ತಾಯಿ ಹುಡುಕಲು ಜರ್ಮನಿಯಿಂದ ಬಂದಳು!

Team Udayavani, Jul 22, 2019, 3:07 AM IST

ರಾಯಚೂರು: ದತ್ತು ನೀಡಿದ್ದ ಮಗಳನ್ನು ಹೆತ್ತ ತಾಯಿಯ ಮಮತೆ ಮತ್ತೆ ಬರ ಸೆಳೆದಿದೆ. ಎರಡು ದಶಕಗಳ ಬಳಿಕ ಮಗಳು ಜರ್ಮನಿಯ ಡೈಬರ್ಗಬನ್‌ ಸಿಟಿಯಿಂದ ತಾಯಿಗಾಗಿ ಹುಡುಕಿಕೊಂಡು ಬಂದಿದ್ದಾಳೆ.

ಜರ್ಮನಿಯಲ್ಲಿದ್ದ ಡಾ| ಮರಿಯಾ ಛಾಯಾಶ್ಚುಪ್‌ಗೆ ತಾನು ಬೆಳೆಯುತ್ತಿರುವುದು ದತ್ತು ಪಡೆದ ಹೆತ್ತವರ ಬಳಿ ಎಂದು ಗೊತ್ತಾದಾಗಿನಿಂದ ತನ್ನ ಸ್ವಂತ ತಾಯಿಯನ್ನು ನೋಡುವ ಹಂಬಲ ಶುರುವಾಗಿದೆ. ಕಳೆದ 10 ವರ್ಷದಿಂದ ಹುಡುಕಾಟ ಶುರು ಮಾಡಿದ ಅವರು, ಕೊನೆಗೆ ಭಾರತಕ್ಕೆ ಬಂದು ಹುಡುಕಾಟ ನಡೆಸುತ್ತಿದ್ದಾರೆ. ಭಾನುವಾರ ಕೂಡ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ| ಮರಿಯಾ, ತನ್ನ ತಾಯಿಯನ್ನು ಕಾಣಬೇಕೆಂಬ ಹಂಬಲವಿದೆ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದರು.

ಮೂಲತಃ ಮಂಗಳೂರು ಜಿಲ್ಲೆಯ ಉಳ್ಳಾಲ ಪಟ್ಟಣದ ಹಂಪಿಕಟ್ಟೆಯವರು. ಉಳ್ಳಾಲದ ಬಸವನಗುಡಿ ಬಳಿ ವಾಸವಿದ್ದ ತಾಯಿ ಗಿರಿಜಾ ಗಾಣಿಗ 1981ರಲ್ಲಿ ಜರ್ಮನಿಯ ಶ್ಚುಪ್‌ ದಂಪತಿಗೆ ಮಗಳನ್ನು ದತ್ತು ನೀಡಿದ್ದರು. ಅಲ್ಲಿಯೇ ವ್ಯಾಸಂಗ ಮುಗಿಸಿದ ಡಾ| ಮರಿಯಾ ಜರ್ಮನಿಯ ಡೈಬರ್ಗನ್‌ ಶಾಲೆಯೊಂದರ ಶಿಕ್ಷಕಿಯಾಗಿದ್ದರು. ತನ್ನ ತಾಯಿಯ ಕೆಲ ಸ್ನೇಹಿತರನ್ನು ವಿಚಾರಿಸಿದಾಗ ರಾಯಚೂರು ಜಿಲ್ಲೆಯಲ್ಲಿ ಇರಬಹುದು ಎಂದು ಹೇಳಿದ್ದಾರೆ. ಅದಕ್ಕಾಗಿ ಇಲ್ಲಿಗೆ ಬಂದಿರುವುದಾಗಿ ತಿಳಿಸಿದರು.

ಈ ಬಗ್ಗೆ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿ ತಾಯಿ ಹುಡುಕಲು ನೆರವಾಗುವಂತೆ ಮನವಿ ಮಾಡಿದ್ದು, 2009ರಲ್ಲಿ ನ್ಯಾಯಾಲಯದ ಆದೇಶದಂತೆ ರಾಜ್ಯ ಪೊಲೀಸ್‌ ಇಲಾಖೆಯೂ ತನ್ನ ಪ್ರಯತ್ನ ಮಾಡುತ್ತಿದೆ. ದತ್ತು ನೀಡಿದ ಶಾಲೆಯಲ್ಲೂ ತಾಯಿಯ ಮಾಹಿತಿಯಿಲ್ಲ. ಸಂಬಂ ಧಿಕರಿಗೂ ಅವಳ ಬಗ್ಗೆ ತಿಳಿದಿಲ್ಲ. ಆಗಿನ ಒಂದೇ ಒಂದು ಭಾವಚಿತ್ರ ನನ್ನಲ್ಲಿದೆ. ಅದನ್ನೇ ಆಧಾರವಾಗಿಸಿಕೊಂಡು ಸುತ್ತಾಟ ನಡೆಸಿದ್ದೇನೆ. ತನ್ನ ತಾಯಿಯ ಹುಡುಕಾಟದ ಹಂಬಲದಿಂದ ಭಾರತೀಯ ಮಹಿಳೆಯರ ಜನಜೀವನ ಎಂಬ ವಿಷಯದಲ್ಲಿ ಪಿಎಚ್‌.ಡಿ ಕೂಡ ಮಾಡಿದ್ದೇನೆ ಎಂದರು.

ತಾಯಿ ಗಿರಿಜಾ ಗಾಣಿಗ 10ನೇ ತರಗತಿ ಓದಿದ್ದು, ಈಗ ಅವರು ಆ ಊರಿನಲ್ಲಿಲ್ಲ. ಸ್ಥಳೀಯರನ್ನು ಕೇಳಿದರೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಅವರು ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲೆಲ್ಲ ಹುಡುಕಾಡಿದ್ದು, ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಸ್ಥಳೀಯ ಠಾಣೆಯಲ್ಲೂ ನಾಪತ್ತೆ ದೂರು ನೀಡಲಾಗಿದೆ. ಒಂದು ವೇಳೆ ರಾಜ್ಯದ ಬೇರೆ ಭಾಗಗಳಲ್ಲಿ ಇರಬಹುದೇ ಎಂಬ ನಿರೀಕ್ಷೆಯಲ್ಲಿ ಎಲ್ಲ ಕಡೆ ಹೋಗಿ ಹುಡುಕಾಟ ಮಾಡಲಾಗುತ್ತಿದೆ ಎಂದರು.

ನನಗೆ ವಿಷಯ ತಿಳಿದಾಗಿನಿಂದ ತಾಯಿಯನ್ನು ನೋಡಬೇಕೆಂಬ ಹಂಬಲ ದಿನೇದಿನೆ ಹೆಚ್ಚಾಯಿತು. 10 ವರ್ಷದಿಂದ ನಾನು ಹುಡುಕಾಟ ಶುರು ಮಾಡಿದ್ದೇನೆ. ಎನ್‌ಜಿಒ ಸಹಾಯದೊಂದಿಗೆ ಹುಡುಕಾಡುತ್ತಿದ್ದೇನೆ. ನನ್ನ ತಾಯಿಯನ್ನು ಒಮ್ಮೆಯಾದರೂ ನೋಡಬೇಕು ಎಂಬುದಷ್ಟೇ ನನ್ನ ಬಯಕೆ. ತಾಯಿ ಜತೆ ಉಳಿದ ಜೀವನ ಕಳೆಯುವಾಸೆ.
-ಡಾ| ಮರಿಯಾ ಛಾಯಾಶ್ಚುಪ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು/ ಮಂಗಳೂರು: ಹದಿನೈದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಪೊಲೀಸರು ರಾಜ್ಯಕ್ಕೆ ಕರೆತಂದಿದ್ದಾರೆ. ಪಶ್ಚಿಮ ಆಫ್ರಿಕಾದ...

  • ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಸಂಚಾರ ಸ್ಥಗಿತಗೊಳಿಸಿರುವ ಮಲೆನಾಡಿನ ಸಹಕಾರ ಸಾರಿಗೆಯನ್ನು ಕೆಎಸ್ಸಾರ್ಟಿಸಿ ಜತೆಗೆ ವಿಲೀನಗೊಳಿಸಬಹುದು ಎಂಬ ಅಭಿಪ್ರಾಯ...

  • ಬೆಂಗಳೂರು: ಜೂನ್‌ನಲ್ಲಿ ಖಾಲಿಯಾಗುವ ವಿಧಾನ ಪರಿಷತ್‌ ಸ್ಥಾನಗಳಿಗಾಗಿ ಮೂರು ಪಕ್ಷಗಳ ಆಕಾಂಕ್ಷಿಗಳು ಈಗಿನಿಂದಲೇ ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ. ಕಾಂಗ್ರೆಸ್‌...

  • ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ವಿಚಾರ, ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ,...

  • ಬೆಂಗಳೂರು: ವಿವಿಧ ಇಲಾಖೆಯ ಸಚಿವರು ಸುಲಭವಾಗಿ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕೆಂಬ ಸದುದ್ದೇಶದಿಂದ ಬಿಜೆಪಿ ಕೇಂದ್ರ ಕಚೇರಿಗೆ ವಾರಕ್ಕೆ...

ಹೊಸ ಸೇರ್ಪಡೆ

  • ಪುನೀತ್‌ರಾಜಕುಮಾರ್‌ ಅಭಿನಯದ "ಜೇಮ್ಸ್‌' ಶುರುವಾಗಿದ್ದು ಗೊತ್ತೇ ಇದೆ. ಸದ್ಯಕ್ಕೆ ಒಂದೆರೆಡು ಮಾತಿನ ದೃಶ್ಯ ಹಾಗು ಫೈಟ್‌ ಬಿಟ್‌ ಚಿತ್ರೀಕರಣಗೊಂಡಿದ್ದು,...

  • ನಟ ಧನಂಜಯ್‌ ಅಭಿನಯದ "ಪಾಪ್‌ಕಾರ್ನ್ ಮಂಕಿ ಟೈಗರ್‌' ಚಿತ್ರ ಮೂರು ದಿನಗಳ ಹಿಂದಷ್ಟೇ ತೆರೆಕಂಡಿದೆ. "ಟಗರು' ಚಿತ್ರದ ಸೂಪರ್‌ ಹಿಟ್‌ ಸಕ್ಸಸ್‌ ಬಳಿಕ ನಿರ್ದೇಶಕ "ದುನಿಯಾ'...

  • ಕನ್ನಡದಲ್ಲಿ ಹೊಸಬರ ಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಈಗ "ಒಂದು ಗಂಟೆಯ ಕಥೆ' ಕೂಡ ಸೇರಿದೆ. ಈಗಾಗಲೇ ಪೋಸ್ಟರ್‌ ಹಾಗು ಟ್ರೇಲರ್‌ ಬಿಡುಗಡೆಯಾಗಿದ್ದು,...

  • ಮನೆ ಕಟ್ಟುವುದು ಬಹುತೇಕ ಮಧ್ಯಮ ವರ್ಗದವರ ದೊಡ್ಡ ಕನಸು. ಈ ಖರ್ಚಿನ ಯುಗದಲ್ಲಿ ಸಾಲವಿಲ್ಲದೆ ಮನೆ ಕಟ್ಟಲು ಸಾಧ್ಯವಿಲ್ಲ. ಬ್ಯಾಂಕ್‌ಗಳಿಂದ ಪಡೆಯಬಹುದಾದ ಗೃಹ ಸಾಲಗಳಲ್ಲಿ...

  • ವೆಲ್ಲಿಂಗ್ಟನ್‌: ಪ್ರವಾಸಿ ಭಾರತ ತಂಡದೆದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಸುಭದ್ರ ಸ್ಥಿತಿಯಲ್ಲಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ...