ಜೀವನೋಪಾಯ, ಹವ್ಯಾಸಕ್ಕಾಗಿ ಹೊಳೆ -ಸಮುದ್ರ ತೀರದಲ್ಲಿ ನಡೆಯುತ್ತಿದೆ ಮೀನಿಗೆ ಗಾಳ

Team Udayavani, Jul 10, 2020, 5:56 AM IST

ಜೀವನೋಪಾಯ, ಹವ್ಯಾಸಕ್ಕಾಗಿ ಹೊಳೆ -ಸಮುದ್ರ ತೀರದಲ್ಲಿ ನಡೆಯುತ್ತಿದೆ ಮೀನಿಗೆ ಗಾಳ

ಮಲ್ಪೆ: ಮಳೆಗಾಲ ಬಂತೆಂದರೆ ಸಾಕು ಹೊಳೆಮೀನು, ಗಾಳದ ಮೀನಿಗೆ ಭಾರೀ ಬೇಡಿಕೆ.ಇದೀಗ ಮಳೆಗಾಲದ ಯಾಂತ್ರಿಕ ಮೀನುಗಾರಿಕೆ ನಿಷೇಧ ಸಂದರ್ಭದಲ್ಲಿ ಮೀನು ಪ್ರಿಯರಿಂದ ಹೊಳೆ, ಸಮುದ್ರದಲ್ಲಿ ಗಾಳ ಹಾಕಿ ಮೀನು ಹಿಡಿಯುವುದು, ಗದ್ದೆ ತೋಡುಗಳಲ್ಲಿ ಉಬೇರ್‌ ಮೀನು ಹಿಡಿಯುವ ಹವ್ಯಾಸ ಮುಂದುವರೆದಿದೆ.

ಕೆಲವರು ಹವ್ಯಾಸಕ್ಕಾಗಿ ಗಾಳ ಹಾಕಿದರೆ ಇನ್ನು ಕೆಲವರು ಜೀವನೋಪಯಕ್ಕಾಗಿ ಗಾಳ ಹಾಕಿ ಮೀನು ಹಿಡಿದು ಮಾರಾಟ ಮಾಡುವುದುದನ್ನು ಕಾಣಬಹುದಾಗಿದೆ.

ಸಮುದ್ರದ ತಾಜಾ ಮೀನು ಸಿಗದ ಕಾರಣ ಬಹುತೇಕ ಮಂದಿ ಹೊಳೆ ಬದಿ ಯಲ್ಲಿ ಸೇತುವೆ ಮೇಲಾºಗದಲ್ಲಿ ನಿಂತು ಗಾಳ ಹಾಕುವವರು ಕಾಣ ಸಿಗುತ್ತಾರೆ. ಗಾಳಕ್ಕೆ ಮೀನು ಸಿಕ್ಕಿಕೊಂಡಾಗ ಆಗುವ ಖುಷಿ ಅಷ್ಟಿಷ್ಟಲ್ಲ. ಮೀನು ತಿನ್ನುವುದಕ್ಕಿಂತ ಹಿಡಿ ಯು ವುದು ಒಂದು ಮನರಂಜನೆ ನೀಡು ತ್ತದೆ. ನಾನಾ ತರದ ಗಾಳದಲ್ಲಿ ಬಗೆ ಬಗೆಯ ಮೀನು ಹಿಡಿಯಲಾಗುತ್ತದೆ. ಅದ ರಲ್ಲೂ ನಗರ ಪ್ರದೇಶದ ಮಂದಿಗೆ ಗಾಳ ಹಾಕಿ ಮೀನು ಹಿಡಿಯುವಲ್ಲಿ ಆಸಕ್ತಿ ಹೆಚ್ಚು.

ಇಲ್ಲಿ ವರ್ಷದ 365 ದಿನವೂ ಗಾಳ
ಮಲ್ಪೆ ಬಂದರು ಸಮೀಪದ ಸೀ-ವಾಕ್‌ ಬಳಿಯಲ್ಲಿ ವರ್ಷದ 365ದಿನವೂ ಗಾಳ ಹಾಕಿ ಮೀನು ಹಿಡಿಯುವ ಬಹಳಷ್ಟು ಮಂದಿ ಕಾಣಸಿಗುತ್ತಾರೆ. ಗುಂಪು ಗುಂಪಾಗಿ ಸಮುದ್ರ ತಡಿಯಲ್ಲಿ ಗಾಳ ಹಾಕಿ ಮೀನು ಹಿಡಿಲೆಂದು ಇಲ್ಲಿಗೆ ಬಂದು ಸೇರುತ್ತಾರೆ. ಹಿಂದೆ ಕೈ ಗಾಳದಲ್ಲಿ ಮಾತ್ರ ಮೀನು ಹಿಡಿಯಲಾಗುತ್ತಿದ್ದು ಇದೀಗ ಆಧುನಿಕ ಸಲಕರಣೆಗಳು ಬಂದಿವೆ.

ಪರಿಣಿತರಿಂದ ಗಾಳ
ಗಾಳದಲ್ಲಿ ಸಾಕಷ್ಟು ಪರಿಣತೆಯನ್ನು ಹೊಂದಿದ ನಾಗೇಶ್‌ ಕುಮಾರ್‌ ಉದ್ಯಾವರ, ಸೂರ್ಯ ಕೊಳ, ಪ್ರಶಾಂತ್‌ ಮಲ್ಪೆ, ಅಭಿಕೊಳ, ಅಶ್ರಫ್‌ ಮಲ್ಪೆ, ಬಸಂತ್‌ ಕುಮಾರ್‌, ಕಾಂತರಾಜ್‌, ಸಂದೀಪ್‌ ಕುಂದರ್‌ ಅವರುಗಳು ಕಳೆದ ಕೆಲವು ವರ್ಷಗಳಿಂದ ಸೀ ವಾಕ್‌ ಸಮೀಪದ ಕಲ್ಲಿನಲ್ಲಿ ಆಧುನಿಕ ಸಲಕರಣೆಯನ್ನು (ಸ್ಪಿನ್ನಿಂಗ್‌ ಸ್ಟಿಕ್‌) ಬಳಸಿಕೊಂಡು ಗಾಳ ಹಾಕುತ್ತಾರೆ. 6ರಿಂದ 20ಕೆ.ಜಿ. ತೂಕದ ಕೆಂಬೆರಿ, ಮುರು ಮೀನು, ಕುಲೇಜ್‌, ಆಂಬಾಯಿ, ಕೋಂದೊಲು ಮೀನುಗಳನ್ನು ಹಿಡಿಯುತ್ತಾರೆ. ಕೈ-ಗಾಳದಲ್ಲಿ ಕಂಡಿಗೆ, ಕಲ್ಲರ್‌, ಬರಾಯಿ, ಕೊಕ್ಕರ್‌, ಬಯ್ಯ, ನಂಗ್‌ ಮೀನುಗಳನ್ನು ಹಿಡಿಯಲಾಗುತ್ತದೆ.

ಎಲ್ಲ ಸಮಯದಲ್ಲಿ ಗಾಳಕ್ಕೆ ಮೀನು ಹಿಡಿಯುವುದಿಲ್ಲ. ನೀರಿನ ಇಳಿತ ಭರತವನ್ನು ಅವಲಂಬಿಸಿರುತ್ತದೆ. ನೀರು ಇಳಿತದಿಂದ ಭರತವಾಗುವಾಗ ಮತ್ತು ಭರತದಿಂದ ಇಳಿತವಾಗುವ ಸಮಯದಲ್ಲಿ ಮೀನುಗಳು ಆಹಾರ ಅರಸುತ್ತಾ ದಂಡೆ ಬಳಿ ಬರುತ್ತದೆ. ಈ ಸಮಯದಲ್ಲಿ ಹೆಚ್ಚು ಮೀನು ಗಾಳಕ್ಕೆ ಬೀಳುತ್ತದೆ. ನೀರು ಬಿಸಿಯಾಗಿದ್ದರೆ ಉತ್ತಮ ತಣ್ಣಗಿದ್ದರೆ ಮೀನು ಹತ್ತಿರ ಬರುವುದಿಲ್ಲ ಎನ್ನುತ್ತಾರೆ ಗಾಳದ ಅನುಭವಿ ದಯಾನಂದ ಅವರು.

ಉಬೇರ್‌ ಮೀನುಗಳ ಬೇಟೆ
ಇನ್ನು ಮಳೆ ನೀರು ಮೇಲೇರಿ ಬರುತ್ತಿದ್ದಂತೆ ಗದ್ದೆ , ತೋಡು, ಹೊಳೆಸಾಲು ಭಾಗದಲ್ಲಿ ಮೀನುಗಳು ಇರುವುದು ಗಮನಕ್ಕೆ ಬಂದಾಗ ಮೀನು ಪ್ರಿಯರ ತಂಡ ಶಿಕಾರಿಗೆ ಮುಂದಾಗುತ್ತಾರೆ. ಈ ವೇಳೆ ಉಬೇರ್‌ ಮೀನುಗಳು ಜಾಡು ಹಿಡಿದು ಮೇಲೇರಿ ಬರುತ್ತವೆ. ಹೊಳೆ ತೀರದ ಗದ್ದೆಗಳಲ್ಲಿ , ತೋಡು ಗಳಲ್ಲಿ ಮೀನು ಹಿಡಿಯಲು ಹಗಲು ರಾತ್ರಿ ಎನ್ನದೆ ಬಲೆ ಕತ್ತಿ ಹಿಡಿದು ಅಲೆದಾಡುತ್ತಾರೆ. ನೀರಿನ ಅಡಿಯಲ್ಲಿ ವೇಗವಾಗಿ ಚಲಿಸುವ ವಿವಿಧ ಜಾತಿಯ ಮೀನನ್ನು ನೋಟವಿಟ್ಟು ಕಡಿಯುವುದು ರೋಮಾಂಚಕ ಅನುಭವ ಮುಗುಡು, ಕಿಜನ್‌, ಚೀಂಕಡೆ, ಮಾಲಯಿ, ಕಂಡಿಗೆ ಬಯ್ಯ ಮೀನುಗಳು ಸಿಗುತ್ತವೆ.

ಟಾಪ್ ನ್ಯೂಸ್

1-pp

ಮಹಿಳಾ ಪೇದೆಯ ಲಿಂಗ ಬದಲಾವಣೆಗೆ ಗೃಹ ಇಲಾಖೆ ಅನುಮತಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 620 ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 620 ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

ರಾಮಲಿಂಗಾರೆಡ್ಡಿ

ಯಾವ ಸಮಯದಲ್ಲಿ ಏನು ಮಾಡಬೇಕೆಂಬ ಪ್ರಜ್ಞೆ ಬಿಜೆಪಿಯವರಿಗಿಲ್ಲ: ರಾಮಲಿಂಗಾರೆಡ್ಡಿ

“ಎಲ್ಲರಿಗೂ ಧನ್ಯವಾದ.. ಮತ್ತೊಮ್ಮೆ ಭೇಟಿಯಾಗೋಣ” ಎಂದ ಕೆ.ಎಲ್.ರಾಹುಲ್

“ಎಲ್ಲರಿಗೂ ಧನ್ಯವಾದ.. ಮತ್ತೊಮ್ಮೆ ಭೇಟಿಯಾಗೋಣ” ಎಂದ ಕೆ.ಎಲ್.ರಾಹುಲ್

1-fsf

ಗೋವಾದಿಂದ ಕರ್ನಾಟಕ ಪ್ರವೇಶ: ಚೆಕ್‍ಪೋಸ್ಟ್ ನಲ್ಲಿ ತಪಾಸಣೆ ತೀವ್ರ

ಒಮಿಕ್ರಾನ್ ಆತಂಕ: ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭ ಮುಂದೂಡಿಕೆ: ಕೇಂದ್ರ

ಒಮಿಕ್ರಾನ್ ಆತಂಕ: ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭ ಮುಂದೂಡಿಕೆ: ಕೇಂದ್ರ

ವರಿಷ್ಠರ ಆಶೀರ್ವಾದ ಇಲ್ಲದಿದ್ದರೆ ನನ್ನನ್ನು ಮುಗಿಸಿ ಬಿಡುತ್ತಿದ್ದರು: ಜಾರಕಿಹೊಳಿ ಹೊಸ ಬಾಂಬ್

ವರಿಷ್ಠರ ಆಶೀರ್ವಾದ ಇಲ್ಲದಿದ್ದರೆ ನನ್ನನ್ನು ಮುಗಿಸಿ ಬಿಡುತ್ತಿದ್ದರು: ಜಾರಕಿಹೊಳಿ ಹೊಸ ಬಾಂಬ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ಪಡಿತರ ಮೂಲಕ ಸ್ಥಳೀಯ ಕುಚ್ಚಲಕ್ಕಿ ಸದ್ಯ ಸಿಗದು

ಪಡಿತರ ಮೂಲಕ ಸ್ಥಳೀಯ ಕುಚ್ಚಲಕ್ಕಿ ಸದ್ಯ ಸಿಗದು

ಅಕ್ರಮ ಮರಳುಗಾರಿಕೆ: ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿ

ಅಕ್ರಮ ಮರಳುಗಾರಿಕೆ: ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿ

ಮಾರ್ಗಸೂಚಿಯಂತೆ ಪರ್ಯಾಯೋತ್ಸವ: ರಘುಪತಿ ಭಟ್‌

ಮಾರ್ಗಸೂಚಿಯಂತೆ ಪರ್ಯಾಯೋತ್ಸವ: ರಘುಪತಿ ಭಟ್‌

ಮಾಸ್ಕ್ ಧರಿಸದಿದ್ದರೆ ದಂಡ, ಜಿಲ್ಲೆಯಾದ್ಯಂತ ಮಾಸ್ಕ್ ಡ್ರೈವ್‌ : ಉಡುಪಿ ಜಿಲ್ಲಾಧಿಕಾರಿ

ಮಾಸ್ಕ್ ಧರಿಸದಿದ್ದರೆ ದಂಡ, ಜಿಲ್ಲೆಯಾದ್ಯಂತ ಮಾಸ್ಕ್ ಡ್ರೈವ್‌ : ಉಡುಪಿ ಜಿಲ್ಲಾಧಿಕಾರಿ

MUST WATCH

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

ಹೊಸ ಸೇರ್ಪಡೆ

1-pp

ಮಹಿಳಾ ಪೇದೆಯ ಲಿಂಗ ಬದಲಾವಣೆಗೆ ಗೃಹ ಇಲಾಖೆ ಅನುಮತಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 620 ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 620 ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

ರಾಮಲಿಂಗಾರೆಡ್ಡಿ

ಯಾವ ಸಮಯದಲ್ಲಿ ಏನು ಮಾಡಬೇಕೆಂಬ ಪ್ರಜ್ಞೆ ಬಿಜೆಪಿಯವರಿಗಿಲ್ಲ: ರಾಮಲಿಂಗಾರೆಡ್ಡಿ

“ಎಲ್ಲರಿಗೂ ಧನ್ಯವಾದ.. ಮತ್ತೊಮ್ಮೆ ಭೇಟಿಯಾಗೋಣ” ಎಂದ ಕೆ.ಎಲ್.ರಾಹುಲ್

“ಎಲ್ಲರಿಗೂ ಧನ್ಯವಾದ.. ಮತ್ತೊಮ್ಮೆ ಭೇಟಿಯಾಗೋಣ” ಎಂದ ಕೆ.ಎಲ್.ರಾಹುಲ್

1-fsf

ಗೋವಾದಿಂದ ಕರ್ನಾಟಕ ಪ್ರವೇಶ: ಚೆಕ್‍ಪೋಸ್ಟ್ ನಲ್ಲಿ ತಪಾಸಣೆ ತೀವ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.