
ಇದೀಗ ಈ ಫ್ರಾಂಚೈಸಿಯ ಸಾರ್ವಕಾಲಿಕ ಶ್ರೇಷ್ಠ ತಂಡವೊಂದು ಪ್ರಕಟಗೊಂಡಿದ್ದು, ಇದಕ್ಕೂ ಶೇನ್ ವಾರ್ನ್ ಅವರೇ ನಾಯಕರಾಗಿದ್ದಾರೆ. ಅಂದಿನ ಯುವ ಆಟಗಾರರನ್ನು ಹುರಿದುಂಬಿಸಿ, ಅವರಲ್ಲಿ ಸ್ಫೂರ್ತಿ ತುಂಬಿ, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ವಾರ್ನ್ ವಹಿಸಿದ ಪಾತ್ರ ಅಮೋಘ ಎಂದು ಬಣ್ಣಿಸಲಾಗಿದೆ.
ಅನಂತರ ತಂಡದ ನಾಯಕರಾದ ಅಜಿಂಕ್ಯ ರಹಾನೆ, ರಾಹುಲ್ ದ್ರಾವಿಡ್, ಶೇನ್ ವಾಟ್ಸನ್, ಜಾಸ್ ಬಟ್ಲರ್ ಮೊದಲಾದ ಸ್ಟಾರ್ ಆಟಗಾರರನ್ನು ಈ ತಂಡ ಹೊಂದಿದೆ.
ರಾಜಸ್ಥಾನ್ ರಾಯಲ್ಸ್ ಆಲ್ಟೈಮ್ ಇಲೆವೆನ್
ಅಜಿಂಕ್ಯ ರಹಾನೆ, ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್, ರಾಹುಲ್ ದ್ರಾವಿಡ್, ಶೇನ್ ವಾಟ್ಸನ್, ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಸೊಹೈಲ್ ತನ್ವೀರ್, ಶೇನ್ ವಾರ್ನ್ (ನಾಯಕ), ಸಿದ್ಧಾರ್ಥ್ ತ್ರಿವೇದಿ, ಮುನಾಫ್ ಪಟೇಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ